ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಲ ಮತ್ತು ಆಮೆ ಕಥೆಯ ನೆನಪು: ವೇಗವಾಗಿ ಓಡುವ ಆಮೆಯ ವಿಡಿಯೋ ವೈರಲ್

|
Google Oneindia Kannada News

ಸಾಮಾನ್ಯವಾಗಿ ಮೊಲ ಮತ್ತು ಆಮೆಯ ಕಥೆಯನ್ನು ನೀವು ಕೇಳಿರಬಹುದು. ಈ ಕಥೆಯ ಸಾರಾಂಶವನ್ನು ಸರಳವಾಗಿ ಹೇಳಬೇಕು ಅಂದರೆ, ವೇಗವಾಗಿ ಆಮೆಗೆ ಓಡಲು ಆಗುವುದಿಲ್ಲ ಎನ್ನುವ ನಂಬಿಕೆಯಿಂದ ಮೊಲ ಆಮೆಗೆ ಓಟದ ಸವಾಲು ಹಾಕಿತು. ಜೋರಾಗಿ ಓಡಿದ ಮೊಲ ಹಿಂದೆ ತಿರುಗಿ ನೋಡಿ ಆಮೆ ಕಾಣದಿದ್ದಾಗ ಕೊಂಚ ವಿಶ್ರಾಂತಿ ಪಡೆಯಿತು. ಆಗ ಆಮೆ ಮೊಲಕ್ಕಿಂತ ಮೊದಲು ಗುರಿಯನ್ನು ತಲುಪಿ ಜಯ ಸಾಧಿಸಿತು. ಇಲ್ಲಿ ಆಮೆಗೆ ಓಡಲು ಬರುವುದಿಲ್ಲ ಅದು ತುಂಬಾ ನಿಧಾನವಾಗಿ ನಡೆಯುತ್ತದೆ ಎನ್ನುವುದು ಹೆಚ್ಚು ಬಿಂಬಿತವಾಗಿದೆ. ಆದರೆ ಈ ಕಥೆಯನ್ನೇ ಇಲ್ಲೊಂದು ಆಮೆ ಉಲ್ಟಾ ಮಾಡಿಬಿಟ್ಟಿದೆ. ಯಾಕೆಂದ್ರೆ ಆಮೆಗಳು ತುಂಬಾ ವೇಗದಲ್ಲಿ ಹೋಗಬಲ್ಲವು ಎನ್ನುವ ಮಾತು ಈ ವೈರಲ್ ವಿಡಿಯೋದ ಮೂಲಕ ತಿಳಿದು ಬರುತ್ತದೆ.

ಬಾಲ್ಯದಿಂದಲೂ ನಾವು ಮೊಲ ಮತ್ತು ಆಮೆಗಳ ಕಥೆಯನ್ನು ಕೇಳುತ್ತಿದ್ದೇವೆ. ಇದರಲ್ಲಿ ಆಮೆಯ ನಿಧಾನ ಚಲನೆಯನ್ನು ಉಲ್ಲೇಖಿಸಲಾಗಿದೆ. ಇಷ್ಟು ಮಾತ್ರವಲ್ಲದೆ ನಾವು ಇಲ್ಲಿಯವರೆಗೆ ನೋಡಿದ ಎಲ್ಲಾ ಆಮೆಗಳು ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಆದರೆ, ಆಮೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಆಮೆಯ ವೇಗದ ಓಟವನ್ನು ನೋಡಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಆಮೆಯ ಓಟ ನೋಡಿ

ಆಮೆಯ ಓಟ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿಯೂ ಅಚ್ಚರಿ ವ್ಯಕ್ತಪಡಿಸಿ ಇದನ್ನೇ ಬರೆದಿದ್ದಾರೆ. ಆಮೆ ಇಷ್ಟು ವೇಗವಾಗಿ ಓಡುವುದನ್ನು ನೀವು ಹಿಂದೆಂದೂ ನೋಡಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಬರೆದಿದ್ದಾರೆ. ಆಮೆಯ ದೇಹದ ಮೇಲೆ ದಪ್ಪ ಚಿಪ್ಪಿನ ಕಾರಣ, ಅದರ ವೇಗವು ತುಂಬಾ ನಿಧಾನವಾಗಿರುತ್ತದೆ. ಆದರೆ ನಾವು ಇಲ್ಲಿಯವರೆಗೆ ನೋಡಿದ್ದು ಮತ್ತು ಓದಿದ್ದು ಸಂಪೂರ್ಣವಾಗಿ ತಪ್ಪು ಎಂದು ಈ ವಿಡಿಯೊವನ್ನು ನೋಡಿದ ನಂತರ ಸಾಬೀತಾಗಿದೆ.

ಆಮೆ ನಿಧಾನ ಅನ್ನೋರು ಈ ವಿಡಿಯೋ ನೋಡಿ

ಆಮೆ ನಿಧಾನ ಅನ್ನೋರು ಈ ವಿಡಿಯೋ ನೋಡಿ

ವಿಡಿಯೋದಲ್ಲಿ ಗಟ್ಟಿಮುಟ್ಟಾದ ಆಮೆ ​​ಹುಲ್ಲಿನ ಮೇಲೆ ವೇಗವಾಗಿ ಓಡುತ್ತದೆ. ನೆದರ್‌ಲ್ಯಾಂಡ್‌ನ ಬ್ಯುಟೆಂಗೆಬೀಡೆನ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗಟ್ಟಿಮುಟ್ಟಾದ ಆಮೆಯು ಹಸಿರು ಹುಲ್ಲಿನ ಮೈದಾನದಲ್ಲಿ ವೇಗವಾಗಿ ಓಡುತ್ತಿರುವುದನ್ನು ಕಾಣಬಹುದು.

ವೇಗವಾಗಿ ಓಡುವ ಆಮೆ

ಈ ಆಮೆ ನಮ್ಮ ಪಠ್ಯಕ್ರಮವನ್ನೇ ಬದಲಿಸಿದೆ. ಹುಲ್ಲಿನ ಮೇಲೆ ವೇಗವಾಗಿ ಓಡುತ್ತಿರುವ ಆಮೆ ನದಿಗೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿಡಿಯೊವನ್ನು ನೋಡಿದ ನಂತರ ಹೆಚ್ಚಿನ ಬಳಕೆದಾರರು ಆಮೆ ಮತ್ತು ಮೊಲದ ಕಥೆಯನ್ನು ಸುಳ್ಳಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಆಮೆ ನಮ್ಮ ಪಠ್ಯಕ್ರಮವನ್ನು ಬದಲಾಯಿಸಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಈ ಆಮೆ ಚಿರತೆಗಿಂತ ವೇಗವಾಗಿ ಓಡುತ್ತದೆ.

'ಆಮೆ ಚಿರತೆಗಿಂತ ವೇಗವಾಗಿ ಓಡುತ್ತದೆ'

'ಆಮೆ ಚಿರತೆಗಿಂತ ವೇಗವಾಗಿ ಓಡುತ್ತದೆ'

10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾದ ಈ ವಿಡಿಯೊವನ್ನು ನೋಡಿದ ಬಳಕೆದಾರರು ಈ ಆಮೆ ಚಿರತೆಗಿಂತ ವೇಗವಾಗಿ ಓಡುತ್ತದೆ ಎಂದು ಬರೆದಿದ್ದಾರೆ. ಆಮೆ ತುಂಬಾ ನಿಧಾನವಾಗಿ ನಡೆಯುತ್ತದೆ ಎಂದು ನಾವು ಬಾಲ್ಯದಿಂದಲೂ ಓದಿದ್ದೇವೆ ಎಂದು ಒಬ್ಬರು ಬರೆದಿದ್ದಾರೆ. ಆದರೆ ಅದು ನಮಗೆಲ್ಲ ತಪ್ಪು ತಿಳಿವಳಿಕೆ ಎಂದು ಸಾಬೀತಾಗಿದೆ.

English summary
Remember story of the rabbet and tortoise: A video of a turtle running fast has gone viral and people are surprised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X