ಭೂಮಿ ಮೇಲಿನ ಪ್ರತಿ ರಸ್ತೆಯೂ ‘ಚಿನ್ನ’ದ್ದೇ..! ಆದರೆ ಅದೊಂದು ಬಂಡೆ ಸಿಕ್ಕಬೇಕು ಅಷ್ಟೇ..!
ಭೂಮಿ ಮೇಲೆ ಇರುವ ಸಂಪತ್ತನ್ನು ಖಾಲಿ ಮಾಡಿದ್ದು ಆಯ್ತು ಈಗ ಬಾಹ್ಯಾಕಾಶದ ಮೇಲೂ ಮಾನವನ ಕಣ್ಣು ಬಿದ್ದಿದೆ. ಇಡೀ ಜಗತ್ತನ್ನೇ ಆಳಬೇಕು, ನಾವೇ ನಂ. 1 ಆಗಬೇಕು ಅಂತಾ ಪ್ರಪಂಚದ ಪ್ರತಿ ರಾಷ್ಟ್ರವೂ ಕನಸು ಕಾಣುತ್ತೆ. ಆದರೆ ಇದು ಅಷ್ಟು ಸುಲಭವಲ್ಲ, ಆದರೆ ಅದೊಂದು ಬಂಡೆ ಕಲ್ಲು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಆಳುವ ಶಕ್ತಿ ಬಂದುಬಿಡುತ್ತೆ. ಅರೆ ಯಾವುದಪ್ಪಾ ಬಂಡೆ ಕಲ್ಲು, ಆ ಬಂಡೆ ಕಲ್ಲಿನಲ್ಲಿ ಅಂತಹದ್ದು ಏನಿದೆ? ಅಂತಾ ಜಾಸ್ತಿ ಆಲೋಚಿಸಬೇಡಿ.
ಯಾಕಂದ್ರೆ ಅದು ಭೂಮಿ ಮೇಲೆ ಇರುವ ಬಂಡೆ ಅಲ್ಲ, ಅದು ಬಾಹ್ಯಾಕಾಶದ ಸಂಪತ್ತಿನ ಗೂಡು. ಅದರ ಹೆಸರೇ '16 ಸೈಕೀ'. ಇದುವರೆಗೂ ಬ್ರಹ್ಮಾಂಡದಲ್ಲಿ ಮಾನವರು ಪತ್ತೆ ಮಾಡಿರುವ ಕ್ಷುದ್ರಗ್ರಹಗಳ ಪೈಕಿ '16 ಸೈಕೀ' ಅತ್ಯಂತ ಸಂಪತ್ತು ಭರಿತ ಕ್ಷುದ್ರಗ್ರಹ. ಇದೀಗ 16 ಸೈಕೀ ಬಗ್ಗೆ ವಿಜ್ಞಾನಿಗಳು ಮತ್ತಷ್ಟು ಕುತೂಹಲಕಾರಿ ಮಾಹಿತಿ ಹೊರಹಾಕಿದ್ದಾರೆ. ಹಿಂದೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಂಪತ್ತು '16 ಸೈಕೀ' ಕ್ಷುದ್ರಗ್ರಹದಲ್ಲಿ ಇದೆ ಎಂಬುದನ್ನ ಬಾಹ್ಯಾಕಾಶ ಸಂಶೋಧಕರು ತಿಳಿಸಿದ್ದಾರೆ.

‘ಸೈಕೀ’ ಮೇಲೆ ನಾಸಾ ಕಣ್ಣು..!
ಅಮೆರಿಕದ ‘ನಾಸಾ' ಬಾಹ್ಯಾಕಾಶದಲ್ಲಿ ಒಂದಲ್ಲಾ ಒಂದು ಸಾಹಸ ಮಾಡುತ್ತಲೇ ಇರುತ್ತದೆ. ಹೀಗೆ ಕ್ಷುದ್ರಗ್ರಹ ಬಗೆಯಲು ಸಕಲ ಸಿದ್ಧತೆ ನಡೆಸಿದೆ. ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಅಲೆದಾಡುತ್ತಿರುವ ‘16 ಸೈಕೀ' ಎಂಬ ಕ್ಷುದ್ರಗ್ರಹ ಜಗತ್ತಿನ ಗಮನ ಸೆಳೆಯುತ್ತಿದೆ. ಸುಮಾರು 226 ಕಿ.ಮೀ. ವಿಸ್ತಿರ್ಣ ಇರುವ ಕ್ಷುದ್ರಗ್ರಹದಲ್ಲಿ ಊಹೆಗೆ ಮೀರಿ ಸಂಪತ್ತು ಅಡಗಿದೆ. ಚಿನ್ನ, ಬೆಳ್ಳಿ, ಕಬ್ಬಿಣ, ಪ್ಲಾಟಿನಂ ಮಾತ್ರವಲ್ಲ ಇನ್ನೂ ಅನೇಕ ಬೆಲೆಬಾಳುವ ಅದಿರು ‘16 ಸೈಕೀ' ಕ್ಷುದ್ರಗ್ರಹದಲ್ಲಿ ಅಡಗಿದೆ. ಅಕಸ್ಮಾತ್ ಈ ಅದಿರನ್ನ ಭೂಮಿಗೆ ತಂದು ಮಾರಿದರೆ, ಅದರ ಮೊತ್ತ 1 ಕ್ವಾಡ್ರಿಲಿಯನ್ ಡಾಲರ್ ಆಗುತ್ತದೆ. ಕ್ವಾಡ್ರಿಲಿಯನ್ ಅಂದರೆ ಒಂದರ ಮುಂದೆ 15 ಸೊನ್ನೆ. ಅಂದ್ರೆ ಹತ್ತು ಕೋಟಿ ಕೋಟಿಗೆ ಸಮ. ಈಗ ಲೆಕ್ಕ ಹಾಕಿ ಕ್ಷುದ್ರಗ್ರಹ ಅದೆಷ್ಟು ಬೆಲೆ ಬಾಳಬಹುದು ಅಂತಾ. ಇಂತಹ ಕ್ಷುದ್ರಗ್ರಹದ ಸ್ಯಾಂಪಲ್ ತರುವ ಸಾಹಸಕ್ಕೆ ಅಮೆರಿಕದ ನಾಸಾ ಆಗಲೇ ರಣತಂತ್ರ ರೂಪಿಸಿದೆ.

‘16 ಸೈಕೀ' ಮೇಲೆ ಹದ್ದಿನ ಕಣ್ಣು..!
ಕ್ಷುದ್ರಗ್ರಹದ ಸ್ಯಾಂಪಲ್ ತರಲು ನೌಕೆ ಉಡಾವಣೆ ಮಾಡಿದರೂ ಅದು ಗುರಿ ತಲುಪಲು ಮತ್ತಷ್ಟು ವರ್ಷ ಬೇಕಾಗಬಹುದು. ಆದರೆ ಅಲ್ಲಿಯವರೆಗೂ ‘16 ಸೈಕೀ' ಕ್ಷುದ್ರಗ್ರಹ ಕಣ್ತಪ್ಪಿ ಹೋಗದಂತೆ ನಾಸಾ ಸಂಸ್ಥೆ ಕ್ಷಣ ಕ್ಷಣಕ್ಕೂ ಈ ಕ್ಷುದ್ರಗ್ರಹ ಹಾಗೂ ಅದರ ಚಲನವಲನ ಗಮನಿಸುತ್ತಿದೆ. ಮಂಗಳ, ಗುರುಗ್ರಹದ ಮಧ್ಯೆ ಇರುವ ಕ್ಷುದ್ರಗ್ರಹ ಸಾಲಿನಲ್ಲಿ ಇಂತಹ ಸಾವಿರಾರು ಬೆಲೆಬಾಳುವ ಕ್ಷುದ್ರಗ್ರಹಗಳು ಅಡಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಗತ್ತಿನ ಘಟಾನುಘಟಿ ದೇಶಗಳು ಕ್ಷುದ್ರಗ್ರಹ ಸಾಲಿನ ಮೇಲೆ ಕಣ್ಣಿಟ್ಟು ಕೂತಿವೆ. ಹೇಗಾದರೂ ಅಲ್ಲಿ ಗಣಿಗಾರಿಕೆ ನಡೆಸಬೇಕು ಎಂಬ ಉದ್ದೇಶ ಹೊಂದಿವೆ.

2022ರ ಆಗಸ್ಟ್‌ನಲ್ಲಿ ಲಾಂಚ್..!
ನಾಸಾ ನೌಕೆ ‘16 ಸೈಕೀ' ಕ್ಷುದ್ರಗ್ರಹ ತಲುಪುವ ಹಾದಿ ಸುಲಭವಾಗಿಲ್ಲ. ಕ್ಷುದ್ರಗ್ರಹ ತಲುಪಲು ಸಾಕಷ್ಟು ಶ್ರಮ ವಹಿಸಬೇಕಿದೆ. 2022ರ ಆಗಸ್ಟ್‌ನಲ್ಲಿ ‘ಸೈಕೀ' ಬಾಹ್ಯಾಕಾಶ ನೌಕೆಯನ್ನು ನಾಸಾ ಲಾಂಚ್ ಮಾಡಲಿದೆ. ಆದರೆ ನೌಕೆ ಗುರಿ ತಲುಪುವುದು 2026ರಲ್ಲಿ. 2023ರಲ್ಲಿ ಮಂಗಳ ಗ್ರಹವನ್ನು ‘ಸೈಕೀ' ಬಾಹ್ಯಾಕಾಶ ನೌಕೆ ದಾಟಲಿದ್ದು, ಅಲ್ಲಿಂದ ‘16 ಸೈಕೀ' ಕ್ಷುದ್ರಗ್ರಹ ತಲುಪಲಿದೆ. ಲ್ಯಾಂಡಿಂಗ್ ತುಂಬಾ ಸೂಕ್ಷ್ಮವಾದ ಪ್ರಕ್ರಿಯೆ. ಏಕೆಂದರೆ ಸ್ವಲ್ಪ ಎಡವಟ್ಟಾದರೂ ಇಷ್ಟುದಿನ ಮಾಡಿದ ಕೆಲಸವಷ್ಟೂ ವ್ಯರ್ಥವಾಗಲಿದೆ. ಹೀಗಾಗಿ ಹೆಜ್ಜೆ ಹೆಜ್ಜೆಗೂ ಕಂಟಕಗಳು ‘ಸೈಕೀ' ಬಾಹ್ಯಾಕಾಶ ನೌಕೆಗೆ ಎದುರಾಗಲಿವೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!
ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.
Recommended Video

ಊಹೆಗೂ ನಿಲುಕದಷ್ಟು ಸಂಪತ್ತು..!
ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications