Get Updates
Get notified of breaking news, exclusive insights, and must-see stories!

Fact check: ಬಿಹಾರದ ಛಪ್ರಾದಲ್ಲಿ ಸಿಕ್ಕಿಹಾಕಿಕೊಂಡ ಗಂಗಾ ವಿಲಾಸ್ ಕ್ರೂಸ್?

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಗಂಗಾ ವಿಲಾಸ್ ಕ್ರೂಸ್ ಇಂದು ಬಿಹಾರದ ಛಪ್ರಾದಲ್ಲಿ ಸಿಲುಕಿಕೊಂಡಿದೆ ಎಂಬ ವರದಿಗಳು ಹೊರಬಂದಿವೆ. ಆದರೆ ಈ ವರದಿಗಳನ್ನು ಗಂಗಾ ವಿಲಾಸ್ ಕ್ರೂಸ್ ನಿರ್ವಾಹಕರು ನಿರಾಕರಿಸಿದ್ದಾರೆ. ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರದ ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ ಅವರು ಎಎನ್‌ಐಗೆ ಕ್ರೂಸ್ ನಿಗದಿತ ಪ್ರಕಾರ ಪಾಟ್ನಾ ತಲುಪಿದೆ ಮತ್ತು ಛಾಪ್ರಾದಲ್ಲಿ ಸಿಲುಕಿಕೊಂಡಿಲ್ಲ ಎಂದು ಹೇಳಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಜಿಲ್ಲೆಯ ಸರ್ಕಲ್ ಆಫೀಸರ್ ಸತೇಂದ್ರ ಸಿಂಗ್ ಹೇಳಿದ್ದಾರೆ. "ಸ್ಥಳೀಯ ಪತ್ರಕರ್ತರು ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ, ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ರೆಸ್ಪಾನ್ಸ್ ಫೋರ್ಸ್) ದೋಣಿಗಳು ಸ್ಥಳದಲ್ಲಿವೆ ಎಂದು ನಾನು ಹೇಳಿದ್ದೇನೆ. ವಿಲಾಸ್ ಕ್ರೂಸ್‌ಗೆ ಯಾವುದೇ ರೀತಿಯ ಅಡೆತಡೆಗಳಿಲ್ಲ" ಎಂದು ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಸರ್ಕಲ್ ಆಫೀಸರ್ ಸತೇಂದ್ರ ಸಿಂಗ್ ಹೇಳಿಕೆ

ಸರ್ಕಲ್ ಆಫೀಸರ್ ಸತೇಂದ್ರ ಸಿಂಗ್ ಹೇಳಿಕೆ

ಹಡಗು ಸಿಲುಕಿಕೊಂಡಿಲ್ಲ ಮತ್ತು ತಾಂತ್ರಿಕವಾಗಿ ದಡಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಕ್ರೂಸ್ ನಿರ್ವಾಹಕರು ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು. '' ಅಲ್ಲಿ ನದಿ ಆಳವಾಗಿಲ್ಲ. ಹೀಗಾಗಿ ಪ್ರಯಾಣಿಕರು ಇಳಿಯಲು ಮತ್ತು ಸೈಟ್ ನೋಡಲು ಸಾಧ್ಯವಾಗಿಲ್ಲ. ಆದರೆ ಇದಕ್ಕೆ ಆಳವಿಲ್ಲದ ನದಿಯಲ್ಲಿ ಚಲಿಸುವ ದೋಣಿಗಳನ್ನು ಬಳಸಬೇಕು. ಹಡಗು ಹೆಚ್ಚು ನೀರು ಇರುವ ದಡವನ್ನು ಮಾತ್ರ ಯತಲುಪುತ್ತದೆ. ಇದು ಇಲ್ಲಿ ಸಂಭವಿಸಿದೆ. ಇದು ರೂಢಿಯಾಗಿದೆ. ಇದು ಸಾಮಾನ್ಯ ವಿಷಯ" ಎಂದು ಎಕ್ಸೊಟಿಕ್ ಹೆರಿಟೇಜ್ ಗ್ರೂಪ್‌ನ ಅಧ್ಯಕ್ಷ ರಾಜ್ ಸಿಂಗ್ ಎಎನ್‌ಐಗೆ ತಿಳಿಸಿದರು.

ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಕೊಂಡಿದ್ದು ನಿಜಾನಾ?

ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಕೊಂಡಿದ್ದು ನಿಜಾನಾ?

ಛಪ್ರಾ ಜಿಲ್ಲೆಯ ದೋರಿಗಂಜ್ ಪ್ರದೇಶದ ಬಳಿ ಗಂಗಾನದಿಯಲ್ಲಿ ಪುರಾತತ್ವ ತಾಣವಾದ ಚಿರಾಂದ್‌ಗೆ ಪ್ರವಾಸಿಗರಿಗೆ ಭೇಟಿ ನೀಡಲು ದಡದಲ್ಲಿ ನೌಕಾಯಾನ ಮಾಡಲು ನಿರ್ಧರಿಸಲಾಗಿತ್ತು. ದೋರಿಗಂಜ್ ಬಜಾರ್ ಬಳಿ ಛಪ್ರಾದ ಆಗ್ನೇಯಕ್ಕೆ 11 ಕಿಮೀ ದೂರದಲ್ಲಿರುವ ಚಿರಂದ್ ಸರನ್ ಜಿಲ್ಲೆಯ ಪ್ರಮುಖ ಪುರಾತತ್ವ ಸ್ಥಳವಾಗಿದೆ. ಘಾಘ್ರಾ ನದಿಯ ದಡದಲ್ಲಿ ನಿರ್ಮಿಸಲಾದ ಸ್ತೂಪಗಳು ಹಿಂದೂ, ಬೌದ್ಧ ಮತ್ತು ಮುಸ್ಲಿಂ ಪ್ರಭಾವಗಳೊಂದಿಗೆ ಸಂಬಂಧ ಹೊಂದಿವೆ. ಆದರೆ, ದಡದಲ್ಲಿ ನೀರಿಲ್ಲದ ಕಾರಣ ಕ್ರೂಸ್ ಅನ್ನು ದಡಕ್ಕೆ ತರಲು ಕಷ್ಟವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆಮದು ವರದಿ ಮಾಡಲಾಗಿತ್ತು. ಆದರೆ ಇದನ್ನು ಗಂಗಾ ವಿಲಾಸ್ ಕ್ರೂಸ್ ನಿರ್ವಾಹಕರು ಅಲ್ಲಗಳಿದಿದ್ದಾರೆ.

ಗಂಗಾ ವಿಲಾಸ್ ಕ್ರೂಸ್ ಕೂಡ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ವೇಗ ಗಂಟೆಗೆ 12 ಕಿಲೋಮೀಟರ್ ಅಪ್‌ಸ್ಟ್ರೀಮ್ ಮತ್ತು 20 ಕಿಲೋಮೀಟರ್ ಡೌನ್‌ಸ್ಟ್ರೀಮ್ ಆಗಿದೆ. ಕ್ರೂಸ್ ಕುಡಿಯುವ ನೀರಿಗಾಗಿ RO ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಒಳಚರಂಡಿ ಸಂಸ್ಕರಣಾ ಘಟಕವನ್ನು ಹೊಂದಿದೆ. ಕ್ರೂಸ್ ಜನರ ಅನುಕೂಲಕ್ಕಾಗಿ ಮತ್ತು ಅವರ ಅಗತ್ಯಗಳಿಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಭಾರತದಲ್ಲಿ ಇದರ ದರವು ದಿನಕ್ಕೆ ₹ 25,000 ಆಗಿದ್ದರೆ, ಬಾಂಗ್ಲಾದೇಶದಲ್ಲಿ ದಿನಕ್ಕೆ ₹ 50,000 ದರವಿದೆ.

ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣ

ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣ

ಪ್ರಧಾನಿ ಮೋದಿ ಅವರು ಜನವರಿ 13 ರಂದು ವಾರಣಾಸಿಯಿಂದ ನೌಕಾಯಾನಕ್ಕೆ ಚಾಲನೆ ನೀಡಿದ್ದರು. ಐಷಾರಾಮಿ ಟ್ರಿಪಲ್ ಡೆಕ್ ಕ್ರೂಸ್ ವಾರಣಾಸಿಯಿಂದ ಅಸ್ಸಾಂನ ದಿಬ್ರುಗಢದವರೆಗಿನ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸಲಿದೆ. ಕ್ರೂಸ್ 18 ಸೂಟ್‌ಗಳೊಂದಿಗೆ 80 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ಕ್ರೂಸ್ 51 ದಿನಗಳ ಕಾಲ ಸಾಹಸಮಯ ಪ್ರಯಾಣವನ್ನು ಮಾಡಲಿದ್ದು ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ.

ಮೂರು ಪ್ರಮುಖ ನದಿಗಳ ಮೂಲಕ ಪ್ರಯಾಣ

ಮೂರು ಪ್ರಮುಖ ನದಿಗಳ ಮೂಲಕ ಪ್ರಯಾಣ

ಇದರ ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯ ಮೂಲಕ ದಿಬ್ರುಗಢಕ್ಕೆ ಹೋಗಲಿದೆ. ಐಷಾರಾಮಿ ಕ್ರೂಸ್ 3,200 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಭಾರತ ಮತ್ತು ಬಾಂಗ್ಲಾದೇಶದ ಐದು ರಾಜ್ಯಗಳ ಮೂಲಕ ಹಾದುಹೋಗುತ್ತದೆ.

ಈ ಹಡಗು ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂನ ಒಟ್ಟು 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಜೊತೆಗೆ ಇದು ಮೂರು ಪ್ರಮುಖ ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ಮೂಲಕ ಹಾದು ಹೋಗಲಿದೆ. ಕ್ರೂಸ್ ಬಂಗಾಳದ ಭಾಗೀರಥಿ, ಹೂಗ್ಲಿ, ಬಿಡ್ಯಾವತಿ, ಮಲತಾ ಮತ್ತು ಸುಂದರಬನ್ಸ್ ನದಿ ವ್ಯವಸ್ಥೆಗಳನ್ನು ಪ್ರವೇಶಿಸುತ್ತದೆ. ಇದು ಬಾಂಗ್ಲಾದೇಶದ ಮೇಘನಾ, ಪದ್ಮ ಮತ್ತು ಜಮುನಾ ಮೂಲಕ ಹಾದುಹೋಗುತ್ತದೆ ಮತ್ತು ನಂತರ ಅಸ್ಸಾಂನ ಬ್ರಹ್ಮಪುತ್ರವನ್ನು ಪ್ರವೇಶಿಸುತ್ತದೆ.

Fact Check

ಕ್ಲೇಮು

ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ಸಿಕ್ಕಿಕೊಂಡಿದೆ.

ಪರಿಸಮಾಪ್ತಿ

ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ಸಿಕ್ಕಿಹಾಕಿಕೊಂಡಿಲ್ಲ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+