ಹಸಿ ಕೋಳಿ ಮಾಂಸ ತಿಂತಾನೆ ಈ ಪುಟ್ಟ ಬಾಲಕ: ನರಭಕ್ಷ ಆಗ್ತಾನೆ ಹುಷಾರ್ ಎಂದ ನೆಟ್ಟಿಗರು
ಹಸಿ ಮಾಂಸ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ವೈದ್ಯರು ಕೂಡ ಮೀನು, ಮೊಟ್ಟೆ, ಕೋಳಿ, ಕುರಿ ಸೇರಿದಂತೆ ತಿನ್ನಬಹುದಾದ ಮಾಂಸಗಳನ್ನು ಬೇಯಿಸಿಯೇ ತಿನ್ನುವಂತೆ ಸಲಹೆ ನೀಡುತ್ತಾರೆ. ಅದರಲ್ಲೂ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಅರ್ಧಂಬರ್ಧ ಬೇಯಿಸಿದ ಹಾಗೂ ಹಸಿ ಮಾಂಸಗಳನ್ನು ಸೇವಿಸಬಾರದು. ಆದರೆ ಇಲ್ಲೊಬ್ಬ ಪುಟ್ಟ ಬಾಲಕ ಹಸಿ ಕೋಳಿ ಮಾಂಸವನ್ನೇ ತಿನ್ನುತ್ತಾನೆ.
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತದೆ. ಹಾಗೂ ನೋಡಲು ಖುಷಿ ಕೊಡುತ್ತದೆ. ಆದರೆ ಈ ವಿಡಿಯೋ ನೋಡಿದವರು ಶಾಕ್ ಆಗಿದ್ದು, ಬಾಲಕನಿಗೆ ವಿಚಿತ್ರ ಅಭ್ಯಾಸ ರೂಢಿ ಮಾಡಿಸಿದ ಪೋಷಕರಿಗೆ ಖಡಕ್ ಆಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ರಮೇಶ್ ಒನ್ ಟಿ( Ramesh1t) ಎನ್ನುವ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಬಾಲಕ ಹಸಿ ಮಾಂಸ ತಿನ್ನುವ ವಿಡಿಯೋ ಶೇರ್ ಮಾಡಲಾಗಿದ್ದು, ಇದೀಗ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಬಾಲಕನಿಗೆ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹಸಿ ಕೋಳಿ ಮಾಂಸವನ್ನು ನೀಡಲಾಗಿದೆ. ಬಾಲಕ ಒಂದೊಂದೇ ಹಸಿ ಮಾಂಸದ ತುಂಡನ್ನು ತೆಗೆದುಕೊಂಡು ಚಪ್ಪರಿಸಿ ತಿನ್ನುತ್ತಾನೆ. ಕವರ್‌ನಲ್ಲಿದ್ದ ತನಗಿಷ್ಟವಾದ ಮಾಂಸದ ತುಂಡನ್ನು ತೆಗೆದುಕೊಂಡು ಬಾಲಕ ತಂದೆಯೊಡನೆ ಮಾತನಾಡುತ್ತಲೇ ತಿನ್ನುತ್ತಾನೆ. ಈತನ ಪೋಷಕರು ಹತ್ತಿರದಲ್ಲೇ ಇದ್ದು, ಅವರ ಸಂಭಾಷಣೆಯನ್ನು ಕೂಡ ಈ ವಿಡಿಯೋದಲ್ಲಿ ಕೇಳಬಹುದಾಗಿದೆ.
ತನ್ನ ಮಗ ಹಸಿ ಕೋಳಿ ಮಾಂಸ ತಿನ್ನುವ ವಿಡಿಯೋವನ್ನು ಆತನ ತಂದೆ ಶೇರ್ ಮಾಡಿದ್ದು, ಹಸಿ ಚಿಕನ್ ತಿನ್ನುತ್ತಿರುವ ನನ್ನ ಮಗ, ಇವನಿಗೆ ಚಿಕನ್ ಅಂದ್ರೆ ಇಷ್ಟ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ನೆಟ್ಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯ ವಿಡಿಯೋಗಳನ್ನು ಮಾಡಿದ್ದೀರಲ್ಲಾ, ನಿಮಗೆ ಬುದ್ಧಿ ಇಲ್ವಾ. ಆ ಮಗುವಿಗೆ ನೀವು ಬುದ್ಧಿ ಹೇಳಬೇಕು. ಅದನ್ನು ಬಿಟ್ಟು ನೀವೇ ಹಸಿ ಮಾಂಸ ಕೊಟ್ಟು ನೀವೇ ವಿಡಿಯೋ ಮಾಡುವುದು ಎಷ್ಟು ಸರಿ ಎಂದಿದ್ದಾರೆ.
ಇನ್ನು ಹಲವಾರು ಜನರು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಹಸಿ ಮಾಂಸ ಸೇವನೆಯಿಂದ ಕರಳು ಹುಣ್ಣಾಗುತ್ತದೆ. ಕ್ಯಾನ್ಸರ್ ಬರುತ್ತದೆ. ಇಂತಹ ವಿಡಿಯೋಗಳನ್ನು ಮಾಡಬೇಡಿ ಎಂದಿದ್ದಾರೆ. ಇನ್ನು ಕೆಲವರು ಕೋಪದಿಂದ ಈ ರೀತಿಯ ಅಭ್ಯಾಸ ಮುಂದುವರಿಸಿದರೆ, ನಾಳೆ ದಿನ ನರ ಭಕ್ಷಕನಾಗುತ್ತಾನೆ. ಹಸಿ ಮಾಂಸ ಸೇವನೆಯನ್ನೇ ಹೆಚ್ಚಿಸಿಕೊಳ್ಳಬಹುದು ಎಂದು ವಿಡಿಯೋ ಶೇರ್ ಮಾಡಿದ ಮಗುವಿನ ತಂದೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆ ಹಾಕಲಾದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಯಾವ ಪೋಷಕರು ಹೀಗೆ ಮಾಡಬೇಡಿ ಎಂದು ನೋಡುಗರು ಮನವಿ ಮಾಡಿದ್ದಾರೆ.











Click it and Unblock the Notifications