Fact check: ಬಿರ್ಭುಮ್ ಹಿಂಸಾಚಾರದ ಬಲಿಪಶುಗಳು ಹಿಂದೂಗಳೇ?
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಎಂಟು ಜನರನ್ನು ಮನೆಗೆ ಬೆಂಕಿ ಹಚ್ಚುವ ಮೂಲಕ ಸುಟ್ಟುಹಾಕಲಾಗಿದೆ ಎನ್ನುವ ಪ್ರಕರಣ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಘೋರ ಘಟನೆಗೆ ಕಾರಣದ ಮಾಹಿತಿಯನ್ನು ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಜೊತೆಗೆ ತಪ್ಪಿಕಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ತನಿಖೆಯನ್ನು ತೀವ್ರಗೊಳಿಸುಯವಂತೆ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಹಿಂಸಾಚಾರದ ನಂತರ ಮಾರ್ಚ್ 24, ಗುರುವಾರದಂದು ಸಂತ್ರಸ್ತರ ಕುಟುಂಬಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃತರ ಕುಟುಂಬಕ್ಕೆ ನೆರವು ಘೋಷಿಸಿದರು.
ಇದೆಲ್ಲದರ ಮಧ್ಯೆ ಜನರನ್ನು ದಾರಿ ತಪ್ಪಿಸುವಂತ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ಹಲವಾರು ಘಟನೆಗೆ ಕೋಮು ಬಣ್ಣ ಹಚ್ಚಿದ್ದಾರೆ. ಬಲಿಪಶುಗಳೆಲ್ಲರೂ ಹಿಂದೂಗಳು ಎಂದು ಹೇಳಿದ್ದಾರೆ.
ಅಂತಹ ಒಂದು ಪೋಸ್ಟ್ ಹಿಂದಿಯಲ್ಲಿ ಹೀಗಿದೆ- "ಇಂದು ಟಿಎಂಸಿಯ ಜಿಹಾದಿ ಗೂಂಡಾಗಳು ಬಂಗಾಳದಲ್ಲಿ ಹತ್ತು ಹಿಂದೂ ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡಂತೆ 12 ಬುಡಕಟ್ಟು ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಆದರೆ ಈ ಅನಾಗರಿಕ ಭಯೋತ್ಪಾದಕ ಕೃತ್ಯವು ದೇಶದ ಚರ್ಚೆಯಿಂದ ನಾಪತ್ತೆಯಾಗಿದೆ. ಭಾರತೀಯ ಮಾಧ್ಯಮಗಳು ಉಕ್ರೇನ್ ನಾಗರಿಕರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ" ಎಂದು ಬರೆಯಲಾಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಬೊಗ್ಟುಯಿ ಗ್ರಾಮದಲ್ಲಿ ಯಾವುದೇ ಹಿಂದೂ ಪುರುಷರು ಅಥವಾ ಮಹಿಳೆಯರು ಕೊಲ್ಲಲ್ಪಟ್ಟಿಲ್ಲ ಎಂದು ಕಂಡುಹಿಡಿದಿದೆ. ಮೃತರೆಲ್ಲರೂ ಮುಸ್ಲಿಮರು ಎಂದು ತನಿಖೆಯ ಮೂಲಕ ಸ್ಪಷ್ಟಪಡಿಸಿದೆ.
ಹಲವಾರು ಮುಖ್ಯವಾಹಿನಿಯ ಸುದ್ದಿವಾಹಿನಿಗಳು ಬೊಗ್ಟುಯಿ ಘಟನೆಯ ಬಲಿಪಶುಗಳು ಮತ್ತು ಅವರ ಕುಟುಂಬಗಳ ಬಗ್ಗೆ ವಿವರಗಳನ್ನು ವರದಿ ಮಾಡಿವೆ. ಟೆಲಿಗ್ರಾಫ್ ಮಾರ್ಚ್ 24 ರಂದು ಘಟನೆಯಲ್ಲಿ ಬದುಕುಳಿದವರ ವರದಿಯನ್ನು ಪ್ರಕಟಿಸಿತು.
— West Bengal Police (@WBPolice) March 23, 2022
ಈ ವರದಿಯ ಪ್ರಕಾರ, ಕೊಲ್ಲಲ್ಪಟ್ಟ ಎಲ್ಲಾ ಎಂಟು ಜನರು ಮಿಹಿಲಾಲ್ ಶೇಖ್ ಮತ್ತು ಅವರ ಹಿರಿಯ ಸಹೋದರ ಬನೀರುಲ್ ಶೇಖ್ ಅವರು ಕುಟುಂಬದ ಸದಸ್ಯರಾಗಿದ್ದಾರೆ. ಇಬ್ಬರೂ ಸಹೋದರರು ಹತ್ಯಾಕಾಂಡದಿಂದ ಬದುಕುಳಿದರು ಎಂದು ವರದಿಯಾಗಿದೆ ಅವರು ಸಮಯಕ್ಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸೋಮವಾರ ರಾತ್ರಿ ತಾನು ಕಂಡ ಘಟನೆಗಳನ್ನು ದಿ ಟೆಲಿಗ್ರಾಫ್‌ಗೆ ಮಿಹಿಲಾಲ್ ವಿವರಿಸಿದ್ದಾರೆ.

ಮಿಹಿಲಾಲ್ ಪ್ರಕಾರ, ಎಂಟು ಮೃತರಲ್ಲಿ ಮಿಹಿಲಾಲ್ ಅವರ ಪತ್ನಿ ಶೆಲಿ ಬೀಬಿ(32), ಅವರ ಮಗಳು ತುಲಿ ಖಾತುನ್(7), ಅವರ ತಾಯಿ ನೂರ್ನೆಹರ್ ಬೀಬಿ ಅವರು 75 ವರ್ಷ ವಯಸ್ಸಿನ ವಿಧವೆ, ಅವರ ಅಕ್ಕ ರೂಪಾಲಿ ಬೀಬಿ (44), ಜಹನಾರಾ ಬೀಬಿ (38), ಅವರ ಸೊಸೆ ಲಿಲಿ ಖಾತುನ್ (18), ಲಿಲಿಯ ಪತಿ ಕಾಜಿ ಸಾಜಿದುರ್ ರೆಹಮಾನ್ (22), ಮತ್ತು ಇನ್ನೊಬ್ಬ ಅತ್ತಿಗೆ ಮಿನಾ ಬೀಬಿ(40) ಮೃತಪಟ್ಟಿದ್ದಾರೆ. ಬಲಿಪಶುಗಳ ಇದೇ ಹೆಸರುಗಳನ್ನು ಇತರ ಸುದ್ದಿವಾಹಿನಿಗಳು ವರದಿ ಮಾಡಿವೆ.
ಪಶ್ಚಿಮ ಬಂಗಾಳದ ಪೊಲೀಸ್‌ನ ಹಿರಿಯ IPS ಅಧಿಕಾರಿ ಶ್ಯಾಮ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು "ಬಿರ್ಭಮ್‌ನಲ್ಲಿ ಎಲ್ಲಾ ಬಲಿಪಶುಗಳು ಅಲ್ಪಸಂಖ್ಯಾತ ಸಮುದಾಯದವರು" ಎಂದು ದೃಢಪಡಿಸಿದ್ದಾರೆ. ವೈರಲ್ ಸಂದೇಶ ತಪ್ಪಾಗಿದೆ ಎಂದಿದ್ದಾರೆ. ಬಲಿಪಶುಗಳು ಹಿಂದೂ ಎಂಬ ಸಂದೇಶಗಳು ವೈರಲ್ ಆದ ತಕ್ಷಣ, ಪಶ್ಚಿಮ ಬಂಗಾಳ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯು ಈ ಹಕ್ಕು ನಕಲಿ ಎಂದು ಸ್ಪಷ್ಟಪಡಿಸಿದೆ.

ಬಿರ್ಭುಮ್, ರಾಂಪುರ್ಹತ್, ಬೊಗ್ಟುಯಿ ಗ್ರಾಮದಲ್ಲಿ ಯಾವುದೇ ಹಿಂದೂ ಮಹಿಳೆಯರು ಅಥವಾ ಮಕ್ಕಳು ಕೊಲ್ಲಲ್ಪಟ್ಟಿಲ್ಲ ಎಂದು ಟ್ವೀಟ್ ಹೇಳಿದೆ. "ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸಲು ದಾರಿತಪ್ಪಿಸುವ ಪೋಸ್ಟ್‌ಗಳ ಮೂಲಕ ಈ ದುರಂತ ಘಟನೆಯನ್ನು ಕೋಮುವಾದಗೊಳಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುತ್ತಿದೆ" ಎಂದು ಟ್ವಿಟರ್ ಖಾತೆಯು ಹೇಳಿದೆ.
ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಕೇಂದ್ರ 72 ಗಂಟೆಗಳ ಒಳಗೆ ಘಟನೆಯ ವರದಿಯನ್ನು ಕೇಳಿದೆ. ಈ ಮಧ್ಯೆ ಬಿರ್ಭೂಮ್ ಹಿಂಸಾಚಾರದ ಬಲಿಪಶುಗಳು ಹಿಂದೂ ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಪ್ಪುದಾರಿಗೆಳೆಯುವಂತಿವೆ ಎಂಬುದು ಸ್ಪಷ್ಟವಾಗಿದೆ. ಘಟನೆಯಲ್ಲಿ ಮೃತಪಟ್ಟ ಎಂಟು ಮಂದಿಯೂ ಮುಸ್ಲಿಮರಾಗಿದ್ದಾರೆ.

Fact Check
ಕ್ಲೇಮು
ಬಿರ್ಭೂಮ್ ಹಿಂಸಾಚಾರದಲ್ಲಿ ಮೃತರು ಹಿಂದೂಗಳು ಎಂದು ಸಂದೇಶ ವೈರಲ್
ಪರಿಸಮಾಪ್ತಿ
ಬಿರ್ಭೂಮ್ ಹಿಂಸಾಚಾರದಲ್ಲಿ ಮೃತಪಟ್ಟವರೆಲ್ಲಾ ಮುಸ್ಲಿಂಮರಾಗಿದ್ದಾರೆ. ಘಟನೆಗೆ ಕೋಮುಬಣ್ಣ ಹಚ್ಚುವ ಪ್ರಯತ್ನ ನಡೆದಿದೆ.












Click it and Unblock the Notifications