Fact Check: ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಕೇಂದ್ರದಿಂದ 11,000 ರೂ ನೆರವು?
ನವದೆಹಲಿ, ಸೆಪ್ಟೆಂಬರ್ 22: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ಶುರುವಾದಂತೆಯೇ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಲೆಕ್ಕವಿಲ್ಲದಷ್ಟು ಸುಳ್ಳು ಸುದ್ದಿಗಳು ಸಾಂಕ್ರಾಮಿಕ ಸೋಂಕಿನಂತೆಯೇ ಹಬ್ಬುತ್ತಿವೆ. ಕೊರೊನಾ ವೈರಸ್ ಪಿಡುಗಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 11,000 ರೂ ಒದಗಿಸುತ್ತಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋವಿಡ್ 19ನಿಂದಾಗಿ ದೇಶದ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಶುಲ್ಕ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರವು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ವಿದ್ಯಾರ್ಥಿವೇತನದ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಆದರೆ ಸರ್ಕಾರ ಈ ರೀತಿಯ ಯಾವುದೇ ಘೋಷಣೆಯನ್ನು ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯವಲ್ಲ. ಇದನ್ನು ಸುಳ್ಳು ಸುದ್ದಿಗಳನ್ನು ಹೆಕ್ಕಿ ತೆಗೆದು ವಿವರಣೆ ನೀಡುವ ಸರ್ಕಾರದ ಪಿಐಬಿಯ ಫ್ಯಾಕ್ಟ್ ಚೆಕ್ ತಂಡ ಸ್ಪಷ್ಟಪಡಿಸಿದೆ.

'ಕೊರೊನಾ ವೈರಸ್ ಪಿಡುಗಿನ ಕಾರಣದಿಂದ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶುಲ್ಕ ಪಾವತಿ ಮಾಡಲು ಸಹಾಯವಾಗುವಂತೆ ಕೇಂದ್ರ ಸರ್ಕಾರವು 11,000 ರೂ ಒಗಿಸುತ್ತಿದೆ ಎಂದು ವೆಬ್‌ಸೈಟ್ ಒಂದರಲ್ಲಿ ಹೇಳಲಾಗಿದೆ' ಎಂಬುದಾಗಿ ಪಿಐಬಿ ತಿಳಿಸಿದೆ.

'ಕೇಂದ್ರ ಸರ್ಕಾರ ಯಾವುದೇ ಅಂತಹ ಘೋಷಣೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಮೂಲಕ ನೆರವು ನೀಡಲಾಗುತ್ತದೆ ಎಂಬ ಹೇಳಿಕೆ ಸುಳ್ಳು' ಎಂದು ಅದು ಸ್ಪಷ್ಟಪಡಿಸಿದೆ.

Fact Check
ಕ್ಲೇಮು
ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಕೇಂದ್ರದಿಂದ 11,000 ರೂ ನೆರವು ನೀಡಲಾಗುತ್ತದೆ.
ಪರಿಸಮಾಪ್ತಿ
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಅಂತಹ ಯಾವುದೇ ಘೋಷಣೆ ಮಾಡಿಲ್ಲ.












Click it and Unblock the Notifications