• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಈ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಬಾಯ್‌ಫ್ರೆಂಡ್ ಕಡ್ಡಾಯ!

|
Google Oneindia Kannada News

ನವದೆಹಲಿ, ಫೆಬ್ರವರಿ 2: ಹೊಸ ವರ್ಷ ಕಳೆದ ಫೆಬ್ರವರಿ ತಿಂಗಳು ಬರುತ್ತಿದ್ದಂತೆಯೇ ಎಲ್ಲರ ಗಮನ 14ನೇ ತಾರೀಕಿನತ್ತ ಹೋಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು, ಯುವ ಜನರಲ್ಲಿ ಅದರದ್ದೇ ಚರ್ಚೆ. ಪ್ರೇಮಿಗಳ ದಿನ ಸಮೀಪಿಸುತ್ತಿರುವಾಗ ಆಸಕ್ತಿ ಹೆಚ್ಚುವುದು ಸಹಜ. ಹೀಗಿರುವಾಗ ಶಾಲೆಯೊಂದರ ಆಸಕ್ತಿಕರ ಸುತ್ತೋಲೆಯೊಂದು ಸದ್ದು ಮಾಡುತ್ತಿದೆ.

ಚೆನ್ನೈ ಸಮೀಪದ ಕಟ್ಟಂಕುಲತ್ತೂರ್‌ನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಆಗ್ರಾದ ಸೇಂಟ್ ಜಾನ್ಸ್‌ ಕಾಲೇಜ್‌ನ ಎರಡು ವಿಚಿತ್ರ ಸುತ್ತೋಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸುತ್ತೋಲೆಯ ಪ್ರಕಾರ ಇಲ್ಲಿನ ಎಲ್ಲ ವಿದ್ಯಾರ್ಥಿನಿಯರು ಬಾಯ್‌ಫ್ರೆಂಡ್ ಹೊಂದುವುದು ಕಡ್ಡಾಯವಂತೆ!

Fact Check: ಈ ಭಯಾನಕ ವಿಡಿಯೋ ಶಿವಮೊಗ್ಗದ ಸ್ಫೋಟದ್ದಲ್ಲFact Check: ಈ ಭಯಾನಕ ವಿಡಿಯೋ ಶಿವಮೊಗ್ಗದ ಸ್ಫೋಟದ್ದಲ್ಲ

ಭದ್ರತಾ ಕಾರಣಗಳಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಾಯ್‌ಫ್ರೆಂಡ್ ಇಲ್ಲದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆವರಣದೊಳಗೆ ಬರಲು ಅವಕಾಶ ನೀಡುವುದಿಲ್ಲ. ಕ್ಯಾಂಪಸ್ ಒಳಗೆ ಪ್ರವೇಶಿಸುವಾಗ ಅವರು ತಮ್ಮ ಬಾಯ್‌ಫ್ರೆಂಡ್ ಜತೆಗಿನ ಇತ್ತೀಚಿನ ಫೋಟೊವನ್ನು ತೋರಿಸುವುದು ಕಡ್ಡಾಯ ಎಂದು ಸುತ್ತೋಲೆಗಳಲ್ಲಿ ಸೂಚನೆ ನೀಡಲಾಗಿದೆ. ಮುಂದೆ ಓದಿ.

Fact Check: ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿFact Check: ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿ

ಸುತ್ತೋಲೆ ಪ್ರಸ್ತಾಪವಿಲ್ಲ

ಸುತ್ತೋಲೆ ಪ್ರಸ್ತಾಪವಿಲ್ಲ

ಈ ಸುತ್ತೋಲೆ ನಿಜ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ 'ಒನ್ ಇಂಡಿಯಾ' ತಂಡ ಅದರ ಬಗ್ಗೆ ಎಸ್‌ಆರ್ಎಂ ಮತ್ತು ಸೇಂಟ್ ಜಾನ್ಸ್‌ನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿದಾಗ ಈ ರೀತಿಯ ಸುತ್ತೋಲೆ ಕಂಡುಬಂದಿಲ್ಲ. ಮಿಗಿಲಾಗಿ ಈ ಎರಡೂ ಸುತ್ತೋಲೆಗಳು ಹೆಚ್ಚೂ ಕಡಿಮೆ ಒಂದೇ ರೀತಿ ಇವೆ.

ನಕಲಿ ಸುತ್ತೋಲೆ

ನಕಲಿ ಸುತ್ತೋಲೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುತ್ತೋಲೆ ಕಟ್ಟಂಕುಲತ್ತೂರ್‌ನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಗಮನಕ್ಕೆ ಬಂದಿದ್ದು, ಅದು ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ತನ್ನ ಹೆಸರಲ್ಲಿ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವಂತೆ ಎಲ್ಲ ವಿದ್ಯಾರ್ಥಿನಿಯರು ಕನಿಷ್ಠ ಒಬ್ಬ ಬಾಯ್‌ಫ್ರೆಂಡ್ ಹೊಂದುವುದು ಕಡ್ಡಾಯ ಎನ್ನುವುದು ಸುಳ್ಳು. ಇದು ನಕಲಿ ಸುತ್ತೋಲೆ ಎಂದು ಸ್ಪಷ್ಟಪಡಿಸಿದೆ.

ಕಠಿಣ ಕ್ರಮದ ಎಚ್ಚರಿಕೆ

ಕಠಿಣ ಕ್ರಮದ ಎಚ್ಚರಿಕೆ

'ಎಸ್‌ಆರ್‌ಎಂಐಎಸ್‌ಟಿಯ ಆಡಳಿತಾಧಿಕಾರಿ/ರಿಜಿಸ್ಟ್ರಾರ್ ಹೆಸರು ಮತ್ತು ಹುದ್ದೆಯಡಿ ನಕಲಿ ಮತ್ತು ಅಸಮರ್ಪಕವಾದ ಸುತ್ತೋಲೆಗಳು ಹರಿದಾಡುತ್ತಿರುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಈ ಸುತ್ತೋಲೆಗಳು ಸುಳ್ಳು ಮಾಹಿತಿಯನ್ನು ಒಳಗೊಂಡಿದ್ದು, ನಮ್ಮ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತರುವಂತಿವೆ' ಎಂದು ತಿಳಿಸಿದೆ.


ಈ ರೀತಿಯ ಅನಧಿಕೃತ ಪತ್ರಗಳನ್ನು ರವಾನಿಸುವ ವ್ಯಕ್ತಿಗಳನ್ನು ಸಂಸ್ಥೆಯಿಂದ ಉಚ್ಚಾಟನೆ ಮಾಡಲಾಗುವುದು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಎಸ್‌ಆರ್ಎಂಐಎಸ್‌ಟಿ ಸಂಸ್ಥೆಯು ಸೈಬರ್ ಪೊಲೀಸರಿಗೆ ದೂರು ಸಹ ನೀಡಿದೆ.

ಸೇಂಟ್ ಜಾನ್ಸ್ ಸ್ಪಷ್ಟೀಕರಣ

ಸೇಂಟ್ ಜಾನ್ಸ್ ಸ್ಪಷ್ಟೀಕರಣ

ಈ ಸುತ್ತೋಲೆ ನಕಲಿ ಎಂದು ಸೇಂಟ್ ಜಾನ್ಸ್ ಕಾಲೇಜ್ ಕೂಡ ಸ್ಪಷ್ಟಪಡಿಸಿದೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಕಾಲೇಜು ಅಡಳಿತ ಮಂಡಳಿ, ಕಾಲೇಜಿನ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್‌ನಲ್ಲಿ ನಕಲಿ ಸುತ್ತೋಲೆ ಹರಿದಾಡುತ್ತಿದೆ. ಕೆಲವು ಕಿಡಿಗೇಡಿಗಳು ಅಂತರ್ಜಾಲದಲ್ಲಿ ಈ ರೀತಿ ಸುತ್ತೋಲೆ ಹರಿಬಿಟ್ಟಿದ್ದಾರೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರನ್ನು ಪೊಲೀಸರ ಸಹಾಯದಿಂದ ಕಠಿಣವಾಗಿ ಶಿಕ್ಷಿಸಲಾಗುವುದು. ಈ ರೀತಿ ಉದ್ದೇಶಪೂರ್ವಕವಾಗಿ ಹರಡುವ ವಿಚಾರಗಳನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸಬೇಕು ಎಂದು ಹೇಳಿವೆ.

Fact Check

ಕ್ಲೇಮು

ವಿದ್ಯಾರ್ಥಿನಿಯರು ಬಾಯ್‌ಫ್ರೆಂಡ್ ಹೊಂದುವುದು ಕಡ್ಡಾಯ ಎಂದು ಎರಡು ಕಾಲೇಜುಗಳು ಸುತ್ತೋಲೆ ಹೊರಡಿಸಿವೆ.

ಪರಿಸಮಾಪ್ತಿ

ಈ ರೀತಿಯ ಸುತ್ತೋಲೆಗಳು ನಕಲಿ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact check: Two circulars of SRMIST at Kattankulathur and St. Johns College in Agra claiming it is mandatory for all female students to have a boyfriend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X