11 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಘೋಷಣೆ

ನವದೆಹಲಿ, ಆ.13: ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಋತುವಿನಲ್ಲಿ ತುಟ್ಟಿಭತ್ಯೆ, ತುಟ್ಟಿಭತ್ಯೆ ಪರಿಹಾರ, ಎಲ್ ಟಿ ಸಿ ವಿಸ್ತರಣೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ 7ನೇ ವೇತನ ಆಯೋಗದ ಅನ್ವಯದಂತೆ ರೈಲ್ವೇ ಉದ್ಯೋಗಿಗಳಿಗೆ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಗೆ ಕೇಂದ್ರ ಸಚಿವ ಸಂಪುಟ ಆಸ್ತು ಎಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧವಾರ(ಅ..12)ದಂದು ನಡೆದ ಕೇಂದ್ರ ಸಚಿವ ಸಂಪುಟವು 2021-22ನೇ ಹಣಕಾಸು ವರ್ಷಕ್ಕೆ ರೈಲ್ವೇ ಉದ್ಯೋಗಿಗಳಿಗೆ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಗೆ ಹಿಂದಿನಿಂದಲೇ ಅನ್ವಯವಾಗುವಂತೆ ತನ್ನ ಅನುಮೋದನೆಯನ್ನು ನೀಡಿದೆ.

ಅರ್ಹ ರೈಲ್ವೇ ಉದ್ಯೋಗಿಗಳಿಗೆ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಯನ್ನು ಪ್ರತಿ ವರ್ಷ ದಸರಾ/ಪೂಜಾ ರಜೆಗಳ ಮೊದಲು ಮಾಡಲಾಗುತ್ತದೆ. ಈ ವರ್ಷವೂ ಸುಮಾರು 11.27 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಆಧಾರಿತ ಬೋನಸ್ ಮೊತ್ತವನ್ನು ಪಾವತಿಸಲಾಗಿದೆ.

ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತ 78 ದಿನಗಳಿಗೆ ರೂ. 17,951/-. ಈ ಮೊತ್ತವನ್ನು ವಿವಿಧ ವರ್ಗಗಳಿಗೆ ಅಂದರೆ ಟ್ರ್ಯಾಕ್ ನಿರ್ವಾಹಕರು, ಚಾಲಕರು ಮತ್ತು ಗಾರ್ಡ್‌ಗಳು, ಸ್ಟೇಷನ್ ಮಾಸ್ಟರ್‌ಗಳು, ಸೂಪರ್‌ವೈಸರ್‌ಗಳು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ನಿಯಂತ್ರಕರು, ಪಾಯಿಂಟ್‌ಮೆನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಯವರಿಗೆ ಪಾವತಿಸಲಾಗಿದೆ.

Union Cabinet approves payment of Productivity Linked Bonus Railway employees

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ ಆರ್ಥಿಕ ಪರಿಣಾಮ ಸರ್ಕಾರಿ ಬೊಕ್ಕಸಕ್ಕೆ 1832.09 ಕೋಟಿ ರೂ ಹೊರೆ ಬೀಳಲಿದೆ. ಕೋವಿಡ್-19 ನಂತರದ ಸವಾಲುಗಳಿಂದ ಉಂಟಾದ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಗಾಗಿ ಮೇಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್‌ನ ಮೂರು ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿತು. ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು.

7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ 2019ರಲ್ಲಿ ರೈಲ್ವೆ ಸಿಬ್ಬಂದಿಗಳಿಗೆ ಬೋನಸ್ ಬೆನ್ನಲ್ಲೇ ಹಲವು ರೈಲ್ವೆ ಸಿಬ್ಬಂದಿಗಳಿಗೆ ಬಡ್ತಿ, ಇಂಗ್ರೀಮೆಂಟ್ ಘೋಷಿಸಲಾಗಿತ್ತು. ಸರಿ ಸುಮಾರು 9,500 ರು ನಿಂದ 21,000 ರು ತನಕ ಇಂಗ್ರೀಮೆಂಟ್ ಜೊತೆಗೆ ಬಡ್ತಿ ಖಾತ್ರಿಯಾಗಿತ್ತು. 1979-80ರ ನಂತರ ಮತ್ತೊಮ್ಮೆ Productivity linked ಬೋನಸ್ ಜಾರಿಗೆ ತರಲಾಗಿದ್ದು, ಸತತವಾಗಿ 7 ವರ್ಷಗಳಿಂದ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬೋನಸ್ ನೀಡುತ್ತಿದೆ.

ಪಾವತಿಸಿದ ಉತ್ಪಾದಕತೆ ಆಧಾರಿತ ಬೋನಸ್ ದಿನಗಳ ನಿಜವಾದ ಸಂಖ್ಯೆಯು ವ್ಯಾಖ್ಯಾನಿಸಲಾದ ಸೂತ್ರಗಳ ಆಧಾರದ ಮೇಲೆ ಕೆಲಸ ಮಾಡಿದ ದಿನಗಳಿಗಿಂತ ಹೆಚ್ಚು ಎನ್ನಬಹುದು. ಉತ್ಪಾದಕತೆ ಆಧಾರಿತ ಬೋನಸ್ ಪಾವತಿಯು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು, ಕೆಲಸ ಮಾಡಲು ರೈಲ್ವೆ ಉದ್ಯೋಗಿಗಳನ್ನು ಪ್ರೇರೇಪಿಸಲು ಉತ್ತೇಜನದಂತೆ ಕಾರ್ಯನಿರ್ವಹಿಸುತ್ತದೆ. 7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ.

ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ 31ರಷ್ಟು ಏರಿಕೆಯಾಗಲಿದೆ.

ಈ ನಡುವೆ ಜುಲೈ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ತುಟ್ಟಿಭತ್ಯೆ ಪರಿಹಾರ (ಡಿಆರ್) ಶೇ 4% ರಷ್ಟು ಹೆಚ್ಚಿಸಲಾಗಿದೆ. ಡಿಆರ್ ಶೇ 34 ರಿಂದ ಶೇ 38ಕ್ಕೆ ಹೆಚ್ಚಿಸಲಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+