ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮಾರ್ಚ್ 2021ರವರೆಗೆ ಕೊರೊನಾ ಲಸಿಕೆ ಖರೀದಿಸಿಯೇ ಇರಲಿಲ್ಲ ಭಾರತ?

|
Google Oneindia Kannada News

ನವದೆಹಲಿ, ಮೇ 03: ಭಾರತವು ಮಾರ್ಚ್ 2021ರವರೆಗೆ ಕೊರೊನಾ ಲಸಿಕೆಯನ್ನು ಖರೀದಿಸಿಯೇ ಇರಲಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಅದು ಸುಳ್ಳು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕಳೆದ ವರ್ಷ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ 1732.50 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಏಪ್ರಿಲ್ 28ರಂದೇ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ದಿನಾಂಕದಂತೆ, 10 ಕೋಟಿ ಡೋಸ್‌ಗಳ ಪೈಕಿ ಮೇ 3 ರವರೆಗೆ 8.744 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್ ಲಸಿಕೆಗಾಗಿ ಕೇಂದ್ರವು ಯಾವುದೇ ಹೊಸ ಆರ್ಡರ್ ನೀಡಿಲ್ಲ ಎಂದು ಆರೋಪಿಸಿರುವ ಮಾಧ್ಯಮ ವರದಿಗಳು ತಪ್ಪು ಮತ್ತು ಸತ್ಯಕ್ಕೆ ದೂರವಾದವು ಎಂದು ಕೇಂದ್ರ ಹೇಳಿದೆ.

ಟಿಡಿಎಸ್ ನಂತರ 1699.50 ಕೋಟಿ ರೂ.ಗಳಷ್ಟಿದ್ದ ಮೊತ್ತವನ್ನು ಏಪ್ರಿಲ್ 28 ರಂದು ಎಸ್‌ಐಐ ಸ್ವೀಕರಿಸಿದೆ ಎಂದು ಸಚಿವಾಲಯ ಹೇಳಿದೆ.

ಮೇ 2ರವರೆಗೂ, ಕೇಂದ್ರವು 16.54 ಕೋಟಿ ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದೇ ವೇಳೆ ಇನ್ನೂ 78 ಲಕ್ಷಕ್ಕೂ ಹೆಚ್ಚು ಡೋಸ್ ಗಳು ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ 56 ಲಕ್ಷಕ್ಕೂ ಹೆಚ್ಚಿನ ಡೋಸ್ ಗಳನ್ನು ರಾಜ್ಯಗಳು ಮತ್ತು ಯುಟಿಗಳು ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.

Fact-check: Govt Of India Not Placed Any New Orders For coronavirus Vaccines Since March 2021?

ಅಲ್ಲದೆ ಹೆಚ್ಚುವರಿಯಾಗಿ, ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಐದು ಕೋಟಿ ಕೋವಾಕ್ಸಿನ್ ಡೋಸ್ ಗಳಿಗೆ ಏಪ್ರಿಲ್ 28 ರಂದು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್‌ಗೆ (ಬಿಬಿಐಎಲ್) 787.50 ಕೋಟಿ ರೂ.ಗಳ 100 ಶೇಕಡಾ ಮುಂಗಡವನ್ನು ಬಿಡುಗಡೆ ಮಾಡಲಾಗಿದೆ.

ಈ ಮೊತ್ತವನ್ನು ಅವರು ಏಪ್ರಿಲ್ 28 ರಂದು ಸ್ವೀಕರಿಸಿದ್ದಾರೆ. ಕೊವಾಕ್ಸಿನ್ ಲಸಿಕೆ ಸರಬರಾಜುಗಾಗಿ ಎರಡು ಕೋಟಿ ಡೋಸ್‌ಗಳ ಪೈಕಿ ಮೇ 3 ರವರೆಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Fact Check

ಕ್ಲೇಮು

ಮಾರ್ಚ್ 2021ರವರೆಗೆ ಭಾರತ ಸರ್ಕಾರ ಕೋವಿಡ್ ಲಸಿಕೆಗಳನ್ನೇ ಖರೀದಿಸಿರಲಿಲ್ಲ

ಪರಿಸಮಾಪ್ತಿ

ಕಳೆದ ವರ್ಷವೂ ಸರ್ಕಾರ ಕೊರೊನಾ ಲಸಿಕೆಗಳನ್ನು ಖರೀದಿಸಿತ್ತು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Media reports alleging that Centre has not placed any fresh order for COVID19 vaccines are incorrect and not based on facts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X