ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ತಾಲಿಬಾನ್‌ ಬಗ್ಗೆ ಅಜಿತ್‌ನ 8 ವರ್ಷದ ಹಿಂದಿನ ಹೇಳಿಕೆ ಈಗಿನದ್ದು ಎಂದು ವೈರಲ್‌

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಅಪ್ಘಾನಿಸ್ತಾನದ ಬಗ್ಗೆ ಅಜಿತ್‌ ದೋವಲ್‌ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪ್ರಸ್ತುತ ಅಫ್ಘಾನಿಸ್ತಾನದ ಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ, "ಅಫ್ಘಾನಿಸ್ತಾನದ ಪಡೆಯು ತಾಲಿಬಾನ್‌ ಅನ್ನು ಸದೆಬಡಿಯುತ್ತದೆ. ಆದರೆ ಪಾಕಿಸ್ತಾನ ಇದರ ಸರಿ ವಿರುದ್ದವಾಗಿ ತಾಲಿಬಾನ್‌ ಪರವಾಗಿ ಲೆಕ್ಕಾಚಾರ ಹಾಕಿದೆ," ಎಂದು ಹೇಳಿದ್ದಾರೆ.

ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಳ್ಳುವ ಕೆಲವು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದ್ದು, ನೆಟ್ಟಿಗರು ದೋವಲ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Fact Check: ಈ ಸುಂದರ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಲ್ಲ, ಕರ್ನಾಟಕದ್ದುFact Check: ಈ ಸುಂದರ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಲ್ಲ, ಕರ್ನಾಟಕದ್ದು

"ಇದು ಅಜಿತ್‌ ದೋವಲ್‌. ಮೋದಿ ಸರ್ಕಾರದಿಂದ ಉತ್ತಮ ಗುಪ್ತಚರ ಎಂದೆನಿಸಿಕೊಂಡವರು. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಕೆಲವು ದಿನಗಳ ಹಿಂದೆ ಅಜಿತ್‌ ದೋವಲ್‌ ನೀಡಿದ ಹೇಳಿಕೆ ಕೇಳಿ," ಎಂದು ನೆಟ್ಟಿಗರು ಹೇಳಿದ್ದಾರೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್ ಎಸ್ ಪನಾಗ್ ಕೂಡಾ ಈ ವಿಡಿಯೋ ತುಣುಕನ್ನು ಶೇರ್‌ ಮಾಡಿದ್ದು, "ಅತ್ಯುತ್ತಮ ಸ್ಪೈ ಮಾಸ್ಟರ್‌" ಎಂದು ವ್ಯಂಗ್ಯವಾಡಿದ್ದಾರೆ.

Fact Check: Ajit Doval’s 8-year-old comment on Taliban being shared out of context and as recent

ಆದರೆ ಈ ವಿಡಿಯೋವನ್ನು ಇಂಡಿಯಾ ಟುಡೆಯ ಆಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಈ ವಿಡಿಯೋ ತುಣುಕನ್ನು 2013 ರಲ್ಲಿ ಅಜಿತ್‌ ದೋವಲ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿಲ್ಲದ ಸಂದರ್ಭದಲ್ಲಿ ಮಾಡಿದ್ದ ದೀರ್ಘ ಭಾಷಣದ ಒಂದು ಸಣ್ಣ ಭಾಗ ಎಂದು ತಿಳಿದು ಬಂದಿದೆ. ಅಫ್ಘಾನಿಸ್ತಾನದ ವಿಭಿನ್ನ ಪರಿಸ್ಥಿತಿಗಳನ್ನು ದೋವಲ್ ವಿಶ್ಲೇಷಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಇನ್ನು ವಾಸ್ತವವಾಗಿ, ಅಫ್ಘಾನ್‌ ಪಡೆಗಳ ಬಗ್ಗೆ ದೋವಲ್‌ ಸಂಶಯ ಹೊಂದಿದ್ದರು.

ಇನ್ನು ಕೆಲವು ನೆಟ್ಟಿಗರು ಇದು 2013 ರಲ್ಲಿ ಅಜಿತ್‌ ದೋವಲ್‌ ಮಾಡಿದ ಭಾಷಣದ ಒಂದು ತುಣುಕು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್ ಎಸ್ ಪನಾಗ್ ಟ್ವೀಟ್‌ಗೆ ರೀಪ್ಲೈ ಮಾಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 2014 ರಲ್ಲಿ ಅಧಿಕಾರಿ ಸ್ವೀಕಾರ ಮಾಡಿದ್ದಾರೆ.

ಈ ವಿಡಿಯೋವನ್ನು ಪರಿಶೀಲನೆ ಮಾಡಿದಾಗ 2013 ರ ಜುಲೈ 23 ರಂದು ಅಜಿತ್‌ ದೋವಲ್‌ ಮಾಜಿ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿದ್ದಾಗ ಅಫ್ಘಾನಿಸ್ತಾನದ ಬಗ್ಗೆ ನಡೆದ ಒಂದು ವಿಚಾರಗೋಷ್ಠಿಗೆ ಕರೆಯಲಾಗಿತ್ತು. ಈ ವಿಚಾರಗೋಷ್ಠಿಯನ್ನು ವಾಷಿಂಗ್ಟನ್ ಡಿಸಿ ಯ ಕ್ಯಾಪಿಟಲ್ ಹಿಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಪೊಲಿಟಿಕಲ್ ಆಕ್ಷನ್ ಕಮಿಟಿ (USINPAC) ಆಯೋಜನೆ ಮಾಡಿತ್ತು. ಈ ವಿಚಾರಗೋಷ್ಠಿಯಲ್ಲಿ ಅಜಿತ್‌ ದೋವಲ್‌ ಮಾಡಿದ ಸಂಪೂರ್ಣ ಭಾಷಣವನ್ನು USINPAC 2013 ರ ಜುಲೈ 26 ರಂದು ಹಾಕಿತ್ತು. ಹಾಗೆಯೇ ಇದು ಸುಮಾರು 22 ನಿಮಿಷಗಳ ವಿಡಿಯೋ ತುಣುಕು ಆಗಿದೆ.

ಈ ಭಾಷಣದಲ್ಲಿ ಆರು ನಿಮಿಷಗಳ ಕಾಲ ಅಜಿತ್‌ ದೋವಲ್‌ ಅಫ್ಘಾನ್‌ ಪಡೆಗಳ ಸನ್ನದ್ಧತೆ ಬಗ್ಗೆ ಹಾಗೂ ಪಾಕಿಸ್ತಾನದ ಮಿಲಿಟರಿ ಪಡೆಗಳು ಅಪ್ಘಾನ್ ಪಡೆಗಳ ಸಾಮರ್ಥ್ಯದ ಬಗ್ಗೆ ಏನು ಭಾವಿಸಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಸ್ವತಂತ್ರ ಮಿಲಿಟರಿಯೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮುವ ಅಫ್ಘಾನಿಸ್ತಾನದ ಬಗ್ಗೆ ಬೇರೆ ದೇಶಗಳ ಊಹೆಗಳ ಬಗ್ಗೆ ಹಾಗೂ ನಡೆಯಬಹುದಾದ ಸನ್ನಿವೇಶಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು.

ಅಫ್ಘಾನಿಸ್ತಾನವು ತನ್ನ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಸುಸಜ್ಜಿತ ಸೈನ್ಯವನ್ನು ನಿರ್ಮಿಸಬಹುದು ಎಂಬ ತನ್ನ ಆಶಾವಾದದ ಊಹೆ ಮಾತ್ರ ಎಂದು ಕೂಡಾ ದೋವಲ್‌ ಸ್ಪಷ್ಟವಾಗಿ ಹೇಳಿದ್ದಾರೆ. ಮಾಜಿ ಅಧ್ಯಕ್ಷ ಮೊಹಮ್ಮದ್ ನಜೀಬುಲ್ಲಾ ನೇತೃತ್ವದಲ್ಲಿದ್ದ ಅಧಿಕ ಶಕ್ತಿಶಾಲಿ ಸೈನ್ಯವು ಅಫ್ಘಾನಿಸ್ತಾನದ ವಿರುದ್ದ ಹೇಗೆ ಕುಸಿದಿದೆ ಎಂಬ ಬಗ್ಗೆ ಉಲ್ಲೇಖವನ್ನು ಮಾಡಿದ್ದರು. ಈ ವಿಡಿಯೋದ ಪರಿಶೀಲನೆಯ ವೇಳೆ ಈ ವಿಡಿಯೋ ಸುಮಾರು ಎಂಟು ವರ್ಷಗಳ ಹಿಂದಿನದ್ದು ಎಂಬುವುದು ಸ್ಪಷ್ಟವಾಗಿದೆ.

(ಒನ್‌ ಇಂಡಿಯಾ ಸುದ್ದಿ)

Fact Check

ಕ್ಲೇಮು

ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆಯುವ ಕೆಲವೇ ದಿನಗಳ ಹಿಂದೆ ಸ್ಥಿತಿಯನ್ನು ಅವಲೋಕಿಸಿ ಭಾಷಣ ಮಾಡಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅಫ್ಘಾನಿಸ್ತಾನ ಪಡೆಗಳು ತಾಲಿಬಾನ್‌ ಅನ್ನು ಎದುರಿಸುತ್ತದೆ ಎಂದು ಹೇಳಿದ್ದ

ಪರಿಸಮಾಪ್ತಿ

ಈ ವಿಡಿಯೋವನ್ನು ಪರಿಶೀಲನೆ ಮಾಡಿದಾಗ 2013 ರ ಜುಲೈ 23 ರಂದು ಅಜಿತ್‌ ದೋವಲ್‌ ಮಾಡಿದ ಭಾಷಣದ್ದು ಎಂದು ತಿಳಿದು ಬಂದಿದೆ. ಈ ವಿಡಿಯೋ ಎಂಟು ವರ್ಷಗಳ ಹಿಂದಿನದ್ದು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Ajit Doval’s 8-year-old comment on Taliban being shared out of context and as recent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X