ಪವಾಡ: 1999ರಲ್ಲಿ ನಾಪತ್ತೆಯಾಗಿದ್ದ ಒಡಿಶಾದ ವ್ಯಕ್ತಿ ದಿಢೀರ್ ಮನೆಗೆ ವಾಪಸ್
ಎರಡು ದಶಕಗಳ ಹಿಂದೆಯೇ ಮನೆಯ ಮುಖ್ಯಸ್ಥರು ಸತ್ತಿದ್ದಾರೆಂದು ಭಾವಿಸಿ ದುಃಖದಲ್ಲಿ ವರ್ಷಗಟ್ಟಲೆ ಕಣ್ಣೀರು ಹಾಕುತ್ತಿದ್ದ ಒಡಿಶಾದ ಕುಟುಂಬ ದಿಢೀರ್ ದಿಗ್ಭ್ರಮೆಗೊಂಡಿದೆ. ಸಾವನ್ನಪ್ಪಿದ್ದಾರೆಂದು ಭಾವಿಸಿದ್ದ ಮನೆಯ ಸದಸ್ಯ ಮನೆಗೆ ವಾಪಾಸ್ಸಾಗಿದ್ದು ಮನೆಯ ಸದಸ್ಯರು ಸಂತಸಗೊಂಡಿದ್ದಾರೆ. ವರ್ಷಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಯನ್ನು ನೋಡಿ ಇಡೀ ಗ್ರಾಮವೇ ಆಶ್ಚರ್ಯಗೊಂಡಿದೆ.
ಸೂಪರ್ ಸೈಕ್ಲೋನ್ 1999 ರಲ್ಲಿ ಒಡಿಶಾಗೆ ಅಪ್ಪಳಿಸಿತು. ಇದರಲ್ಲಿ ನಗರಗಳು ಮತ್ತು ಪಟ್ಟಣಗಳು ನಾಶವಾದವು. ಅನೇಕ ಕುಟುಂಬಗಳು ನಾಶವಾಗಿ ಎಲ್ಲೆಡೆ ಶೋಕ ಮಡುಗಟ್ಟಿತ್ತು.
ಸೂಪರ್ ಸೈಕ್ಲೋನ್ ಒಡಿಶಾದ 14 ಜಿಲ್ಲೆಗಳನ್ನು ನಾಶಪಡಿಸಿತ್ತು. ಈ ವ್ಯಕ್ತಿ ಚಂಡಮಾರುತದ ವೇಳೆ ಕಾಣೆಯಾದರು. ಆ ಚಂಡಮಾರುತದಲ್ಲಿ ಸುಮಾರು 10,000 ಜನರು ಸಾವನ್ನಪ್ಪಿದ್ದರು. ಈ ಚಂಡಮಾರುತದಿಂದ ಕಣ್ಮರೆಯಾದ ನೂರಾರು ಜನರು ಸಮುದ್ರದ ಅಲೆಗೆ ಸಿಕ್ಕು ಹಿಂತಿರುಗಲಿಲ್ಲ. ಇದರಿಂದ ಹಲವು ಕುಟುಂಬಗಳಲ್ಲಿ ಶೋಕ ಮಡುಗಟ್ಟಿತ್ತು. ಈ ಚಂಡಮಾರುತಕ್ಕೆ ಮನೆಯ ಸದಸ್ಯರನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳಲ್ಲಿ ಒಡಿಶಾದ ಈ ಕುಟುಂಬವೂ ಒಂದು.

ಚಂಡಮಾರುತದಿಂದಾಗಿ ಹಲವಾರು ಕುಟುಂಬಗಳು ನಾಶ
ಒಡಿಶಾದ ಪುರಿಯ ಅವರ ಕುಟುಂಬ ತಮ್ಮ ತಂದೆ ಕೃತಿಚಂದ್ರ ಬರಾಲ್ ಹಿಂತಿರುಗಲಿ ಎಂದು ವರ್ಷಗಳ ಕಾಲ ಕಾಯುತ್ತಿತ್ತು. ನಿತ್ಯ ಪ್ರಾರ್ಥಿಸುತ್ತಿತ್ತು. ಆದರೆ ಅವರ ಪ್ರಾರ್ಥನೆ ಫಲಿಸಲಿಲ್ಲ. ತಂದೆ ಹಿಂತಿರುಗದಿದ್ದಾಗ, ಅವರು ಸಾವನ್ನಪ್ಪಿದ್ದಾರೆಂದು ಕುಟುಂಬ ಭಾವಿಸಿತ್ತು. ಆದರೆ ದಿಢೀರನೇ 80 ವರ್ಷದ ಕೃತಿಚಂದ್ರ ಬರಾಲ್ ಮನೆಗೆ ವಾಪಾಸ್ ಆಗಿದ್ದಾರೆ. ಚಂಡಮಾರುತದ ಬಳಿಕ ಸ್ಮರಣೆಯನ್ನು ಕಳೆದುಕೊಂಡ ಕೃತಿಚಂದ್ರ ಬರಾಲ್ ಮನೆಗೆ ವಾಪಾಸ್ ಆದ ಕಥೆ ರೋಚಕ.

ವಿಶಾಖಪಟ್ಟಣಂನ ಕಾರ್ಪೊರೇಟರ್‌ನಿಂದ ವ್ಯಕ್ತಿ ಹಾರೈಕೆ
ಶ್ರೀಕಾಕುಳಂಗೆ ಹೋಗಿದ್ದ ಕೃತಿಚಂದ್ರ ಬರಾಲ್ ಕಾಣೆಯಾಗಿದ್ದರು. ಕುಟುಂಬ ಅದೆಷ್ಟೇ ಪ್ರಯತ್ನಪಟ್ಟು ಹುಡುಕಾಡಿದರೂ ಅವರು ಸಿಕ್ಕಿರಲಿಲ್ಲ. ಪುರಿಯ ಬರಾಲ್ ಎಂಬ ವ್ಯಕ್ತಿ ಚಂಡಮಾರುತದಲ್ಲಿ ಕಳೆದುಹೋದ ನಂತರ ತನ್ನ ಸ್ಮರಣೆಯನ್ನು ಕಳೆದುಕೊಂಡು ವಿಶಾಖಪಟ್ಟಣಂನ ಕಾಲುದಾರಿಗಳಲ್ಲಿ ಅಲೆದಾಡುತ್ತಿದ್ದರು. ಆಗ ಗ್ರೇಟರ್ ವಿಶಾಖಪಟ್ಟಣಂನ ಕಾರ್ಪೊರೇಟರ್ ಆಗಿದ್ದ ಎಜೆ ಸ್ಟಾಲಿನ್ ಈ ವ್ಯಕ್ತಿಯ ಬಗ್ಗೆ ಕರುಣೆ ತೋರಿದರು. ಅವರಿಗೆ ಪ್ರತಿದಿನ ಆಹಾರ ನೀಡಿದರು. ಇದು ವರ್ಷಗಳ ಕಾಲ ನಡೆಯಿತು. ಆದರೆ ಒಂದು ಮಧ್ಯಾಹ್ನ ಸ್ಟಾಲಿನ್ ಆ ವ್ಯಕ್ತಿಗೆ ಆಹಾರ ನೀಡಲು ತಮ್ಮ ಕಾರನ್ನು ನಿಲ್ಲಿಸಿದರು ಮತ್ತು ಹಾರ್ನ್ ಮಾಡಿದರು. ಆದರೆ ವ್ಯಕ್ತಿ ಬರಲಿಲ್ಲ. ಸ್ಟಾಲಿನ್ ಹೊರಗೆ ಬಂದು ವ್ಯಕ್ತಿಗಾಗಿ ಹುಡುಕಾಡಿದರು. ಬಳಿಕ ಆ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡರು. ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದು ಸುಮಾರು 2012ರಲ್ಲಿ ನಡೆದ ಘಟನೆ.
ಅದರ ನಂತರ ಸ್ಟಾಲಿನ್ ಮಿಷನರೀಸ್ ಆಫ್ ಚಾರಿಟಿ (MOC) ಅನ್ನು ಸಂಪರ್ಕಿಸಿದರು. ಆರೋಗ್ಯದ ಸ್ಥಿತಿ ಸುಧಾರಿಸುವವರಿಗೆ ವ್ಯಕ್ತಿಯ ಆರೈಕೆಗಾಗಿ ಬಿಟ್ಟರು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರ ಸ್ಮರಣೆಯು ಹಿಂತಿರುಗಲು ಸಾಧ್ಯವಾಗಲಿಲ್ಲ. ಆದರೆ ವ್ಯಕ್ತಿ ಕೆಲವೊಮ್ಮೆ ಆಂಧ್ರಪ್ರದೇಶದ ನಗರ ಮತ್ತು ಜಿಲ್ಲೆಯ ಹೆಸರಾದ ಶ್ರೀಕಾಕುಲಂ ಎಂಬ ಪದವನ್ನು ಉಚ್ಚರಿಸುವುದನ್ನು ಸ್ಟಾಲಿನ್ ಗಮನಿಸಿದ್ದರು.

ಕೊನೆಗೂ ಫಲಿಸಿತು ಎಂಓಸಿ ಶ್ರಮ
ಬರಾಲ್ ಅವರ ಸ್ಥಿತಿ ಸುಧಾರಿಸಿದಾಗ, MOC ಅವರನ್ನು ಶ್ರೀಕಾಕುಳಂ ಬಳಿಯ ಕೇಂದ್ರಕ್ಕೆ ವರ್ಗಾಯಿಸಿತು. ಮಿಷನರಿಗಳು ಹಳ್ಳಿಗಳಿಗೆ ಹೋಗುವಾಗ ಈ ವ್ಯಕ್ತಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಯಾರಾದರೂ ಅವನನ್ನು ಗುರುತಿಸುತ್ತಾರೆ ಎಂದು MOC ಆಶಿಸಿತು ಆದರೆ ಅದು ಸಂಭವಿಸಲಿಲ್ಲ. ಈ ವ್ಯಕ್ತಿಯ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಗಳು ಶುರುವಾದವು. ಹೆಸರೇ ಗೊತ್ತಿಲ್ಲದ ವ್ಯಕ್ತಿ ಕುಟುಂಬವನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ವ್ಯಾಪಕ ಹುಡುಕಾಟದ ನಂತರ ಅಂತಿಮವಾಗಿ ಪತಿಗ್ರಾಮ್, ಬಮನ್ಲಾ, ಪುರಿಯಲ್ಲಿ ಬರಲ್ ಕುಟುಂಬವನ್ನು ಕಂಡುಹಿಡಿಯಲಾಯಿತು.

ಮನೆಯಲ್ಲಿ ಸಂತಸದ ವಾತಾವರಣ
ಪಶ್ಚಿಮ ಬಂಗಾಳದ ರೇಡಿಯೋ ಕ್ಲಬ್‌ನ (ಡಬ್ಲ್ಯುಬಿಆರ್‌ಸಿ) ಕಾರ್ಯದರ್ಶಿ ಅಂಬರೀಷ್ ನಾಗ್ ಬಿಸ್ವಾಸ್ ಮಾತನಾಡಿ, ಬರಾಲ್‌ಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ದೃಷ್ಟಿ ಕಳೆದುಕೊಂಡಿದ್ದಾರೆ. ಅವರು ತಂದೆಯ ಚಿತ್ರವನ್ನು ನೋಡಿ, ಅವರು ದಿಗ್ಭ್ರಮೆಗೊಂಡರು. ನಂತರ ಅಳಲು ಪ್ರಾರಂಭಿಸಿದರು. ಬರಾಲ್ ಅವರ ಕುಟುಂಬ ಶ್ರೀಮಂತ ಕುಟುಂಬವಾಗಿದೆ. ಅವರಿಗೆ ಚಂಡಮಾರುತದ ನಂತರ ಬರಾಲ್ ಹೇಗೆ ಕಾಣೆಯಾಗಿದ್ದಾರೆ ಎಂದು ತಿಳಿದಿರಲಿಲ್ಲ. ಅವರು ಸಾವನ್ನಪ್ಪಿದ್ದಾರೆಂದು ಅವರು ಭಾವಿಸಿದ್ದರು. ಚಂಡಮಾರುತದ ಸಮಯದಲ್ಲಿ ಬರಾಲ್ ಸ್ಮರಣೆಯನ್ನು ಕಳೆದುಕೊಂಡರು. ಬಳಿಕ ಅವರು ಮನೆಗೆ ಮರಳಿದ್ದ ಮಕ್ಕಳಿಗೆ ಸಂತಸ ತಂದಿದೆ ಎಂದು ಹೇಳಿದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications