Ambassador Car: 1964ರ ಅಂಬಾಸಿಡರ್ ಕಾರಿನ ದರದ ಬಿಲ್ ವೈರಲ್
ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರು ಇಟ್ಟವನೇ ದೊಡ್ಡ ಸಾಹುಕಾರ ಎಂಬ ಮಾತಿತ್ತು. ಅಷ್ಟೇ ಅಲ್ಲದೆ ಸರ್ಕಾರಿ ಕಚೇರಿಗಳಿಗೂ ಇದನ್ನೇ ಹೆಚ್ಚಾಗಿ ಬಳಕ್ಕೆ ಮಾಡುತ್ತಿದ್ದರು. ದಿನಗಳೆದಂತೆ ಈ ಕಾರು ಸಂಪೂರ್ಣವಾಗಿ ನಿಂತುಹೋಯಿತು. ಆದರೆ ಕೂಡ ಇದರ ಹೆಸರು ಮಾತ್ರ ಕೇಳಿಬರುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ ಕಾರು ಇದಾಗಿದೆ. ಇನ್ನು ಇದೀಗ ಹಳೇ ಕಾಲದ ಈ ಕಾರಿನ ಬಿಲ್‌ವೊಂದು ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಆಗ ಇದರ ಬೆಲೆ ಎಷ್ಟಿತ್ತು ಹಾಗೂ ವಿಶೇಷತೆಗಳೇನು ಎಂದು ಇಲ್ಲಿ ತಿಳಿಯಿರಿ.
ರಾಜಮಹರಾಜರು, ಶ್ರೀಮಂತ ಕುಟುಂಬ ವರ್ಗದವರು ಈ ಕಾರನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಕಾರು ಇದೀಗ ಸಂಪೂರ್ಣವಾಗಿ ನಿಂತುಹೋದರೂ ಕೂಡ ಈಗಲೂ ಕೂಡ ಕೆಲವೊಬ್ಬರ ಮನೆಯಲ್ಲಿ ಇದನ್ನು ಕಾಣಬಹುದಾಗಿದೆ. ಇದೀಗ ಬಿಎಂಡಬ್ಲ್ಯೂ ಹೆಗೆ ಸದ್ದು ಮಾಡುತ್ತಿದೆಯೋ ಅದೇ ರೀತಿ ಆಗಿನ ಕಾಲದಲ್ಲಿ ಅಂಬಾಸಿಡರ್ ಹವಾ ಕ್ರಿಯೆಟ್ ಮಾಡಿತ್ತು.

ಇನ್ನು ಇದೀಗ 1964ರ ಕಾಲದ ಅಂಬಾಸಿಡರ್ ಕಾರಿನ ಬಿಲ್ ಒಂದು ವೈರಲ್ ಆಗಿದ್ದು, ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರಿನ ಬೆಲೆ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಬ್ರಿಟಿಷ್ ಮೂಲದ ಹೊರತಾಗಿಯೂ, ಅಂಬಾಸಿಡರ್ ಅನ್ನು ಭಾರತೀಯ ಕಾರು ಅಂತಲೇ ಕರೆಯುತ್ತಿದ್ದರು.
ಹಿಂದಿನ ಕಾಲದಲ್ಲಿ ಅಂಬಾಸಿಡರ್ ಕಾರು ರಸ್ತೆಗೆ ಬಂತೆಂದರೆ ಸಾಕು ಅದರ ಹವಾನೇ ಬೇರೆ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಕಾರುಗಳ ಸರದಾರ ಅಂತಲೇ ಇದು ಹೆಸರುವಾಸಿಯಾಗಿತ್ತು. ಭಾರತೀಯ ಸೇನೆಯ ಸೈನ್ಯಾಧಿಕಾರಿಯಿಂದ ಹಿಡಿದು ಸರ್ಕಾರಿ ಕಚೇರಿ ಅಧಿಕಾರಿಗಳು, ಶಾಸಕರ, ಸಂಸದರು ಇದೇ ಕಾರನ್ನೇ ಬಳಕೆ ಮಾಡುತ್ತಿದ್ದರು.
ಇದೀಗ ಕಾಲ ಬದಲಾದಂತೆ ಹೊಸ ಮಾದರಿಯ ಕಾರುಗಳು ಬರುತ್ತಿದ್ದಂತೆ ಈ ಹಳೆಯ ಅಂಬಾಸಿಡರ್ ಕಾರು ಮೂಲೆಗುಂಪಾಗಿದೆ. ಆದರೂ ಇದರ ಹವಾ ಇನ್ನೂ ಇದೆ ಎಂದರೆ ತಪ್ಪಾಗಲಾರದು. ಇದೀಗ Madras Trends ಎಂಬ ಫೇಸ್ಬುಕ್ ಖಾತೆಯಲ್ಲಿ 1964ರಲ್ಲಿ ತೆಗೆದುಕೊಂಡ ಅಂಬಾಸಿಡರ್ ಕಾರಿನ ಬಿಲ್ ಅನ್ನು ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 20, 1964ರಲ್ಲಿ ಈ ಕಾರನ್ನು ಖರೀದಿ ಮಾಡಲಾಗಿದ್ದು, ಅದರ ಬೆಲೆ 16,495 ರೂಪಾಯಿ ಆಗಿದೆ. ಇನ್ನು ಈ ಹಳೆ ಬಿಲ್ ಇದೀಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಈ ಬಿಲ್‌ನ ಪ್ರಕಾರ, ಕಾರಿನ ದರ 13,787 ರೂಪಾಯಿ, ಸೇಲ್ಸ್ ಟ್ಯಾಕ್ಸ್ 1493 ರೂಪಾಯಿ ಹಾಗೂ ಸಾರಿಗೆ ಶುಲ್ಕ 897 ರೂಪಾಯಿ ಜೊತೆಗೆ ನಂಬರ್ ಪ್ಲೇಟ್ಗೆ 7 ರೂಪಾಯಿ ಸೇರಿದಂತೆ ಮುಂತಾದ ಶುಲ್ಕಗಳನ್ನು ಸೇರಿ ಒಟ್ಟು 16,495 ರೂಪಾಯಿಗೆ ಕಾರನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಎಲ್ಲೋ ಕಣ್ಮರೆಯಾಗಿದ್ದ ಅಂಬಾಸಿಡರ್ ಕಾರು ಈ ಮೂಲಕವಾದರೂ ಸದ್ದು ಮಾಡುತ್ತಿದೆ ಎನ್ನುವುದೇ ವಿಶೇಷವಾಗಿದೆ.












Click it and Unblock the Notifications