Fact check: ಬಿಗ್‌ಬಾಸ್‌ ಗೆದ್ದ ಬಳಿಕ ಗದ್ದೆಯಲ್ಲಿ ಮಲಗಿದ ಹನುಮಂತ- ಈ ವೀಡಿಯೋ ಹಿಂದಿನ ಸತ್ಯವೇನು?

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿಜೇತ ಹನುಮಂತ ಗದ್ದೆಯಲ್ಲಿ ಮಲಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ಬಿಗ್‌ಬಾಸ್‌ ಮನೆಯಲ್ಲಿ ಟ್ರೋಫಿ ಗೆದ್ದರೆ ಅದನ್ನು ಹಿಡಿದುಕೊಂಡು ರೋಡ್‌ ಶೋ ಮಾಡೋ ಕಾಲ ಇದು. ಹೀಗಿರುವಾಗ ಹನುಮಂತ ಬಿಗ್‌ಬಾಸ್‌ ವಿಜೇತರಾದ ಮೇಲೆ ಗದ್ದೆಯಲ್ಲಿ ಹಾಯಾಗಿ ಮಲಗಿದ್ದಾರೆ ಎಂದು ತೋರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನಿಜವಾಗಲೂ ಈ ವಿಡಿಯೋ ಹನುಮಂತನದ್ದೇನಾ? ಹನುಮಂತ ಗದ್ದೆಯಲ್ಲಿ ಮಲಗಿದ ವೀಡಿಯೋದ ಹಿಂದಿನ ಸತ್ಯವೇನು?

ಬಿಗ್‌ಬಾಸ್‌ ವಿನ್ನರ್ ಹನುಮಂತ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ದಾಖಲೆ ಸೃಷ್ಟಿ ಮಾಡಿದ್ದಾರೆ. ಬಿಗ್‌ಬಾಸ್‌ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಮಾಡಿದ ಒಬ್ಬ ಸರಳ ಹಾಗೂ ಸಾಮಾನ್ಯ ಹುಡುಗ ಹನುಮಂತು. ಇದೀಗ ಈ ಹುಡುಗನ ಸಾಧನೆಗೆ ರಾಜ್ಯದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. 50 ಲಕ್ಷ ಬಹುಮಾನ ಹಾಗೂ ಟ್ರೋಫಿ ಪಡೆದ ಹನುಮಂತ ತಮ್ಮ ಜೀವನ ಶೈಲಿಯನ್ನು ಒಂದಿಷ್ಟು ಬದಲಾಯಿಸಿಕೊಂಡಿಲ್ಲ.

Fact check hanumantha sleeping in field after winning bigg boss - truth behind this video

ಬಿಗ್‌ಬಾಸ್‌ ಮನೆಗೆ ಬರುವಾಗ ಹೇಗಿದ್ದರೋ ಇಗಲೂ ಹಾಗೇ ಇದ್ದಾರೆ. ಇದು ಬಿಗ್‌ಬಾಸ್‌ ವೀಕ್ಷಕರ ಮನ ಮುಟ್ಟಿದೆ. ಹನುಮಂತನ ನೇರ ಮಾತು, ಸರಳತೆ, ಮುಗ್ಧತೆ ಜನರ ಹೃದಯದ ಬಾಗಿಲು ತಟ್ಟಿದೆ. ಹೀಗಾಗಿ ಹನುಮಂತ ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೂ ಫೇಮಸ್ ಹೊರಬಂದ ಮೇಲೂ ಫೇಮಸ್ ಆಗಿದ್ದಾರೆ.

ಈ ನಡುವೆ ಅವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋಕ್ಕೆ 'ಎಲ್ಲರೂ ಟ್ರೋಫಿ ಗೆದ್ದರೆ ಅದನ್ನು ಹಿಡ್ಕೊಂಡು ರೋಡ್‌ ಶೋ ಮಾಡ್ತಾರೆ. ಆದರೆ ಹನುಮಂತ ನೋಡ್ರಿ' ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೋದ ಅಸಲಿಯತ್ತೇನು ಅಂದರೆ, ಈ ವೀಡಿಯೋ ಬಿಗ್‌ಬಾಸ್‌ ಮುಗಿದ ಬಳಿಕ ಸೆರೆ ಹಿಡಿದ ವೀಡಿಯೋ ಅಲ್ಲ. ಬದಲಿಗೆ ಈ ವೀಡಿಯೋ ಹಳೆಯ ವಿಡಿಯೋ ಆಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಗೆದ್ದ ಬಳಿಕ ಹನುಮಂತ ಊರ ಕಡೆಗೆ ಮೂಕ ಮಾಡಿಲ್ಲ. ಅವರನ್ನು ಶೂಟಿಂಗ್ ವಿಚಾರದಲ್ಲಿ ಬೆಂಗಳೂರಿನಲ್ಲೇ ಇರಿಸಿಕೊಳ್ಳಲಾಗಿದೆ. ಹೀಗಾಗಿ ಹನುಮಂತ ಊರಲ್ಲೇ ಇಲ್ಲ ಅದ್ಮೇಲೆ ಗದ್ದೆಗೆ ಹೋಗಿ ಮಲಗುವುದು ಸಾಧ್ಯವೇ ಇಲ್ಲ. ಹೀಗಾಗಿ ಈ ವೀಡಿಯೋ ಹಳೆಯದಾಗಿದೆ.

ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಮಾತನಾಡುತ್ತಾ ಗದ್ದೆಗೆ ಹೋಗುತ್ತಾನೆ. ಗದ್ದೆಗೆ ಹೋಗುವಾಗ ಹನುಮಂತ ಹಾಗೂ ಅವರ ಸ್ನೇಹಿತ ಇಬ್ಬರು ಗದ್ದೆಯಲ್ಲಿ ಮಲಗಿರುವುದು ಕಾಣಿಸುತ್ತದೆ. ವಿಡಿಯೋ ನೋಡುತ್ತಿದ್ದಂತೆ ಹನುಮಂತ ಎದ್ದು ಕುಳಿತುಕೊಳ್ಳುತ್ತಾರೆ. ಆದರೆ ಈ ವೀಡಿಯೋ ತುಂಬಾ ಹಳೆಯದು. ಹನುಮಂತ ಸರಿಗಮಪ ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಗಾಯಕ. ಕುರಿಗಳನ್ನು ಕಾಯುತ್ತ ಹಳ್ಳಿಯಲ್ಲಿ ಹಾಯಾಗಿರುವ ಹನುಮಂತ ಈಗ ನಗರದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ಇಷ್ಟೆಲ್ಲಾ ಹಣ ಪಡೆದರೂ ಕೂಡ ಹನುಮಂತನ ನಡೆ, ನುಡಿ ಸ್ವಲ್ಪವೂ ಬದಲಾಗಿಲ್ಲ. ಇದರಿಂದ ಹನುಮಂತ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ಹೀಗಾಗಿ ಹನುಮಂತ ಕುಂತರೂ ಸುದ್ದಿ ನಿಂತರೂ ಸುದ್ದಿ, ಮಾತಾಡಿದರೂ ಸುದ್ದಿ. ಮಾತನಾಡದೇ ಮೌನವಾಗಿದ್ದರೂ ಸುದ್ದಿಯಾಗುತ್ತಿದ್ದಾರೆ.

Fact Check

ಕ್ಲೇಮು

ಬಿಗ್‌ಬಾಸ್‌ ಗೆದ್ದರೆ ಟ್ರೋಫಿ ಹಿಡ್ಕೊಂಡು ರೋಡ್‌ ಶೋ ಮಾಡೋ ಕಾಲದಲ್ಲಿ ಹನುಮಂತ ಗದ್ದೆಯಲ್ಲಿ ಮಲಗಿದ್ದಾರೆ.

ಪರಿಸಮಾಪ್ತಿ

ಹನುಮಂತ ಗದ್ದೆಯಲ್ಲಿ ಮಲಗಿರುವ ವೀಡಿಯೋ ಬಿಗ್‌ಬಾಸ್‌ ವಿನ್ನರ್ ಆದ ನಂತರದ ವೀಡಿಯೋ ಅಲ್ಲ ಹಳೆಯ ವೀಡಿಯೋ ಆಗಿದೆ.

Rating

Mostly False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+