ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Passport News: ಭಾರತೀಯರು ಪಾಸ್‌ಪೋರ್ಟ್ ಬಗ್ಗೆ ಡೋಂಟ್ ಕೇರ್ ಎನ್ನುವುದೇಕೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಭಾರತೀಯರು ವಿದೇಶಗಳಿಗೆ ಪ್ರಯಾಣಿಸಬೇಕಾದಲ್ಲಿ ಪಾಸ್‌ಪೋರ್ಟ್ ತೀರಾ ಅಗತ್ಯವಾಗಿದೆ. ಪಾಸ್‌ಪೋರ್ಟ್ ಎಂಬುದು ಕೇವಲ ವಿದೇಶಿ ಪ್ರವಾಸದ ಗುರುತಿನ ಚೀಟಿಯಾಗಿರದೇ ಇತರೆ ಸಂದರ್ಭಗಳಲ್ಲೂ ಉಪಯೋಗಕ್ಕೆ ಬರುತ್ತದೆ.

ಪಾಸ್‌ಪೋರ್ಟ್ ಕುರಿತಾಗಿ ಭಾರತೀಯರು ತೀವ್ರ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ವಿದೇಶ ಪ್ರವಾಸದ ಕುರಿತು ಆಸಕ್ತಿಯುಳ್ಳವರು ಮಾತ್ರ ಪಾಸ್‌ಪೋರ್ಟ್ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅದೇ ಪಾಸ್‌ಪೋರ್ಟ್ ಇತರೆ ಸಂದರ್ಭಗಳಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಮಕ್ಕಳಿಗೆ ಪ್ರತ್ಯೇಕ ಪಾಸ್‌ಪೋರ್ಟ್ ಕಡ್ಡಾಯ; ಹೇಗೆ ಮಾಡಿಸುವುದು?ಮಕ್ಕಳಿಗೆ ಪ್ರತ್ಯೇಕ ಪಾಸ್‌ಪೋರ್ಟ್ ಕಡ್ಡಾಯ; ಹೇಗೆ ಮಾಡಿಸುವುದು?

ಭಾರತೀಯರು ಪಾಸ್‌ಪೋರ್ಟ್ ಕುರಿತು ತೆಲೆ ಕೆಡಿಸಿಕೊಳ್ಳದಿರಲು ಕಾರಣವೇನು?, ಪಾಸ್‌ಪೋರ್ಟ್ ಪಡೆದುಕೊಳ್ಳುವಲ್ಲಿ ಜನರು ಹಿಂದೇಟು ಹಾಕಿದ್ದು ಏಕೆ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ಎಷ್ಟು ಮಂದಿ ಭಾರತೀಯರು ಪಾಸ್‌ಪೋರ್ಟ್ ಅನ್ನು ಹೊಂದಿದ್ದಾರೆ?, ಯಾವ ರಾಜ್ಯದಲ್ಲಿ ಅತಿಹೆಚ್ಚು ಮಂದಿ ಪಾಸ್‌ಪೋರ್ಟ್ ಹೊಂದಿದ್ದಾರೆ?, ಪಾಸ್‌ಪೋರ್ಟ್ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು? ಪಾಸ್‌ಪೋರ್ಟ್ ಅಂಕಿ-ಸಂಖ್ಯೆಗಳ ಸುತ್ತ ಒಂದು ವಿಶೇಷ ವರದಿ ಇಲ್ಲಿದೆ ಓದಿ.

ನಿಮ್ಮ ಬಳಿ ಒಂದು ಪಾಸ್‌ಪೋರ್ಟ್ ಇದೆಯಾ?

ನಿಮ್ಮ ಬಳಿ ಒಂದು ಪಾಸ್‌ಪೋರ್ಟ್ ಇದೆಯಾ?

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳೇ ಕಳೆದಿವೆ. ಅದಾಗ್ಯೂ, ಭಾರತದ ಜನಸಂಖ್ಯೆಯಲ್ಲಿ ಶೇ.7.2ರಷ್ಟು ಜನರು ಪಾಸ್‌ಪೋರ್ಟ್ ಹೊಂದಿದ್ದಾರೆ. ಈ ಪೈಕಿ ಕಳೆದ ದಶಕದಲ್ಲಿ ಬಹುಪಾಲು ಜನರು ಪಾಸ್‌ಪೋರ್ಟ್ ಪಡೆದಿದ್ದಾರೆ. ಡಿಸೆಂಬರ್ ಮಧ್ಯದ ವೇಳೆಗೆ 9.6 ಕೋಟಿ ಭಾರತೀಯರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಸಂಖ್ಯೆ 10 ಕೋಟಿ ಗಡಿ ದಾಟಲಿದೆ.

ಪಾಸ್‌ಪೋರ್ಟ್ ಪಡೆಯುವವರ ಸಂಖ್ಯೆ ಏಕೆ ಕಡಿಮೆಯಿದೆ?

ಪಾಸ್‌ಪೋರ್ಟ್ ಪಡೆಯುವವರ ಸಂಖ್ಯೆ ಏಕೆ ಕಡಿಮೆಯಿದೆ?

* ಪಾಸ್‌ಪೋರ್ಟ್ ಹೊಂದಿರುವವರ ಒಟ್ಟಾರೆ ಶೇಕಡಾವಾರು ಪ್ರಮಾಣವು ತೀರಾ ಕಡಿಮೆಯಾಗಿದೆ. ಏಕೆಂದರೆ, ಪಾಸ್‌ಪೋರ್ಟ್ ವಿತರಣಾ ನೀತಿಯು ತೀರಾ ಇತ್ತೀಚಿನವರೆಗೂ ಬಹಳ ಕಠಿಣವಾಗಿತ್ತು. ಈ ಆಕಾಂಕ್ಷೆಗಳನ್ನು ಹೊಂದಿರುವ ಭಾರತೀಯರ ಸಂಖ್ಯೆ ಮತ್ತು ವಿದೇಶಕ್ಕೆ ಹೋಗುವವರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂಬುದು ಗಮನಾರ್ಹವಾಗಿದೆ.

* ಹೊಸ ಸುಧಾರಣೆಗಳ ಭಾಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ (ಪಿಎಸ್‌ಕೆ) ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ.

* ದೇಶದಲ್ಲಿ ಹೆಚ್ಚುತ್ತಿರುವ ತಲಾ ಆದಾಯ, ಸಡಿಲವಾದ ನಿಯಮಗಳು ಮತ್ತು ವಿದೇಶದಲ್ಲಿ ಹೆಚ್ಚಿದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದಾಗಿ ಪಾಸ್‌ಪೋರ್ಟ್‌ಗಳನ್ನು ಪಡೆಯಲು ಬಯಸುವ ಭಾರತೀಯರ ಸಂಖ್ಯೆಯು ಹೆಚ್ಚಾಗುತ್ತಿದೆ.

ಅತಿಹೆಚ್ಚು ಪಾಸ್‌ಪೋರ್ಟ್ ಪಡೆದುಕೊಂಡ ರಾಜ್ಯಗಳು

ಅತಿಹೆಚ್ಚು ಪಾಸ್‌ಪೋರ್ಟ್ ಪಡೆದುಕೊಂಡ ರಾಜ್ಯಗಳು

* ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಮಾಹಿತಿಯ ಪ್ರಕಾರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ 2.2 ಕೋಟಿ ಅಥವಾ ಸುಮಾರು ಕಾಲು ಭಾಗದಷ್ಟು (23%) ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ.

* ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತು ಕರ್ನಾಟಕ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್‌ಪೋರ್ಟ್ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ.

* ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಒಂದು ಕೋಟಿಗೂ ಹೆಚ್ಚು ಪಾಸ್‌ಪೋರ್ಟ್‌ದಾರರಿದ್ದಾರೆ. ತಮಿಳುನಾಡಿನಲ್ಲಿ 97 ಲಕ್ಷ ಮಂದಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ. ಅತಿಹೆಚ್ಚು ಪಾಸ್‌ಪೋರ್ಟ್ ಪಡೆದುಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಕೇರಳ, ಉಳಿದ ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ.

ಪಾಸ್‌ಪೋರ್ಟ್ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಪಾಸ್‌ಪೋರ್ಟ್ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ

* ಇದೇ ವರ್ಷದ ಡಿಸೆಂಬರ್ 12ರ ಹೊತ್ತಿಗೆ 1.1 ಕೋಟಿಗೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಶೇ.10.5ರಷ್ಟು ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳಿಂದ ನೀಡಲಾಗಿದೆ.

* ಈ ವರ್ಷ 2021ರಲ್ಲಿ ನೀಡಲಾದ ಪಾಸ್‌ಪೋರ್ಟ್‌ಗಳ ಸಂಖ್ಯೆಗಿಂತ ಶೇ.36ರಷ್ಟು ಹೆಚ್ಚಾಗಿದೆ. ಅದೇ ರೀತಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಅಂದರೆ 2020ಕ್ಕೆ ಹೋಲಿಸಿದರೆ ಶೇ.81.5ರಷ್ಟು ಅಧಿಕವಾಗಿದೆ. ಕೊರೊನಾವೈರಸ್ ಪಿಡುಗಿನ ಪೂರ್ವದಲ್ಲಿ 2019 ಮತ್ತು 2017ರಲ್ಲಿ ಪಾಸ್‌ಪೋರ್ಟ್ ಪಡೆದುಕೊಂಡವರ ಸಂಖ್ಯೆಯು ಸುಮಾರು 1.2 ಕೋಟಿಯಷ್ಟು ಇತ್ತು ಎಂದು ಗೊತ್ತಾಗಿದೆ.

English summary
75 years after Independence, only 7.2% of India's population owns a passport? Know why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X