ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ?

|
Google Oneindia Kannada News

ನವದೆಹಲಿ, ಮಾರ್ಚ್ 24: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸುದ್ದಿ ಇಂದು ಟ್ವಿಟ್ಟರ್‌ನಲ್ಲಿ ಭಾರಿ ಸದ್ದು ಮಾಡಿದೆ, ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರಾ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 47262 ಮಂದಿಗೆ ಸೋಂಕು!ಭಾರತದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 47262 ಮಂದಿಗೆ ಸೋಂಕು!

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದೆ, ನಿತ್ಯ 40 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಏನೂ ಹೇಳದಿದ್ದರೂ ಕೂಡ ದೇಶಾದ್ಯಂತ ಲಾಕ್‌ಡೌನ್ ಎನ್ನುವ ಕುರಿತು ಸುಳ್ಳು ಸುದ್ದಿ ಹಬ್ಬುತ್ತಿದೆ.

Fact Check: PM Narendra Modi To Address The Nation Tonight At 8 PM Is False News

ಇದಕ್ಕೆಲ್ಲಾ ಸರ್ಕಾರ ಉತ್ತರ ನೀಡಿದೆ, ಲಸಿಕೆ ಪಡೆದುಕೊಂಡವರೂ ಕೂಡ ಲಸಿಕೆ ಪಡೆದಿದ್ದೇವೆ ಎಂದು ಮಾಸ್ಕ್ ಇಲ್ಲದೆ ಓಡಾಡಬೇಡಿ, ಕೋವಿಡ್ 19 ನಿಯಮಗಳನ್ನು ಪಾಲಿಸಿ, ದೇಶದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಯಾವ ಯೋಚನೆಯೂ ಇಲ್ಲ,ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಹೇಳಿದೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ ಎನ್ನುವ ವಿಷಯವೂ ಕೂಡ ಹರಡಿದ್ದು, ಇದು ಸುಳ್ಳು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಯಾವುದೇ ಭಾಷಣ ಮಾಡುತ್ತಿಲ್ಲ ಎಂದು ಕೂಡ ತಿಳಿದುಬಂದಿದೆ.

Fact Check: ಸಸ್ಯಾಹಾರಿ ಆಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದೇ?Fact Check: ಸಸ್ಯಾಹಾರಿ ಆಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದೇ?

ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆಯ ಹರಡುವಿಕೆ ಭೀತಿ ದಿನೇ ದಿನೆ ಹೆಚ್ಚುತ್ತಿದೆ. ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ.

ಕಳೆದ 24 ಗಂಟೆಗಳಲ್ಲೇ 47262 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ 23,907 ಸೋಂಕಿತರು ಗುಣಮುಖರಾಗಿದ್ದು, ಕೊರೊನಾದಿಂದ ಒಂದೇ ದಿನ 275 ಜನರು ಪ್ರಾಣ ಬಿಟ್ಟಿದ್ದಾರೆ.

Fact Check

ಕ್ಲೇಮು

ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಪರಿಸಮಾಪ್ತಿ

ಪ್ರಧಾನಿ ನರೇಂದ್ರ ಮೋದಿ ಇಂದು ಯಾವುದೇ ಭಾಷಣವನ್ನು ಮಾಡುತ್ತಿಲ್ಲ, ಇದು ಸುಳ್ಳು ಸುದ್ದಿ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Prime Minister Narendra Modi To Address The Nation Tonight At 8 PM Is False News.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X