ಮಾಸ್ಟರ್ ಆನಂದ್ ಪತ್ನಿಯಿಂದ ಯುವಕನಿಗೆ ಕಪಾಳಮೋಕ್ಷ, ಅಂತದ್ದೇನಾಯ್ತು?
ಕನ್ನಡದ ಖ್ಯಾತ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದಾರೆ. ಆನಂದ್ ಅವರಂತೆಯೇ ಪುತ್ರಿ ವಂಶಿಕಾ ಕೂಡ ತಮ್ಮ ವಯಸ್ಸಿಗೂ ಮೀರಿದ ಪ್ರತಿಭೆಯಿಂದ ಕರ್ನಾಟಕದ ಮನೆಮಾತಾಗಿದ್ದಾರೆ. ಯಶಸ್ವಿನಿ ಅವರು ಕೂಡ ಪಾಡ್‌ಕಾಸ್ಟ್ ನಡೆಸುತ್ತಾ ಹೊಸ ಹೊಸ ಪ್ರಯತ್ನಗಳಿಗೆ ಕೈಹಾಕುತ್ತಲೇ ಇದ್ದಾರೆ. ಇನ್ನು ಸದಾ ಬೋಲ್ಡ್ ಮಾತುಗಳನ್ನಾಡುವ ಮೂಲಕ ಆಗಾಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಯಶಸ್ವಿನಿ ಅವರು ಯುವಕನೊಬ್ಬನಿಗೆ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಯಶಸ್ವಿನಿ ಆನಂದ್ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದಾ ಬ್ಯುಸಿಯಾಗಿದ್ದಾರೆ. ಆಗಾಗ ತಮ್ಮ ದೈನಂದಿನ ಸಂಗತಿಗಳನ್ನು ಸೋಶಿಯಲ್ ಮೀಡಿಯಾದಲ್ಲೇ ಹಂಚಿಕೊಂಡು ಜನರೊಂದಿಗೆ ಕನೆಕ್ಟ್ ಆಗಿರುತ್ತಾರೆ. ಈಗಲೂ ಯಶಸ್ವಿನಿ ಅವರು ಒಂದು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಅವರು ಯುವಕನ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಕಂಡವರು ನಿಜಕ್ಕೂ ಶಾಕ್‌ಗೆ ಒಳಗಾಗಿದ್ದಾರೆ. ಬಳಿಕ ಯಶಸ್ವಿನಿ ಅವರು ಯುವಕನ ಕಪಾಳಕ್ಕೆ ಬಾರಿಸಲು ಕಾರಣವೇನು? ಎಂದು ಪತ್ತೆ ಹಚ್ಚಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಮಾಸ್ಟರ್‌ಪೀಸ್ ಸಿನಿಮಾದ ಐ ಕಾಂಟ್ ವೇಟ್ ಬೇಬಿ...ಹಾಡು ಸಖತ್ ಫೇಮಸ್. ಈ ಹಾಡಿಗೆ ಯಶಸ್ವಿನಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಯುವಕರೊಬ್ಬರ ಜೊತೆಗೆ ಯಶಸ್ವಿನಿ ಅವರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಪೊಗರ್ ಇದ, ಜಿಗರ್ ಇದೆ ಎನ್ನುತ್ತಾ ಅವರು ಯಶಸ್ವಿನಿ ಅವರು ಆ ಯುವಕನ ಕಪಾಳಕ್ಕೆ ಬಾರಿಸೇಬಿಟ್ಟಿದ್ದಾರೆ. ಅಸಲಿ ವಿಚಾರವೆಂದ್ರೆ ಇದೊಂದು ರೀಲ್ ಅಷ್ಟೇ ಎಂಬುದು ಆನಂತರ ತಿಳಿದುಬಂದಿದೆ.
ಮಾಸ್ಟರ್‌ಪೀಸ್ ಸಿನಿಮಾ ಹಾಡಿಗೆ ಯಶಸ್ವಿನಿ ಅವರು ಯುವಕನೊಂದಿಗೆ ಸ್ಟೆಪ್ ಹಾಕಿರುವ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಐ ಕಾಂಟ್ ವೇಟ್ ಬೇಬಿ ಎನ್ನುತ್ತಾ ಯಶಸ್ವಿನಿ ಅವರು ಕುಣಿದಾಡಿದ್ದಾರೆ. ಇದೇನಪ್ಪಾ ಯಶಸ್ವಿನಿ ಅವ್ರು ಯಾರೋ ಹುಡುಗನ ಜೊತೆ ರೀಲ್ಸ್ ಎಲ್ಲ ಮಾಡ್ತಿದ್ದಾರಲ್ಲ? ಎಂದು ಕನ್ಫ್ಯೂಸ್ ಆಗಿ ಕೆಲವರು ಆ ಹುಡುಗ ಯಾರು ಮೇಡಂ? ಎಂದು ಕೇಳೇಬಿಟ್ಟಿದ್ದಾರೆ. ಇದಕ್ಕೆ ಕ್ಲಾರಿಟಿ ಕೊಟ್ಟಿರುವ ಯಶಸ್ವಿನಿ ಅವರು, "ಆತ ದೇವರು ಕೊಟ್ಟಿರೋ ನನ್ನ ಬ್ರದರ್" ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ರೀಲ್ಸ್ ಹಂಚಿಕೊಂಡಿರುವ ಯಶಸ್ವಿನಿ ಅವರು ಇದು ಬ್ಲೂಪರ್ಸ್? ಎಂದು ಕೇಳಿದ್ದಾರೆ. ಹೇಗಿದೆ ನಮ್ಮ ಡ್ಯಾನ್ಸ್? ಶೂಟ್ ದಿನದ ರೀಲ್ಸ್ ಎಂದು ಬರೆದುಕೊಂಡಿದ್ದಾರೆ.

ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಮೊದಲೆಲ್ಲ ಜನಕ್ಕೆ ಅಷ್ಟೊಂದು ಪರಿಚಯ ಇರಲಿಲ್ಲ. ಇತ್ತೀಚಿನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಅವರು ಕೂಡ ಒಂದು ರೀತಿ ಸೆಲೆಬ್ರಿಟಿಯೇ ಆಗಿದ್ದಾರೆ. ಸೆಲೆಬ್ರಿಟಿಗಳ ಪಾಡ್‌ಕಾಸ್ಟ್ ಮೂಲಕ ತಮ್ಮದೇ ಆದ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಪಾಡ್‌ಕಾಸ್ಟ್ ಮೂಲಕ ನಿರೂಪಣೆಯಲ್ಲೂ ಯಶಸ್ವಿನಿ ಅವರು ಸೈ ಎನಿಸಿಕೊಂಡಿದ್ದಾರೆ.












Click it and Unblock the Notifications