ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯ 6 ನೇ ಹಂತದ ಕಣದಲ್ಲಿ 253 ಕೋಟ್ಯಧಿಪತಿಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 25: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 6 ನೇ ಹಂತದ ಮತದಾನ ಮಾರ್ಚ್ 3ಕ್ಕೆ ನಡೆಯಲಿದೆ. ಈ ಹಂತದಲ್ಲಿ 57 ಕ್ಷೇತ್ರಗಳಲ್ಲಿ 670 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಪೈಕಿ 182 (27%) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯ ಪ್ರಕಾರ 151 (23%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಅಭ್ಯರ್ಥಿಗಳ ಅಪರಾಧ ಹಿನ್ನೆಲೆ: ಪ್ರಮುಖ ಪಕ್ಷಗಳಲ್ಲಿ, SPಯ 48 ಅಭ್ಯರ್ಥಿಗಳಲ್ಲಿ 40 (83%) ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಬಿಜೆಪಿಯ 52 ಅಭ್ಯರ್ಥಿಗಳಲ್ಲಿ 23 (44%), INCಯ 56 ಅಭ್ಯರ್ಥಿಗಳಲ್ಲಿ 22 (39%), BSPಯ 57 ಅಭ್ಯರ್ಥಿಗಳಲ್ಲಿ 22 (39%) ಮತ್ತು AAPಯ 51 ಅಭ್ಯರ್ಥಿಗಳಲ್ಲಿ 7 (14%) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

ಯುಪಿ: 5ನೇ ಹಂತದ ರಣಕಣದಲ್ಲಿ 185 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನಲೆ
ಗಂಭೀರ ಕ್ರಿಮಿನಲ್ ಪ್ರಕರಣಗಳೊಂದಿಗೆ ಪಕ್ಷವಾರು ಅಭ್ಯರ್ಥಿಗಳು: ಪ್ರಮುಖ ಪಕ್ಷಗಳಲ್ಲಿ, SPಯ 48 ಅಭ್ಯರ್ಥಿಗಳಲ್ಲಿ 29 (60%), ಬಿಜೆಪಿಯ 52 ಅಭ್ಯರ್ಥಿಗಳಲ್ಲಿ 20 (39%), INCಯ 56 ಅಭ್ಯರ್ಥಿಗಳಲ್ಲಿ 20 (36%), BSPಯ 57 ಅಭ್ಯರ್ಥಿಗಳಲ್ಲಿ 18 (32%) ಮತ್ತು AAPನ 51 ಅಭ್ಯರ್ಥಿಗಳಲ್ಲಿ 5 (10%) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

v
ಇನ್ನೂ 8 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 8 ಅಭ್ಯರ್ಥಿಗಳ ಪೈಕಿ 2 ಅಭ್ಯರ್ಥಿಗಳು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ (ಐಪಿಸಿ ಸೆಕ್ಷನ್-376). ಜೊತೆಗೆ 8 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿ ಸೆಕ್ಷನ್-302) ಘೋಷಿಸಿಕೊಂಡಿದ್ದಾರೆ. 23 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್-307) ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

6 ನೇ ಹಂತದ ಚುನಾವಣೆಯ 57 ಕ್ಷೇತ್ರಗಳಲ್ಲಿ 37(65%) ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ರೆಡ್ ಅಲರ್ಟ್ ಕ್ಷೇತ್ರಗಳೆಂದರೆ 3 ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಕೋಟ್ಯಧಿಪತಿ ಅಭ್ಯರ್ಥಿಗಳು: 6 ನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ 670 ಅಭ್ಯರ್ಥಿಗಳಲ್ಲಿ 253 (38%) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದನ್ನು ಗಮನಿಸಿದರೆ ನಮ್ಮ ಚುನಾವಣೆಯಲ್ಲಿ ಹಣಬಲದ ಪಾತ್ರ ಸ್ಪಷ್ಟವಾಗಿದೆ. ಪ್ರಮುಖ ಪಕ್ಷಗಳ ಪೈಕಿ SPಯ 48 ಅಭ್ಯರ್ಥಿಗಳಲ್ಲಿ 45 (94%) ಅಭ್ಯರ್ಥಿಗಳು, ಬಿಜೆಪಿಯ 52 ಅಭ್ಯರ್ಥಿಗಳಲ್ಲಿ 42 (81%), BSPಯ 57 ಅಭ್ಯರ್ಥಿಗಳಲ್ಲಿ 44 (77%), INCಯ 56 ಅಭ್ಯರ್ಥಿಗಳಲ್ಲಿ 26 (46%) ಮತ್ತು AAP ನ 51 ಅಭ್ಯರ್ಥಿಗಳಲ್ಲಿ 14 (28%) ಅಭ್ಯರ್ಥಿಗಳು 1 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಸರಾಸರಿ ಆಸ್ತಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ 2022ರ ಹಂತ VI ರಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಆಸ್ತಿ ಸರಾಸರಿ 2.10 ಕೋಟಿ ರೂ ಇದೆ.

ಪಕ್ಷವಾರು ಸರಾಸರಿ ಆಸ್ತಿ: ಪ್ರಮುಖ ಪಕ್ಷಗಳಲ್ಲಿ, 48 ಎಸ್‌ಪಿ ಅಭ್ಯರ್ಥಿಗಳಿಗೆ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 7.36 ಕೋಟಿ ರೂ ಎಂದು ವಿಶ್ಲೇಷಿಸಲಾಗಿದೆ. ಇನ್ನೂ 52 ಬಿಜೆಪಿ ಅಭ್ಯರ್ಥಿಗಳಿಗೆ 5.44 ಕೋಟಿ ರೂ., BSP 57 ಅಭ್ಯರ್ಥಿಗಳ ಆಸ್ತಿ 4.51 ಕೋಟಿ ರೂ ಇದೆ. 56 INC ಅಭ್ಯರ್ಥಿಗಳು 2.23 ಕೋಟಿ ರೂ. ಸರಾಸರಿ ಆಸ್ತಿ ಹೊಂದಿದ್ದಾರೆ ಮತ್ತು 51 AAP ಅಭ್ಯರ್ಥಿಗಳು ರೂ. 81.64 ಲಕ್ಷ ಆಸ್ತಿಯನ್ನು ಹೊಂದಿದ್ದಾರೆ.

ಅಭ್ಯರ್ಥಿಗಳ ವಯಸ್ಸಿನ ವಿವರಗಳು: 226 (34%) ಅಭ್ಯರ್ಥಿಗಳು ತಮ್ಮ ವಯಸ್ಸು 25 ರಿಂದ 40 ವರ್ಷಗಳು ಎಂದು ಘೋಷಿಸಿದ್ದಾರೆ ಮತ್ತು 346 (52%) ಅಭ್ಯರ್ಥಿಗಳು ತಮ್ಮ ವಯಸ್ಸು 41 ರಿಂದ 60 ವರ್ಷಗಳು ಎಂದು ಘೋಷಿಸಿದ್ದಾರೆ. 98 (15%) ಅಭ್ಯರ್ಥಿಗಳು ತಮ್ಮ ವಯಸ್ಸನ್ನು 61 ರಿಂದ 80 ವರ್ಷಗಳ ನಡುವೆ ಎಂದು ಘೋಷಿಸಿದ್ದಾರೆ. ಜೊತೆಗೆ 65(10%) ಮಹಿಳಾ ಅಭ್ಯರ್ಥಿಗಳು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಹಂತ VI ರಲ್ಲಿ ಸ್ಪರ್ಧಿಸುತ್ತಿದ್ದಾರೆ.

English summary
Out of 670 candidates analysed, 182 (27%) candidates have declared criminal cases against themselves. These candidates are fighting the 6th phase of the Uttar Pradesh Assembly Elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X