Fact check: ಬೈಕ್ ಕಳ್ಳತನಕ್ಕಾಗಿ 12 ವರ್ಷಗಳ ಹಿಂದೆ ಸಿಎಂ ಭಗವಂತ್ ಮಾನ್ ಬಂಧನ?

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಹಳೆಯ ಚಿತ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಫೋಟೋ ಸಂದೇಶ ಹೇಳುವಂತೆ, ಭಗವಂತ್ ಮಾನ್ ಅವರು 12 ವರ್ಷದವರಿದ್ದಾಗ ತೆಗೆದು ಫೋಟೋ ಇದಾಗಿದೆ. ಜೊತೆಗೆ ಬೈಕ್ ಕಳ್ಳತನದ ಆರೋಪದ ಮೇಲೆ ಪಂಜಾಬ್ ಪೊಲೀಸರು ಆತನನ್ನು ಬಂಧಿಸಿದ್ದರು ಎಂದು ಬರೆಯಲಾಗಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ, ಭಗವಂತನಂತೆ ಕಾಣುವ ವ್ಯಕ್ತಿ ಕೆಲವು ಜನರೊಂದಿಗೆ ನೆಲದ ಮೇಲೆ ಕುಳಿತಿರುವುದು ಕಾಣಬಹುದು.

ನರೇಂದ್ರ ಮೋದಿ ಎಂಬ ನಕಲಿ ಫೇಸ್‌ಬುಕ್ ಪೇಜ್‌ನಿಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಸುಮಾರು 12 ವರ್ಷಗಳ ಹಿಂದೆ 4 ಬೈಕ್ ಕಳ್ಳರನ್ನು ಪಂಜಾಬ್ ಪೊಲೀಸರು ಹಿಡಿದಿದ್ದಾರೆ ಎಂದು ವೈರಲ್ ಫೋಟೋ ತಲೆಬರಹ ಹೇಳುತ್ತದೆ. ಜೊತೆಗೆ ಬೈಕ್ ಕಳ್ಳರಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಪ್ರಶ್ನೆಯನ್ನು ಹಾಕಲಾಗಿದೆ. ಇದಕ್ಕೆ ಬಹುತೇಕ ಪ್ರತಿಕ್ರಿಯೆಗಳು ಬೈಕ್ ಕಳ್ಳರಲ್ಲಿ ಭಗವಂತ್ ಮಾನ್ ಅವರು ಫೋಟೋದಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಇದೇ ಹೇಳಿಕೆಯೊಂದಿಗೆ ಫೋಟೋವನ್ನು ವೈರಲ್ ಮಾಡಲಾಗಿದೆ. ಸದ್ಯ ಈ ವೈರಲ್ ಪೋಸ್ಟ್ ವೈರಲ್ ಆಗಿದೆ. ಹಲವರು ಭಗವಂತ್ ಮಾನ್ ಅವರ ಹೆಸರನ್ನು ಬರೆದಿದ್ದಾರೆ. ವಾಸ್ತವವಾಗಿ ವೈರಲ್ ಆಗುತ್ತಿರುವ ಚಿತ್ರದಲ್ಲಿ, ಕೆಲವರು ಬಣ್ಣ ಹಚ್ಚಿದ ಬಟ್ಟೆಗಳನ್ನು ಹಾಕಿ ನೆಲದ ಮೇಲೆ ಕುಳಿತಿದ್ದಾರೆ. ಅವರಲ್ಲಿ ಒಬ್ಬರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಮುಖವನ್ನು ಹೋಲುತ್ತಾರೆ.

ವೈರಲ್ ಆಗುತ್ತಿರುವ ಫೋಟೋವನ್ನು ಒನ್ ಇಂಡಿಯಾದ ಫ್ಯಾಕ್ಟ್ ಚೆಕ್ ತಂಡ ತನಿಖೆ ನಡೆಸಿದಾಗ, ಆ ಚಿತ್ರದ ಸತ್ಯಾಂಶ ಬಯಲಿಗೆ ಬಂದಿದೆ. ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಪಂಜಾಬಿ ನಟ ಮತ್ತು ನಿರ್ಮಾಪಕ ಕರಮ್‌ಜಿತ್ ಅನ್ಮೋಲ್ ಅವರ Instagram ಪುಟಕ್ಕೆ ಕರೆದೊಯ್ಯಿತು. ಅವರು ಇದನ್ನು 18 ಮಾರ್ಚ್ 2022 ರಂದು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಹೋಳಿ ನೆನಪುಗಳು ಎಂದು ಬರೆದುಕೊಂಡಿದ್ದಾರೆ. ಇದರಿಂದ ವೈರಲ್ ಫೋಟೋ ಸಂದೇಶ ಸುಳ್ಳು ಎಂದು ಸಾಬೀತಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

Fact Check: Bhagwant Mann was arrested 12 years ago for bike theft?

Recommended Video

      ಶೂ ಹಾಕಿಕೊಂಡೇ ಕೂತು ಶ್ರೀಗಳಿಗೆ ಅವಮಾನ ಮಾಡಿದ ಗೃಹಸಚಿವ ಅಮಿತ್ ಶಾ | Oneindia Kannada

      ಇದಲ್ಲದೆ, ಈ ಫೋಟೋವನ್ನು ತನಿಖೆ ಮಾಡಲು ಆಜ್ ತಕ್ ಕರಮ್‌ಜೀತ್ ಅವರನ್ನು ಸಂಪರ್ಕಿಸಿದಾಗ ಈ ಫೋಟೋ 1995 ರ ವರ್ಷದ್ದು ಎಂದು ಅವರು ಹೇಳಿದರು. ಅವರು ಮತ್ತು ಅವರ ಸ್ನೇಹಿತರು ಹೋಳಿ ಆಚರಿಸಲು ಪಂಜಾಬಿ ಗಾಯಕ ಹರ್ಭಜನ್ ಮಾನ್ ಮನೆಗೆ ಹೋದಾಗ ಈ ಚಿತ್ರವನ್ನು ಹರ್ಭಜನ್ ಮನೆಯಲ್ಲಿ ತೆಗೆಯಲಾಗಿದೆ. ಇದರಿಂದ ಭಗವಂತ್‌ ಮಾನ್‌ ಅವರಿಗೂ ಬೈಕ್‌ ಕಳ್ಳತನವಾಗಿರುವ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಇದರಿಂದ ವೈರಲ್‌ ಆಗಿರುವ ಫೋಟೋ ನಕಲಿ ಎಂಬುದು ಹೇಳಿಕೆಯ ನಂತರ ಸ್ಪಷ್ಟವಾಗಿದೆ. ಇದನ್ನು ತಪ್ಪು ಹೇಳಿಕೆಯೊಂದಿಗೆ ವೈರಲ್ ಮಾಡಲಾಗಿದೆ.

      Fact Check

      ಕ್ಲೇಮು

      ಬೈಕ್ ಕಳ್ಳತನಕ್ಕಾಗಿ 12 ವರ್ಷಗಳ ಹಿಂದೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಬಂಧಿಸಲಾಗಿತ್ತು.

      ಪರಿಸಮಾಪ್ತಿ

      ಪಂಜಾಬಿ ಗಾಯಕ ಹರ್ಭಜನ್ ಮಾನ್ ಅವರ ಮನೆಯಲ್ಲಿ ಅವರ ಸ್ನೇಹಿತರೊಂದಿಗೆ ಹೋಳಿ ಆಡಿದ ನಂತರ ತೆಗೆದ ಹಳೆಯ ಫೋಟೋ ಇದಾಗಿದೆ.

      Rating

      Misleading
      ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+