Fact check: ಕರ್ನಾಟಕ ವಿಧಾನಸಭೆ ಚುನಾವಣೆ 2023:ಈ ವೇಳಾಪಟ್ಟಿ ನಿಜವೇ?
ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿಸಿದಂತೆ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಇಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ಯಾವುದು?, ಇದು ನಿಜವೇ? ತಿಳಿಯಿರಿ.
ಬೆಂಗಳೂರು, ಫೆಬ್ರವರಿ 06: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ.
ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ ತಿಳಿಯಬಹುದಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ ಹಳೆಯ ವೇಳಾಪಟ್ಟಿಯ ಫೋಟೊವನ್ನೆ ಎಡಿಟ್ ಮಾಡಲಾಗಿದೆ. ಈ ಫೋಟೊದಲ್ಲಿ 2018 ಇರುವ ಕಡೆ 2023 ಎಂದು (ಎಡಿಟ್) ತಿದ್ದಲಾಗಿದೆ. ಆ ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಲಾಗುತ್ತಿದ್ದು, ಅದನ್ನೆ ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿ ಎಂದು ನಂಬಿಸಲಾಗುತ್ತಿದೆ.

ನಿಜವೇನೋ ಎಂಬಂತೆ 2018ರ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿ ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಅದರಲ್ಲಿ ವಿಧಾನಸೌಧದ ಚಿತ್ರ ಸಹಿತ ನೀತಿ ಸಂಹಿತಿ ಜಾರಿ , ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರಗಳ ಪರಿಶೀಲನೆ, ಮತದಾನ, ಮತ ಎಣಿಕೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಸೇರಿಸಲಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ (2018ರ) ಚುನಾವಣೆಯ ವೇಳಾಪಟ್ಟಿ ಎಂಬುದು ಖಚಿತವಾಗಿದೆ. ಹೀಗಿದ್ದರೂ ಇದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೇ ಹೊತ್ತಿಗೆ ರಾಜ್ಯ ಚುನಾವಣೆ
ಕರ್ನಾಟಕ ಸೇರಿದಂತೆ 2023 ರಲ್ಲಿ ಮೇ ಆಸುಪಾಸಿಗೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭಾರತೀಯ ಚುನಾವಣೆ ಆಯೋಗ, ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ರಾಜ್ಯ ಚುನಾವಣೆ ಆಯೋಗವು ಸಿದ್ಧತೆಗಳಲ್ಲಿ ತೊಡಗಿವೆ.
ಜಿಲ್ಲಾ, ನಗರ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಚುನಾವಣೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹವಲು ಸಭೆಗಳು ನಡೆಯುತ್ತಿವೆ. ಆದರೆ ಕರ್ನಾಟಕ ವಿಧಾನಸಭೆ 2023ರ ಚುನಾವಣೆ ಬಗ್ಗೆ ಆಯೋಗ ವೇಳಾಪಟ್ಟಿ ಘೋಷಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಕೆಲವೇ ದಿನಗಳಲ್ಲಿ ನೀಡಲಿದ್ದಾರೆ.

ವಿಧಾನಸಭೆ ಚುನಾವಣೆ 2018 ವೇಳಾಪಟ್ಟಿ ಹೇಗಿತ್ತು?
ಮಾರ್ಚ್ 27 - ನೀತಿ ಸಂಹಿತೆ ಜಾರಿ
ಏಪ್ರಿಲ್ 17- ಚುನಾವಣಾ ಅಧಿಸೂಚನೆ ಪ್ರಕಟ
ಏಪ್ರಿಲ್ 24 - ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಏಪ್ರಿಲ್ 25- ನಾಮಪತ್ರಗಳ ಪರಿಶೀಲನೆ
ಏಪ್ರಿಲ್ 27- ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಮೇ 12 - ಮತದಾನ
ಮೇ 15 - ಮತ ಎಣಿಕೆ

Fact Check
ಕ್ಲೇಮು
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕುರಿತು ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸಿಲ್ಲ.
ಪರಿಸಮಾಪ್ತಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕುರಿತು ಚುನಾವಣೆ ಶೀಘ್ರವೇ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಶೇರ್ ಆದ ಫೋಟೊದಲ್ಲಿ ವೇಳಾಪಟ್ಟಿ ಸತ್ಯವಲ್ಲ.












Click it and Unblock the Notifications