• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಚೀನಾದಿಂದ ಭಾರತದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಳ?

|

ನವದೆಹಲಿ, ಅಕ್ಟೋಬರ್ 20: ಭಾರತವು ಚೀನಾದಿಂದ ಮಾಡಿಕೊಳ್ಳುತ್ತಿದ್ದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪತ್ರಕರ್ತ ಪಂಕಜ್ ಪಚೌರಿ ಟ್ವೀಟ್ ಮಾಡಿದ್ದು, ಅದರಲ್ಲಿ ಭಾರತವು ಚೀನಾ ಮೇಲೆ ಕೆಂಗಣ್ಣು ಬೀರುತ್ತಿದೆ. ಆದರೆ ಏಪ್ರಿಲ್‌ನಿಂದ ಆಗಸ್ಟ್ ನಡುವೆ ಚೀನಾದಿಂದ ಆಮದು ಮಾಡಿಕೊಂಡಿರುವ ಪ್ರಮಾಣ ಶೇ.27ರಷ್ಟು ಹೆಚ್ಚಾಗಿದೆ. ರಾಜಕೀಯ ವ್ಯವಹಾರವು ನಿಜವಾದ ವ್ಯವಹಾರದ ಹಾದಿಯಲ್ಲಿ ಎಂದಿಗೂ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

Fact Check: ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಿತಾ ಚೀನಾ?

ಸರ್ಕಾರವು ಇದಕ್ಕೆ ಪ್ರತಿಕ್ರಿಯಿಸಿದ್ದು, ಇವರ ಆರೋಪ ಶುದ್ಧ ಸುಳ್ಳು ಎಂದು ಹೇಳಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಶೇ.27ರಷ್ಟು ಕುಸಿದಿದೆ. ಅದೇ ಭಾರತದಿಂದ ಚೀನಾಗೆ ಮಾಡುವ ರಫ್ತಿನ ಪ್ರಮಾಣ ಶೇ.27ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಸಚಿವ ಪಿಯೂಷ್ ಗೋಯೆಲ್ ಮಾತನಾಡಿ, ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಶೇ.27ರಷ್ಟು ಕುಸಿದಿದೆ ಎಂದಿದ್ದರು.

ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಹಾಗೂ ಭಾರತದ ನಡುವೆ ಸಂಘರ್ಷ ನಡೆಯುತ್ತಿದೆ. ಚೀನಾವು ಚಳಿಗಾಲದಲ್ಲಿ ಭಾರತದ ಮೇಲೆ ಯುದ್ಧ ಸಾರಲು ಸಿದ್ಧವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

Fact Check

ಕ್ಲೇಮು

ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಚೀನಾದಿಂದ ಭಾರತದ ಆಮದು ಶೇ.27ರಷ್ಟು ಹೆಚ್ಚಳ

ಪರಿಸಮಾಪ್ತಿ

ಚೀನಾದಿಂದ ಭಾರತದ ಆಮದು ಶೇ.27ರಷ್ಟು ಹೆಚ್ಚಾಗಿಲ್ಲ ಕಡಿಮೆಯಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Amid the border tensions between India and China, a tweet is being widely circulated on social media platforms claiming that India's imports from China have increased by 27 percent during April-August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X