ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹುಲಿಗಳ ಅಬ್ಬರ... Zee Kannada Sa Re Ga Ma Pa

ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಕನ್ನಡಿಗರ ಮನೆ ಮಾತಾಗಿದ್ದು, ಶನಿವಾರ & ಭಾನುವಾರ ಬಂತು ಅಂದ್ರೆ ಸಾಕು ಜನರು ಜೀ ಕನ್ನಡ ಬಿಟ್ಟು ಕದಲುವುದಿಲ್ಲ ಎಂಬಂತಹ ವಾತಾವರಣ ಇದೆ. ಕರ್ನಾಟಕದ ಮೂಲೆ ಮೂಲೆಯಿಂದ ಬರುವ ಗಾಯಕರು ಹಾಡು ಹಾಡುತ್ತಾ, ಇಡೀ ಕರ್ನಾಟಕದ ಕನ್ನಡಿಗರ ಮನಸ್ಸಲ್ಲಿ ನೆಲೆಯೂರಿದ್ದಾರೆ. ಅದರಲ್ಲೂ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹುಲಿಗಳ ಅಬ್ಬರ...

ಹಾಡು ಹಾಡಬೇಕು ಜೀವನದಲ್ಲಿ ಸಂಗೀತವನ್ನ ಕಲಿತು ಏನಾದ್ರೂ ಸಾಧನೆ ಮಾಡಬೇಕು ಎಂಬ ಆಸೆಗೆ, ಕೋಟಿ ಕೋಟಿ ಯುವಕ & ಯುವತಿಯರಿಗೆ ಬೆಂಬಲ ನೀಡುತ್ತಾ ಬಂದಿದೆ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ. ಯಾಕಂದ್ರೆ ಹತ್ತಾರು ವರ್ಷಗಳಿಂದ ಕೂಡ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರ ಮನಸ್ಸು & ಹೃದಯ ಎರಡನ್ನೂ ಗೆದ್ದು ಬೀಗಿದೆ. ಹೀಗಿದ್ದಾಗಲೇ ಹನುಮಂತ, ಬಾಳು ಬೆಳಗುಂದಿ... ಹೀಗೆ ಉತ್ತರ ಕರ್ನಾಟಕದ ಪ್ರತಿಭೆಗಳು...

Zee Kannada Sa Re Ga Ma Pa Program And North Karnataka Contestants

ಉತ್ತರ ಕರ್ನಾಟಕದ ಪ್ರತಿಭೆಗಳು...

ಹೌದು, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹುಲಿಗಳ ಅಬ್ಬರವು ಜೋರಾಗಿದೆ ಅಂತಾ ಕನ್ನಡಿಗರು ಖುಷಿಪಡುತ್ತಿದ್ದಾರೆ. ಈಗಾಗಲೇ, ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಗೆದ್ದು ಹೋಗಿರುವ ಹನುಮಂತು ಕನ್ನಡಿಗರ ಮನೆ ಮಾತಾಗಿದ್ದಾರೆ. ಹಾಗೂ ಮತ್ತೊಂದು ಕಡೆ ಈ ಸೀಸನ್‌ನಲ್ಲಿ ಬಾಳು ಬೆಳಗುಂದಿ ಹೆಸರು ಕೂಡ ದೊಡ್ಡದಾಗಿ ಸೌಂಡ್ ಮಾಡುತ್ತಿದ್ದು....

ಬಾಳು ಬೆಳಗುಂದಿ ಬಡತನ ಎದುರಿಸಿ ಬಂದು...

ಅಂದಹಾಗೆ ಈಗಾಗಲೇ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದಿಂದ ಬಂದ ಹಲವು ಪ್ರತಿಭೆಗಳು ಮಿಂಚಿದ್ದಾರೆ. ಇದೀಗ ಮತ್ತೆ ಬಾಳು ಬೆಳಗುಂದಿ ಹೆಸರು ಸಖತ್ ಸೌಂಡ್ ಮಾಡುತ್ತಿದ್ದು, ಬೆಂಬಲ ಕೂಡ ಹೆಚ್ಚಾಗುತ್ತಿದೆ. ಈ ಮೂಲಕ ಬಾಳು ಬೆಳಗುಂದಿಗೆ ಸಿಕ್ಕಾಪಟ್ಟೆ ಬೆಂಬಲ ಕೂಡ ಸಿಗುತ್ತಿದೆ.

ಈ ಹಿಂದೆ ಹನುಮಂತು ಕೂಡ ಇದೇ ರೀತಿ ಹೆಸರು ಮಾಡಿ ಮಿಂಚಿದ್ದರು. ಬಾಳು ಬೆಳಗುಂದಿ ಬಡತನ ಎದುರಿಸಿ ಬಂದು ಇದೀಗ ತಮ್ಮದೇ ಒಂದು ಸಾಮ್ರಾಜ್ಯ ಕಟ್ಟಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ ಅಂತಾ ಅವರ ಅಭಿಮಾನಿಗಳು ಈಗ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಪ್ರತಿಭೆಗಳು & ಬಡವರ ಮನೆ ಮಕ್ಕಳು ಬದುಕು ಕಟ್ಟಿಕೊಂಡು ಆರಾಮವಾಗಿ ಬದುಕುತ್ತಿದ್ದಾರೆ. ಈ ರೀತಿ ಕೋಟ್ಯಂತರ ಜನರ ನೆಚ್ಚಿನ ಕಾರ್ಯಕ್ರಮ ಆಗಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮವು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಾರ್ಯಕ್ರಮ 'ಜೀ ಕನ್ನಡ ಸರಿಗಮಪ' ನೋಡುತ್ತಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+