Fact check: ರಾಹುಲ್ ಗಾಂಧಿಯನ್ನು ಬೆಂಬಲಿಸಿದ ವಿರಾಟ್ ಕೊಹ್ಲಿ?
ನವದೆಹಲಿ ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ. ಹೀಗಂತ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ವೊಂದನ್ನು ಮಾಡಲಾಗಿದೆ. ಇದನ್ನು ಹಲವಾರು ಜನ ನಿಜವೆಂದು ಕೂಡ ನಂಬಿದ್ದಾರೆ. ಹಾಗಾದರೆ ವೈರಲ್ ಆದ ಪೋಸ್ಟ್ ನಿಜಾನಾ? ಪೋಸ್ಟರ್ ಹಿಂದಿರುವ ಸತ್ಯವೇನು? ಎಂದು ನೋಡೋಣ.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ದಿನದಿಂದ ವಿರಾಟ್ ಕೊಹ್ಲಿಯ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆಂದು ಹೇಳಿಕೊಳ್ಳುವ ಪೋಸ್ಟರ್ ಒಂದು ವೈರಲ್ ಆಗಿದೆ. ವೈರಲ್ ಆದ ಸಂದೇಶದ ಪ್ರಕಾರ, ವಿರಾಟ್ ಕೊಹ್ಲಿ ಅವರು ರಾಹುಲ್ ಗಾಂಧಿಯನ್ನು ಬೆಂಬಲಿಸುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಇದೊಂದು ನಕಲಿ ಇನ್‌ಸ್ಟಾಗ್ರಾಮ್ ಖಾತೆ ಎಂದು ಇಂಡಿಯಾ.ಕಾಮ್ ಕಂಡು ಹಿಡಿದೆ. ಇದರ ಮೂಲಗಳ ಪ್ರಕಾರ, ವೈರಲ್ ಆದ ಪೋಸ್ಟರ್ ವಿರಾಟ್ ಕೊಹ್ಲಿ ಅವರ ನಿಜವಾದ ಇನ್‌ಸ್ಟಾಗ್ರಾಮ್ ಖಾತೆಯಿಂದ ವೈರಲ್ ಆಗಿಲ್ಲ. ಬದಲಿಗೆ ಅವರ ಹೆಸರಿನಲ್ಲಿದ್ದ ನಕಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ವೈರಲ್ ಮಾಡಲಾಗಿದೆ.
ಇಂಡಿಯಾ.ಕಾಮ್ ತನಿಖೆಯಿಂದ ತಿಳಿದುಬಂದ ಮಾಹಿತಿ ಪ್ರಕಾರ, ವೈರಲ್ ಫೋಟೋವನ್ನು ಮಾರ್ಫ್ ಮಾಡಲಾಗಿದೆ.ಕೊಹ್ಲಿ ತಮ್ಮ ನಿಜವಾದ ಖಾತೆಯಿಂದ ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿಯನ್ನು ಬೆಂಬಲಿಸುವ ಯಾವುದೇ ಫೋಟೋವನ್ನು ಪೋಸ್ಟ್ ಮಾಡಿಲ್ಲ. 34ರ ಹರೆಯದ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುವುದರಲ್ಲಿ ನಿರತರಾಗಿದ್ದಾರೆ.

ಫೋಟೋ ವೈರಲ್ ಬಳಿಕ India.com ಕೂಡ ವಿರಾಟ್ ಕೊಹ್ಲಿಯ Instagram ಹ್ಯಾಂಡಲ್ ಅನ್ನು ಪರಿಶೀಲಿಸಿದೆ ಮತ್ತು ಅವರ ಖಾತೆಯಲ್ಲಿ ಅಂತಹ ಯಾವುದೇ ಫೋಟೋ ಕಂಡುಬಂದಿಲ್ಲ.
ಈ ಲೇಖನವನ್ನು ಬರೆಯುವ ಸಮಯದಲ್ಲಿ, ನಾವು ಅವರ insta ಹ್ಯಾಂಡಲ್‌ನಲ್ಲಿ ಎರಡು ಕಥೆಗಳನ್ನು ಕಂಡುಕೊಂಡಿದ್ದೇವೆ. ಮೇ 12 ರಂದು ಪೋಸ್ಟ್ ನಲ್ಲಿ ಅವರು, ಶುಕ್ರವಾರ ವಾಂಖೆಡೆ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದ್ದಕ್ಕಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಅಭಿನಂದಿಸಿದ್ದು ಇದೆ. ಅದರ ಹಿಂದೆ ಅವರು ಇಂತಹ ಯಾವುದೇ ಪೋಸ್ಟ್ ಅನ್ನು ಮಾಡಿಲ್ಲ. ವಿಶೇಷವಾಗಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವಂತಹ ಯಾವುದೇ ಪೋಸ್ಟ್ ಆಗಲಿ ಟೆಕ್ಸ್ಟ ಆಗಲಿ ಅವರು ಮಾಡಿಲ್ಲ. ಹೀಗಾಗಿ ವೈರಲ್ ಪೋಸ್ಟರ್ ನಿಜವಲ್ಲ ಎಂದು ನಿಖರವಾಗಿ ಹೇಳಬಹುದು.
ಮೇ 14 ಭಾನುವಾರ ರಾಜಸ್ಥಾನದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ಯಾಶ್ ರಿಚ್ ಲೀಗ್‌ನ 60 ನೇ ಪಂದ್ಯಕ್ಕಾಗಿ ಕೊಹ್ಲಿ ಪ್ರಸ್ತುತ ರಾಜಸ್ಥಾನದಲ್ಲಿದ್ದಾರೆ.
ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಇಲ್ಲಿದೆ:
Hello @imVkohli why did you delete it? Were you forced to delete it?? pic.twitter.com/ae5x62xY9Z
— Ammu (@antifascisttt) May 13, 2023
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲವು ಸಾಧಿಸಿ ಅಧಿಕಾರಕ್ಕೇರಲು ಸಿದ್ಧವಾಗಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದೆ. ಭಾರತೀಯ ಜನತಾ ಪಕ್ಷವು 65 ಸ್ಥಾನಗಳನ್ನು ಗೆದ್ದಿದೆ.

Fact Check
ಕ್ಲೇಮು
ವಿರಾಟ್ ಕೊಹ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ.
ಪರಿಸಮಾಪ್ತಿ
ನಕಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆಂದು ವೈರಲ್ ಆಗಿದೆ.












Click it and Unblock the Notifications