Ekka Song Reels: 'ಬ್ಯಾಂಗಲ್ ಬಂಗಾರಿ'ಗೆ ಸಖತ್ ರೆಸ್ಪಾನ್ಸ್, ರೀಲ್ಸ್ ಫುಲ್ ಟ್ರೇಡಿಂಗ್! ಫ್ಯಾನ್ಸ್‌ಗೆ ಆಹ್ವಾನ..
ಬೆಂಗಳೂರು, ಜೂನ್ 11: ವರನಟ ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ತಲಮಾರಿನ ಹಿರೋ ಯುವ ರಾಜ್ ಕುಮಾರ್ (Yuva Rajkumar) ಅವರ ಎರಡನೇ ಸಿನಿಮಾ 'ಎಕ್ಕ' (Ekka) ಸಿನಿಮಾದ ಮಸ್ತ್ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಎಲ್ಲ ಬಾಯಲ್ಲೂ ಈ ಜೂನ್ 07 ರಂದು ಬಿಡುಗಡೆಯಾದ ಲಿರಿಕಲ್ ವಿಡಿಯೋ ಸಾಂಗ್ 'ಬ್ಯಾಂಗಲ್ ಬಂಗಾರಿ' (Bangle Bangari) ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡಿಂಗ್ ಆಗಿದೆ.
ರೋಹಿತ್ ಪದಕಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕನ್ನಡ ರೂಮ್ಯಾಂಟಿಕ್ ಹಾಗೂ ಆಕ್ಷನ್ ಸಿನಿಮಾ ಆಗಿದೆ. ಯುವಾಗೆ ನಾಯಕಿಯಾಗಿ ಸಂಪದ ನಟಿಸುತ್ತಿದ್ದಾರೆ. ನಟಿ ಸಂಜನಾ ಆನಂದ್ ಅವರು 'ಬ್ಯಾಂಗಲ್ ಬಂಗಾರಿ'ಯಾಗಿದ್ದು, ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡು, ಸಿನಿಮಾ ಸೂಪರ್ ಹಿಟ್ ಎಂದು ಕಾಮೆಂಟ್ ಮಾಡಲಾಗಿದೆ. ಯುವತಿಯರು, ಮಕ್ಕಳು, ಕಪಲ್ಸ್, ಕಾಲೇಜು ವಿದ್ಯಾರ್ಥಿಗಳು #MyBangalBangari ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಹರಿಬಿಡುತ್ತಿದ್ದಾರೆ.

ಒಟ್ಟಾರೆಯಾಗಿ 'ಎಕ್ಕ' ಹಾಡಿಗೆ ಆಡಿಯನ್ಸ್ ಕಡೆಯಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಈ ಹಾಡು ಆನಂದ್ ಆಡಿಯೋದಲ್ಲಿ ಬಿಡುಗೆಯಾದ ಮೂರೇ ದಿನಕ್ಕೆ 8 ಎಂಟು ಲಕ್ಷ ಸಮೀಪ ವೀಕ್ಷಣೆ ಪಡೆದಿದೆ. ಇಲ್ಲದೇ ಯುವರಾಜ್ ಕುಮಾರ್ ಅವರು ಫ್ಯಾನ್ಸ್‌ಗೆ ಕರೆ ನೀಡಿದ್ದಾರೆ. ನೀವು '#EKKA' ಪ್ರಚಾರದ ಭಾಗವಾಗಿ X ಟ್ವಿಟ್ಟರ್ ನಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ. ಹ್ಯಾಷ್‌ಟ್ಯಾಗ್ ಸಮೇತ ಪ್ರಚಾರ ಮಾಡಲು ನೀವು ಸೇರಿಕೊಳ್ಳಬಹುದೆಂದು (http://forms.gle/5WSQuzxX3nGRBU... )ಫಾರ್ಮ್ ಲಿಂಕ್ ನೀಡಿದ್ದಾರೆ. ಈ ಮೂಲಕ ಹೊಸ ರೀತಿಯಲ್ಲಿ ತಮ್ಮ ಸಿನಿಮಾಗೆ ಪ್ರಚಾರ ಆರಂಭಿಸಿದ್ದಾರೆ.
ಮೊದಲ ಸಿನಿಮಾ 'ಯುವ' ಸಕ್ಸಸ್‌ನಲ್ಲಿರುವ ಯುವ ರಾಜ್ ಕುಮಾರ್ ಅವರ 'ಎಕ್ಕ' ಜುಲೈ 18 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಒಂದೇ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡ ಹಾಕಿಕೊಂಡಿದೆ. 'ಎಕ್ಕ' ಟೀಸರ್ ಬಿಡುಗಡೆ ಆಗಿದ್ದು, ಶೀಘ್ರವೇ ಟ್ರೈರಲ್ ಬಿಡುಗಡೆ ಆಗಲಿದೆ.
ಇನ್ನೂ 'ಬ್ಯಾಂಗಲ್ ಬಂಗಾರಿ' ಹಾಡು ನೋಡಿದ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪುನೀತ್ ಅಭಿಮಾನಿಗಳು ಹಾಡನ್ನು ಇಷ್ಟ ಪಟ್ಟಿದ್ದಾರೆ. ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಸದ್ಯ ಎಲ್ಲಿ ನೋಡಿದರೂ ಈ ಹಾಡಿನ ರೀಲ್ಸ್ ವಿಡಿಯೋಗಳು ಹರಿದಾಡುತ್ತಿವೆ. 'ಎಕ್ಕ' ಸಿನಿಮಾ ಗಾಂಧಿನಗರ ಗಲ್ಲಾಪೆಟ್ಟಿಯಲ್ಲಿ ಸಖತ್ ಸದ್ದು ಮಾಡುವ ಮುನ್ಸೂಚನೆ ದೊರೆತಿದೆ.












Click it and Unblock the Notifications