ಭಾರತದ ಕಾರುನ್ನು ಹೆಸರು ಬದಲಾಯಿಸಿ ಬಳಸುವ ಪಾಕ್ ಜನತೆ; ಯಾಕೆ?
ನಿಮಗೆ ಗೊತ್ತಾ? ನಮ್ಮ ಭಾರತೀಯರು ತಯಾರಿಸಿದ ಪ್ರಸಿದ್ಧ 5 ಕಾರುಗಳು ಪಾಕಿಸ್ತಾನದಲ್ಲಿ ಪ್ರಸಿದ್ಧವಾಗಿವೆ. ಈ ಕಾರುಗಳನ್ನು ಕೊಳ್ಳಲು ಪಾಕಿಸ್ತಾನದ ಜನರು ಮುಗಿಬಿದ್ದು, ಡಬಲ್ ರೇಟ್‌ಗೆ ಖರೀದಿ ಮಾಡುತ್ತಿದ್ದಾರೆ. ಪಾಕ್‌ನಲ್ಲಿ ಭಾರೀ ಬೆಲೆಗೆ ಮಾರಾಟವಾಗುವ ಭಾರತದ ಕಾರುಗಳನ್ನು ಖರೀದಿಸಲು ಮುಂಗಡವಾಗಿ ಏಜೆಂಟ್‌ರನ್ನು ಸಂಪರ್ಕಿಸುತ್ತಾರೆ.
ಭಾರತೀಯ ಸಿನಿಮಾಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡಿದ ಬಳಿಕ, ಭಾರತೀಯ ಜನಪ್ರಿಯ ಸಿನಿಮಾಗಳಿಗೆ ಪ್ರಸಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಪಾಕ್ ಸರ್ಕಾರಕ್ಕೆ ಈ ವಿಷಯ ತಿಳಿದರೆ ಸಾಕು, ಸ್ವಲ್ಪಮಟ್ಟಿಗೆ ಮುಜಗರವೂ ಆದರೂ ಆಗಬಹುದು! ಏಕೆಂದರೆ, ಭಾರತದ ಸಿನಿಮಾ ಅಲ್ಲದೇ ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೂ ಪಾಕಿಸ್ತಾನದ ಜನರು ಫಿದಾ ಆಗಿದ್ದಾರೆ ಈ ವಿಷಯ ಪಾಕಿಸ್ತಾನಕ್ಕೂ ತಿಳಿದಿದ್ದರು ಸುಮ್ಮನಿದೆ.
ಹೌದು, ಭಾರತದಲ್ಲಿ ಕಾರು ಮಾರುಕಟ್ಟೆಯು ಪಾಕಿಸ್ತಾನದ ಕಾರು ಮಾರುಕಟ್ಟೆಗಿಂತ ಅನೇಕ ಪಟ್ಟು ಹೆಚ್ಚಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಡೀ ವರ್ಷದಲ್ಲಿ ಪಾಕಿಸ್ತಾನದಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಗಿಂತ ಹೆಚ್ಚು ಕಾರುಗಳು ಭಾರತದಲ್ಲಿ ಒಂದು ತಿಂಗಳಲ್ಲಿ ಮಾರಾಟವಾಗುತ್ತವೆ! ಪಾಕಿಸ್ತಾನದಲ್ಲಿ ಯಾವ ಭಾರತೀಯ ಕಾರುಗಳು ಜನಪ್ರಿಯವಾಗಿವೆ ಎಂಬ ವಿಷಯಗಳು ಈಗ ಮತ್ತಷ್ಟು ಕುತೂಹಲ ಮೂಡಿಸಿವೆ.

ಪಾಕಿಸ್ತಾನದಲ್ಲಿ ಭಾರತದ ಕಾರುಗಳಿಗೆ ಬೇಡಿಕೆ
ಇಂದು ಭಾರತ ಮಾತ್ರವಲ್ಲದೆ ನಮ್ಮ ನೆರೆಯ ರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಭಾರತೀಯ ಕಾರುಗಳು ಹೆಚ್ಚಿನ ಬೇಡಿಕೆ ಮೊಳಗುತ್ತಿದೆ. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಭಾರತದ ಕೆಲವು ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಅಲ್ಲಿನ ಜನರು ನಿಗದಿತ ಬೆಲೆಗಿಂತ ಹೆಚ್ಚು ಕೊಟ್ಟು ಈ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಇಂದು ನಾವು ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಐದು ಅಂತಹ ಕಾರುಗಳು ಸಕತ್ ಸುದ್ದಿ ಮಾಡುತ್ತಿವೆ.

ಸೆಲೆರಿಯೊ ಪಾಕಿಸ್ತಾನದಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ
ಮಾರುತಿ ಸುಜುಕಿ ಸೆಲೆರಿಯೊ ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಅಲ್ಲಿ ಅದನ್ನು ಸುಜುಕಿ ಕಲ್ಟಸ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಈ ಕಾರಿನ ಬೆಲೆ 5.23 ಲಕ್ಷದಿಂದ 7 ಲಕ್ಷದವರೆಗೆ ಬೆಲೆ ಇದ್ದರೆ, ಪಾಕಿಸ್ತಾನದಲ್ಲಿ ಇದು 19 ಲಕ್ಷದ ನಾಲ್ಕು ಸಾವಿರ ಪಾಕಿಸ್ತಾನಿ ರೂಪಾಯಿಗಳಿಗೆ ಲಭ್ಯವಿದೆ. ಇನ್ನು ಅಲ್ಲಿ ಏಜೆಂಟ್‌ರು ಭಾರತದ ಪ್ರಸಿದ್ಧ ಕಾರು ಎಂದು ಅರಿತಿರುವ ಇವರು ಜನರಿಗೆ ಕಥೆ ಕಟ್ಟಿ ಮಾರಾಟ ಮಾಡಿ ಹಣಗಳಿಸುತ್ತಿದ್ದರೆ, ಕಾರ್ ಖರೀದಿಸಿದ ಪಾಕ್ ಜನರು ಕಾರುಗಳ ಕ್ವಾಲಿಟಿ ನೋಡಿ ಹೆಚ್ಚು ಖರೀದಿಸಲು ಮುಂದಾಗುತ್ತಿದ್ದಾರೆ ಇನ್ನು ಪಾಕಿಸ್ತಾನದ ಕಾರುಗಳ ಕ್ವಾಲಿಟಿ ಪ್ರಮಾಣಕ್ಕೆ ಅಸಮಾಧಾನಗೊಂಡಿರುವ ಪಾಕ್ ಜನತೆ ಭಾರತದ ಕಾರ್ ಓಡಿಸುತ್ತಿದ್ದಾರೆ. ಇನ್ನು ಕಾರುಗಳನ್ನು ರಸ್ತೆಗಿಳಿಸಲು ಹೆಸರು ಬದಲಾವಣೆ ಮಾಡಿ ಕಾರ್ ಓಡಿಸಲಾಗುತ್ತಿದೆ.

ಪಾಕಿಸ್ತಾನಕ್ಕೆ 'ಗೇಮ್ ಚೇಂಜರ್' ಕಾರ್ ಇದು
ಮಾರುತಿಯ ಎಸ್‌ಯುವಿ ವಿಟಾರಾ ಬ್ರೆಝಾ ಕೂಡ ಪಾಕಿಸ್ತಾನದಲ್ಲಿ ಅಸ್ತಿತ್ವವನ್ನು ಹೊಂದಿದೆ. ಪಾಕಿಸ್ತಾನದಲ್ಲಿ ಇದನ್ನು ವಿಟಾರಾ ಎಂಬ ಹೆಸರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇದನ್ನು ಪಾಕಿಸ್ತಾನದಲ್ಲಿ ಗೇಮ್ ಚೇಂಜರ್ ಕಾರು ವಿಟಾರಾ ಎಂದು ಕರೆಯಲಾಗುತ್ತದೆ. ನೀವು ಭಾರತದಲ್ಲಿ ಈ ಕಾರನ್ನು ಖರೀದಿಸಿದರೆ, ನೀವು 7.99 ಲಕ್ಷದಿಂದ 13.96 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, ಆದರೆ ಪಾಕಿಸ್ತಾನದಲ್ಲಿ ನೀವು 66 ಲಕ್ಷ ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, ನಂತರ ನೀವು ಅದನ್ನು ಮನೆಗೆ ತರಬಹುದು.

ಪಾಕ್‌ನಲ್ಲಿ ವಾರ್ಷಿಕ ಎರಡೂವರೆ ಲಕ್ಷ ಕಾರುಗಳು ಮಾರಾಟ!
ಪಾಕಿಸ್ತಾನದಲ್ಲಿರುವ ಮಾರುತಿ ಸುಜುಕಿ ಕಾರುಗಳು ಭಾರತದಂತೆಯೇ ತಮ್ಮ ದೊಡ್ಡ ಮಾರುಕಟ್ಟೆ ನೆಲೆಯನ್ನು ಉಳಿಸಿಕೊಂಡಿವೆ. ಅದರ ಎಲ್ಲಾ ರೀತಿಯ ವಾಹನಗಳಿಗೆ ಬೇಡಿಕೆ ಉಳಿದಿದೆ. ಭಾರತದಲ್ಲಿ ಆಲ್ಟೊ ಹೆಸರಿನಲ್ಲಿ ಮಾರಾಟವಾಗುವ ಕಾರುಗಳು 14.75 ಲಕ್ಷಕ್ಕೆ ಮಾರಾಟವಾಗುತ್ತವೆ.
ಭಾರತದಲ್ಲಿ ಇವರ ಬೆಲೆ 3.39 ಲಕ್ಷ ರೂ. ಓಮ್ನಿ ಸುಜುಕಿಯನ್ನು ಪಾಕಿಸ್ತಾನದಲ್ಲಿ ಬೋಲನ್ ಹೆಸರಿನಲ್ಲಿ ಮಾರಾಟ ಮಾಡಲಾಗಿದ್ದು, ಇದರ ಬೆಲೆ 11.49 ಲಕ್ಷ ರೂ. ಮತ್ತೊಂದೆಡೆ, ಭಾರತದಲ್ಲಿ ಕೇವಲ 5.47 ಲಕ್ಷಕ್ಕೆ ಲಭ್ಯವಿರುವ ವ್ಯಾಗನ್‌ಆರ್‌ಗೆ ಪಾಕಿಸ್ತಾನಿ ಪ್ರಜೆ 20.84 ಲಕ್ಷ ಪಾವತಿಸಬೇಕಾಗುತ್ತದೆ. ಪಾಕಿಸ್ತಾನದಲ್ಲಿ ವಾರ್ಷಿಕ ಎರಡೂವರೆ ಲಕ್ಷ ಕಾರುಗಳು ಮಾರಾಟವಾಗುತ್ತವೆ ಗಮನಿಸಬೇಕಾದ ಸಂಗತಿಯೆಂದರೆ, ಪಾಕಿಸ್ತಾನದಲ್ಲಿ ವಾರ್ಷಿಕ ಕಾರು ಮಾರಾಟವು ಗರಿಷ್ಠ 2.5 ಲಕ್ಷದಷ್ಟಿದ್ದರೆ, ಭಾರತದಲ್ಲಿ ಒಂದು ತಿಂಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕ ಕಾರುಗಳು ಮಾರಾಟವಾಗುತ್ತವೆ.












Click it and Unblock the Notifications