
7ನೇ ವೇತನ ಆಯೋಗ: ಕೇಂದ್ರ ನೌಕರರ 18 ತಿಂಗಳ ಡಿಎ ಬಾಕಿ ನವೆಂಬರ್‌ನಲ್ಲಿ ಘೋಷಣೆ ಸಾಧ್ಯತೆ?
ಕೇಂದ್ರದ ಉದ್ಯೋಗಿಗಳಿಗೆ ಸಂತಸದ ಸುದ್ದಿಯಿದೆ. ತುಟ್ಟಿಭತ್ಯೆಯ (7ನೇ ವೇತನ ಆಯೋಗ) ಬಾಕಿಯಿರುವ ದಿನಾಂಕವನ್ನು ದೃಢೀಕರಿಸಲಾಗಿದೆ. 18 ತಿಂಗಳ ಬಾಕಿ ಇರುವ ಬಾಕಿಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ದಿನಾಂಕ ಘೋಷಣೆಯನ್ನು ಮಾಡುವುದು ಮಾತ್ರ ಬಾಕಿ ಉಳದಿದೆ.
ಇದೇ ನವೆಂಬರ್‌ನಲ್ಲಿ ಸಂಪುಟ ಕಾರ್ಯದರ್ಶಿ ಜೊತೆ ಒಕ್ಕೂಟ ಸಭೆ ನಡೆಯಲಿದೆ. ಆದರೆ, ಸಂಪುಟ ಕಾರ್ಯದರ್ಶಿಯೊಂದಿಗಿನ ಸಭೆಯ ಫಲಿತಾಂಶ ಏನಾಗುತ್ತದೆ ಎಂದು ಹೇಳುವುದು ಕಷ್ಟ.
Infographics: ತುಟ್ಟಿಭತ್ಯೆ ಹೆಚ್ಚಳ ನಂತರ ಸರ್ಕಾರಿ ನೌಕರರಿಗೆ ಯಾರಿಗೆ ಎಷ್ಟು ಸಂಬಳ?
ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟ ನೌಕರರ ತುಟ್ಟಿಭತ್ಯೆಗೆ ಅನುಮೋದನೆ ನೀಡಿತ್ತು. ಅವರ ತುಟ್ಟಿಭತ್ಯೆ ಶೇ.38ಕ್ಕೆ ಏರಿದೆ. ಈ ಬಾರಿ ಶೇ.4ರಷ್ಟು ಹೆಚ್ಚಳವಾಗಿದೆ.
ಆದರೆ, ಈಗ 18 ತಿಂಗಳ ಬಾಕಿಯ ಬಗ್ಗೆ ಪ್ರಶ್ನೆಯಾಗಿದೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇನ್ನು ನೌಕರರು ಇದರ ಇತ್ತೀಚಿನ ಅಪ್ಡೇಟ್ ಏನು? ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು.

ಸಂಪುಟ ಕಾರ್ಯದರ್ಶಿಗೆ ಬೇಡಿಕೆ ಸಲ್ಲಿಕೆ
ಕೇಂದ್ರ ನೌಕರರ ಬಾಕಿ ಪಾವತಿಗೆ ಸಂಬಂಧಿಸಿದಂತೆ ಸಾಕಷ್ಟು ಆಂದೋಲನಗಳು ನಡೆಯುತ್ತಿವೆ. ಜನವರಿ 2020ರಿಂದ ಜೂನ್ 2021 ರವರೆಗಿನ ತುಟ್ಟಿಭತ್ಯೆಯ (ಡಿಎ ಅರೆಯರ್) ಬಾಕಿ ಉಳಿದಿದೆ. ಡಿಎ ಘೋಷಣೆಯಾದಾಗಿನಿಂದಲೂ ಕೇಂದ್ರ ನೌಕರರ ಸಂಘಗಳು ತುಟ್ಟಿಭತ್ಯೆ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿವೆ. ಇತ್ತೀಚೆಗಷ್ಟೇ ಜೆಸಿಎಂ ಕಾರ್ಯದರ್ಶಿ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಬಾಕಿ ವೇತನದ ಕುರಿತು ಚರ್ಚಿಸಲು ಕಾಲಾವಕಾಶ ಕೋರಲಾಗಿದೆ.
ದೀಪಾವಳಿ ಕೊಡುಗೆ: ಸರ್ಕಾರಿ ನೌಕರರಿಗೆ ಶೇ 4ರಷ್ಟು DR ಪ್ರಕಟ
ಕೂಡಲೇ ನಿರ್ಧಾರ ಕೈಗೊಳ್ಳಬೇಕು
ತುಟ್ಟಿಭತ್ಯೆ ನೌಕರರ ಹಕ್ಕಾಗಿದ್ದು, ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಂದೇ ಬಾರಿ ಬಾಕಿ ಪಾವತಿಗಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಬಹುದು ಎಂದು ಒಕ್ಕೂಟವು ಹೇಳಿಕೊಂಡಿದೆ ಅಂದರೆ ನೌಕರರ ಒಕ್ಕೂಟಗಳು ಕೂಡ ಹೆಚ್ಚಿನ ಭರವಸೆಗಳನ್ನು ಇಟ್ಟುಕೊಂಡಿದ್ದು ಕೂಡಲೇ ತಮ್ಮ ಡಿಎ ಬಾಕಿಯನ್ನು ಒಂದೇ ಭಾರಿ ಸರ್ಕಾರದಿಂದ ಪಾವತಿಗಾಗಿ ಬೇಡಿಕೆ ಇಟ್ಟಿವೆ.
11 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಘೋಷಣೆ
ನೌಕರರು ಎಷ್ಟು ಹಣವನ್ನು ಪಡೆಯುವ ಸಾಧ್ಯತೆ?
ಈ ಮೊತ್ತ ದೊಡ್ಡದಾಗಿದೆ. ಕೇಂದ್ರ ನೌಕರರು 7ನೇ ವೇತನ ಆಯೋಗದಡಿ ಬಾಕಿ ಉಳಿಸಿಕೊಂಡರೆ ಅವರಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ. ಜೆಸಿಎಂನ ರಾಷ್ಟ್ರೀಯ ಕೌನ್ಸಿಲ್‌ನ ಶಿವ ಗೋಪಾಲ್ ಮಿಶ್ರಾ ಪ್ರಕಾರ, ಲೆವೆಲ್-1ನಲ್ಲಿ ನೌಕರರ ಬಾಕಿ 11,880ರಿಂದ 37,554 ರೂ. ಅದೇ ಸಮಯದಲ್ಲಿ ಲೆವೆಲ್-13 (7ನೇ ಸಿಪಿಸಿ ಮೂಲ ವೇತನ ಶ್ರೇಣಿ ರೂ. 1,23,100ರಿಂದ ರೂ. 2,15,900 ರೂ.) ಮತ್ತು ಲೆವೆಲ್-14 ರ ಉದ್ಯೋಗಿಗಳ ಬಾಕಿಯು 1,44,200ರಿಂದ 2,18,200 ರೂ. ಆಗಿರುತ್ತದೆ.
ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?
4320+3240+4320 ಆಧಾರದ ಮೇಲೆ ಪಾವತಿ ?
ಅಂದರೆ, ಕೇಂದ್ರ ನೌಕರರ ವೇತನ ಮ್ಯಾಟ್ರಿಕ್ಸ್ ಪ್ರಕಾರ, ಕನಿಷ್ಠ ವೇತನ 18,000 ಆಗಿದ್ದರೆ, ಅವರು 11,880 ರೂ. ಡಿಎ ಬಾಕಿ (4320 + 3240 + 4320) ಪಡೆಯುತ್ತಾರೆ. 2022ರಲ್ಲಿ ಸೆಪ್ಟೆಂಬರ್ 28ರಂದು ನಡೆದ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆಯನ್ನು ಶೇಕಡಾ 4ರಿಂದ 38ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಜುಲೈ 1, 2022ರಿಂದ ಜಾರಿಗೆ ತರಲಾಗಿದೆ. ಕರೋನಾದಿಂದಾಗಿ, ಜನವರಿ 2020, ಜೂನ್ 2020, ಜನವರಿ 2021ರ ತುಟ್ಟಿಭತ್ಯೆ ನಿಲ್ಲಿಸಲಾಗಿದೆ. ಕಳೆದ ವರ್ಷ ನಿಷೇಧವನ್ನು ಹಿಂತೆಗೆದುಕೊಂಡಾಗ, ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 11ರಷ್ಟು ಹೆಚ್ಚಿಸಿತ್ತು. ಆದರೆ, ಆ 18 ತಿಂಗಳ ಬಾಕಿ ನೀಡಿಲ್ಲ. ಈಗ ನವೆಂಬರ್ 18ರಂದು 18 ತಿಂಗಳ ಬಾಕಿ ಇರುವ ಬಗ್ಗೆ ಸಭೆ ನಡೆಸಬಹುದು. ಈ ಸಭೆಯಲ್ಲಿ ಒಪ್ಪಂದವಾದರೆ ಬಾಕಿ ಹಣ ಪಾವತಿಯಾಗುವ ಸಾಧ್ಯತೆ ಇದೆ.