‘ಅಪ್ಪು’ ಪುನೀತ್ ರೀತಿಯೇ ‘ಯುವ’! ಅಭಿಮಾನಿಗಳು ಹೀಗೆ ಯಾಕಂದ್ರು?
ದೊಡ್ಮನೆ ಅಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಗೌರವ, ಯಾಕಂದ್ರೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣಲು ಡಾ. ರಾಜ್‌ಕುಮಾರ್ ಅವರ ಕೊಡುಗೆ ದೊಡ್ಡದಾಗಿದೆ. ಇದೇ ಕಾರಣಕ್ಕೆ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಮನೆಯ, ನಟರಿಗೆ ದೊಡ್ಡ ಗೌರವ ಇದೆ. ಹೀಗಿದ್ದಾಗ ದೊಡ್ಮನೆಯ ಮತ್ತೊಂದು ಕುಡಿ ಇದೀಗ ಸಿನಿಮಾ ಇಂಡಸ್ಟ್ರಿಗೆ ಭರ್ಜರಿ ಹೆಜ್ಜೆ ಹಾಕುತ್ತಿದೆ. ಅದರಲ್ಲೂ ದಿವಂಗತ ಪುನೀತ್ ರಾಜ್‌ಕುಮಾರ್‌ರ ನೆನಪು ಈ ಮೂಲಕ ಮರುಕಳಿಸುತ್ತಿದೆ ಅಂತಿದ್ದಾರೆ ಅಭಿಮಾನಿಗಳು.
ಯುವ ರಾಜ್‌ಕುಮಾರ್ ಭರ್ಜರಿಯಾಗಿ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ. ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ ಇದೇ ತಿಂಗಳು ಅಂದ್ರೆ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಹೀಗೆ ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆ ನಡೆಸಿದ, ಹೊಂಬಾಳೆ ಫಿಲ್ಮ್ಸ್ ಪ್ರಮೋಷನ್ಸ್ ಕೂಡ ಶುರು ಮಾಡಿದೆ. ಇದರ ಜೊತೆಯಲ್ಲೇ ಈಗ ಯುವ ರಾಜ್‌ಕುಮಾರ್‌ರ, ಡಾನ್ಸ್ ವೈರಲ್ ಆಗುತ್ತಿದೆ. 'ಯುವ' ಸಿನಿಮಾದ ಮೊದಲ ಹಾಡಿನಲ್ಲಿ ಡಾನ್ಸ್ ಮಾಡಿ ಮಿಂಚಿರುವ ಯುವ ಅವರು, ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಸಿದ್ದಾರೆ ಅಂತಿದ್ದಾರೆ ಫ್ಯಾನ್ಸ್.

ಯುವ ಜೋಡಿ ಸಪ್ತಮಿ ಗೌಡ
ದೊಡ್ಮನೆ ಯುವ ಕುಡಿ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ, ಭರ್ಜರಿ ತಯಾರಿಗಳ ಮೂಲಕ ಸಿದ್ಧವಾಗಿದೆ. ಯುವ ಮೊದಲ ಸಿನಿಮಾಗೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ 'ಯುವ' ಸಿನಿಮಾ ಸೆಟ್ಟೇರಿದ ದಿನದಿಂದ, ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಈ ಸಿನಿಮಾ ಮೂಲಕ ಯುವ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಹಾಕುತ್ತಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರದಲ್ಲಿ 'ಕಾಂತಾರ' ಸಿನಿಮಾದ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ!
ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಕೂಡ ಪುನೀತ್ ಅವರನ್ನು ನೆನಪು ಮಾಡುತ್ತಾರೆ. ಹಾಗೇ ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರನ್ನೀಗ ನೆನಪು ಮಾಡುತ್ತಿದೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ, ಶುರುವಾಗಿ ಯುವ ಅವರನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ. ಹಾಗೇ ಸಿನಿಮಾ ನೋಡಿ ಎಂಜಾಯ್ ಮಾಡಲು ಕಾಯುತ್ತಿದ್ದಾರೆ. ಯುವ ಡಿಫರೆಂಟ್ ಎಂಟ್ರಿಗೆ ವೇದಿಕೆ ಕೂಡ ಭಾರಿ ಅಬ್ಬರದೊಂದಿಗೆ ಸಜ್ಜಾಗಿದೆ.
ಐತಿಹಾಸಿಕ ಸಿನಿಮಾ ಯಾವಾಗ ಬರುತ್ತೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ ಐತಿಹಾಸಿಕ ಸಿನಿಮಾ ಕಥೆ ಕೂಡ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬರಲೇ ಇಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು, ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಡನೆ ಮೊಮ್ಮಗ ಯುವ ರಾಜ್‌ಕುಮಾರ್ ಇದೀಗ ಅಬ್ಬರಿಸಲು ಸಜ್ಜಾಗಿದ್ದಾರೆ.
ಹಾಗೇ ಭವಿಷ್ಯದಲ್ಲಿ ಯುವ ರಾಜ್‌ಕುಮಾರ್ ಅವರ ಐತಿಹಾಸಿಕ ಸಿನಿಮಾ ತೆರೆಗೆ ಬರುವುದು ಗ್ಯಾರಂಟಿ ಎನ್ನಲಾಗಿದೆ. ಅದಕ್ಕೆ ಮೊದಲೇ ಯುವ ಸಿನಿಮಾ ರಿಲೀಸ್ ಆಗುತ್ತಿದ್ದು, ಜನರು ಈ ಸಿನಿಮಾ ಸೆಲೆಬ್ರೇಟ್ ಮಾಡಲು ಇದೀಗ ಖುಷಿಯಿಂದ ಕಾಯುತ್ತಿದ್ದಾರೆ. ಅಪ್ಪು ಅವರ, ಜನ್ಮದಿನ ಕೂಡ ಇದೇ ಮಾರ್ಚ್‌ನಲ್ಲಿ ಇದೆ. ಪುನೀತ್ ಅವರ ಬರ್ತ್ ಡೇ ನಂತರ ಸಿನಿಮಾ ರಿಲೀಸ್ ಆಗಲಿದೆ.
ಒಟ್ನಲ್ಲಿ ಯುವ ಅವರ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ತನ್ನ ಫಸ್ಟ್ ಲುಕ್‌ನ ಮೂಲಕ ಹುಟ್ಟಿದ್ದ ಕುತೂಹಲ ಈಗ ಮೊದಲ ಹಾಡಿನ ಮೂಲಕ ಮತ್ತಷ್ಟು ಹೆಚ್ಚಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಸಿನಿಮಾ ಕೂಡ ರಿಲೀಸ್ ಆಗಲಿದ್ದು, ಅಭಿಮಾನಿಗಳ ನಿರೀಕ್ಷೆ ನಿಜವಾಗುವ ಕ್ಷಣ ಬರಲಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಕಾರಣಕ್ಕೆ ಯುವ ಅವರು ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಚಾಮರಾಜನಗರಕ್ಕೆ ತೆರಳಿದ್ದಾರೆ.












Click it and Unblock the Notifications