ಅಜ್ಜಾ... ನಿನಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಮುಸುಮುಸು ನಕ್ಕ ನೆಟ್ಟಿಗರು....
ಭೋಪಾಲ್ ಜನವರಿ 30: ಇತ್ತೀಚೆಗೆ ಇಳಿ ವಯಸ್ಸಿನಲ್ಲಿ ಮದುವೆಯಾಗುವ ಘಟನೆಗಳು ಹೆಚ್ಚು ವೈರಲ್ ಆಗುತ್ತಿವೆ. ಹಲ್ಲು ಬೀಳುವ ಹಾಗೂ ಎದ್ದು ಓಡಾಡಲು ಶಕ್ತಿ ಇಲ್ಲದ ವಯಸ್ಸಿನಲ್ಲಿ ಕೆಲ ಜನ ದಾಂಪತ್ಯ ಜೀವನಕ್ಕೆ ಕಾಲಿಡುವುದು ಕಂಡು ಬರುತ್ತಿದೆ. ವಯಸ್ಸಿನ ಅಂತರದ ಬಗ್ಗೆ ತಲೆಕೆಡಿಸಿಕೊಳ್ಳದ ಕೆಲ ಮಂದಿ ತಮಗಿಂತ ಕಡಿಮೆ ವಯಸ್ಸಿನವರೊಂದಿಗೆ ಮದುವೆಯಾಗುತ್ತಿದ್ದಾರೆ. ಸದ್ಯ ಇಂಥಹದ್ದೇ ಘಟನೆಯೊಂದು ಭೋಪಾಲ್‌ನಲ್ಲಿ ನಡೆದಿದೆ.
103 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್ ಅವರು 49 ವರ್ಷದ ಫಿರೋಜ್ ಜಹಾನ್ ಅವರನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ಅವರ ಮೂರನೇ ಮದುವೆಯಾಗಿದೆ. 54 ವರ್ಷ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಮಾರಂಭದ ನಂತರ ಹಬೀಬ್ ನಜರ್ ಅವರು ಆಟೋ ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹ ಸಂಚಲನ ಮೂಡಿಸಿದೆ. ಹಬೀಬ್ ನಜರ್ ಅವರು ಭೋಪಾಲ್‌ನ ಇತ್ವಾರಾ ಪ್ರದೇಶದಲ್ಲಿ ಫಿರೋಜ್ ಜಹಾನ್ ಅವರನ್ನು ವಿವಾಹವಾಗಿದ್ದಾರೆ.
103 ವರ್ಷದ ವ್ಯಕ್ತಿಗೆ ಮದುವೆ
ಎರಡನೇ ಪತ್ನಿ ತೀರಿಕೊಂಡ ನಂತರ ಒಂಟಿತನ ಅನುಭವಿಸಿದ ನಾಜರ್ ಮೂರನೇ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ತಮಗಿಂತ 54 ವರ್ಷ ವಯಸ್ಸಿನ ಅಂತರವಿರುವ ಮಹಿಳೆಯೊಂದಿಗೆ ಕಳೆದ ವರ್ಷ ಮಾತುಕತೆ ಮಾಡಿಕೊಂಡಿದ್ದರು. ಇತ್ತೀಚೆಗೆ ಅವರ ನಿಕಾಹ್ ಸಮಾರಂಭದ ನಂತರ ನಾಜರ್ ಮತ್ತು ಜಹಾನ್ ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗಿದ ವೀಡಿಯೊ ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ.
ವೈರಲ್ ವೀಡಿಯೊದಲ್ಲಿ ನಾಜರ್ ಮಾತನಾಡಿರುವುದನ್ನು ಕೇಳಬಹುದು. "ಕಿಸಿ ಚೀಜ್ ಕಿ ಕಾಮಿ ನಹೀ ಹೈ. ಕಾಮಿ ಹಮಾರೆ ದಿಲೋನ್ ಮೇ ಹೈ (ಯಾವುದಕ್ಕೂ ಕೊರತೆಯಿಲ್ಲ. ಕೊರತೆ ನಮ್ಮ ಹೃದಯದಲ್ಲಿದೆ)'' ಎಂದು ಅವರು ಹೇಳಿದ್ದಾರೆ. ದಂಪತಿಗಳ ಹೊಸ ಪ್ರಯಾಣಕ್ಕಾಗಿ ಜನರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಹಬೀಬ್ ನಜರ್ ಬಗ್ಗೆ
ನಾಜರ್ ಮೊದಲ ಬಾರಿಗೆ ನಾಸಿಕ್‌ನಲ್ಲಿ ವಿವಾಹವಾದರು. ಅವರ ಮೊದಲ ಪತ್ನಿ ನಿಧನರಾದ ನಂತರ, ಅವರು ಲಕ್ನೋದಲ್ಲಿ ಎರಡನೇ ಬಾರಿಗೆ ವಿವಾಹವಾದರು.
"ನನಗೆ 103 ವರ್ಷ, ಮತ್ತು ನನ್ನ ಹೆಂಡತಿಗೆ 49 ವರ್ಷ. ನಾನು ನಾಸಿಕ್‌ನಲ್ಲಿ ಮೊದಲ ಬಾರಿಗೆ ಮದುವೆಯಾದೆ. ಅವಳು ತೀರಿಕೊಂಡ ನಂತರ, ನಾನು ಮತ್ತೆ ಮದುವೆಯಾಗಲು ಲಕ್ನೋಗೆ ಹೋಗಿದ್ದೆ. ನನ್ನ ಎರಡನೇ ಹೆಂಡತಿಯೂ ಪರಲೋಕಕ್ಕೆ ಹೊರಟು ಹೋದಳು. ನನಗೆ ಒಂಟಿತನ ಕಾಡುತ್ತಿತ್ತು. ಹಾಗಾಗಿ ನಾನು ಮತ್ತೆ ಮದುವೆಯಾಗಿದ್ದೇನೆ'' ಎಂದು ನಾಜರ್ ಹೇಳಿದರು.
ಪತಿಯ ನಿಧನದ ನಂತರ ಜಹಾನ್ ಕೂಡ ಒಂಟಿಯಾಗಿ ವಾಸಿಸುತ್ತಿದ್ದಳು. 103 ವರ್ಷದ ನಾಜರ್‌ನನ್ನು ಮದುವೆಯಾಗುವುದು ತನ್ನ ನಿರ್ಧಾರವಾಗಿತ್ತು. ಅವರನ್ನು ಮದುವೆಯಾಗುವಂತೆ ಯಾರೂ ಒತ್ತಾಯಿಸಲಿಲ್ಲ ಎಂದು ಜಹಾನ್ ಅವರು ಹೇಳಿದರು. "ನನ್ನ ಪತಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರಿಗೆ ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲ" ಎಂದು ಅವರು ಹೇಳಿದರು.












Click it and Unblock the Notifications