Master Anand: ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಮತ್ತೊಂದು ಪೋಸ್ಟ್‌: ದಿಢೀರ್‌ ಏನಾಯ್ತು?

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆ್ಯಕ್ವಿವ್‌ ಆಗಿರುವ ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್‌, ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಇದೀಗ ನೋವಿನ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ಸದಾ ಲವಲವಿಕೆಯಿಂದ ಇರುವ ಯಶಸ್ವಿನಿ ಮಾಸ್ಟರ್ ಆನಂದ್, ಇದೀಗ ಹಾಸಿಗೆಯ ಮೇಲೆಯೇ ದಿನ ಕಳೆಯುವಂತಾಗಿದೆ. ಅಷ್ಟಕ್ಕೂ ಯಶಸ್ವಿನಿ ಮಾಸ್ಟರ್ ಆನಂದ್ ಅವರಿಗೆ ಏನಾಯಿತು ಎನ್ನುವುದರ ಮಾಹಿತಿ ಇಲ್ಲಿದೆ.

ಯಶಸ್ವಿನಿ ಮಾಸ್ಟರ್ ಆನಂದ್ ಅವರ ಎರಡೂ ಕಾಲುಗಳಿಗೆ ಸಿಕ್ಕಾಪಟ್ಟೆ ಪೆಟ್ಟಾಗಿದ್ದು, ಎರಡು ಕಾಲುಗಳಿಗೆ ಬ್ಯಾಂಡೇಜ್‌ ಹಾಕಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕಾಲು ಎತ್ತಿ ಇಡಲಾಗದ ಪರಿಸ್ಥಿತಿಗೆ ತಲುಪಿದ್ದಾರೆ.

Yashaswini Master Anand Shares Painful Injury Update on Social Media

ಈ ಬಗ್ಗೆ ಸ್ವತಃ ಹೇಳಿಕೊಂಡಿರುವ ಯಶಸ್ವಿನಿ, 'ಮೊನ್ನೆ ಶನಿವಾರ ಎಲ್ಲರಿಗೂ ಹ್ಯಾಪಿ ಡೇ ಆದರೆ ನನಗೆ ಮಾತ್ರ ಬ್ಯಾಡ್ ಡೇ ಆಗಿತ್ತು. ಬಿಸಿ, ಬಿಸಿ ನೀರಿನಲ್ಲಿ ಹಾಟ್ ವಾಟರ್‌ ಸ್ಟೀಮ್ ತೆಗೆದುಕೊಳ್ಳುತ್ತಾ ಇದ್ದೆ. ಅದು ರಪ್ ಅಂತ ಕಾಲಿನ ಮೇಲೆ ಬಿದ್ದು ಬಿಡ್ತು. ಫುಲ್, ಫುಲ್‌ ಉರಿ, ಉರಿ ಆಯ್ತು. ತಕ್ಷಣ ಆಸ್ಪತ್ರೆಗೆ ಹೋದೆ ಅವರು ಮೇಡಂ ಏನು ತೊಂದರೆ ಇಲ್ಲ ಅಂತಾ ಹೇಳಿ ಬ್ಯಾಂಡೇಜ್‌ ಮಾಡಿದ್ರು'.

'ಬ್ಯಾಂಡೇಜ್‌ ಮಾಡಿದ ಮೇಲೆ ಸರಿ ಹೋಗುತ್ತದೆ ಅಂತ ಆರಾಮಾಗಿ ನಾನು ಮನೆಗೆ ಬಂದೆ. ಆಸ್ಪತ್ರೆಯಿಂದ ಬಂದ ಮೇಲೆ ಸಂಜೆ, ರಾತ್ರಿ ಹೊತ್ತಿಗೆ ಕಾಲಿನ ಮೇಲೆ ಗುಳ್ಳೆಗಳು ಬರಲು ಶುರುವಾಯಿತು. ಮತ್ತೆ ಡಾಕ್ಟರ್ ಹತ್ರ ಹೋಗಿ ಬ್ಯಾಂಡೇಜ್ ಬಿಚ್ಚಿ ನೋಡಿದ್ರೆ ಕಾಲು ತುಂಬಾ ದೊಡ್ಡ, ದೊಡ್ಡ ಗುಳ್ಳೆಗಳು ಬಂದಿತ್ತು. ಎರಡೂ ಕಾಲಲ್ಲೂ ದೊಡ್ಡ, ದೊಡ್ಡ ಗುಳ್ಳೆಗಳು ಬಂದಿದ್ದವು. ಮಾಸ್ಟರ್‌ ಆನಂದ್‌ ಅವರು ಹಂಪಿ ಉತ್ಸವಕ್ಕೆ ಹೋಗಿದ್ದರು. ಅವರು ಇರಲಿಲ್ಲ. ಕೊನೆಗೆ ಡಾಕ್ಟರ್‌ ಹತ್ತಿರ ಹೋದಾಗ ಅವರು ಗುಳ್ಳೆಗಳನ್ನು ಒಡೆದು ಕಾಲಿಗೆ ಸ್ಕಿನ್ ಔಟ್ ಮಾಡಿದರು'.

Yashaswini Master Anand Shares Painful Injury Update on Social Media

'ಭಾನುವಾರ ನನ್ನ ಗಂಡ ಹಂಪಿಯಿಂದ ಬಂದು ಮೇಲೆ ಮತ್ತೆ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಅವತ್ತಿನಿಂದ ನನ್ನ ಕಾಲಿನ ಡ್ರೆಸ್ಸಿಂಗ್‌, ನನ್ನ ಊಟ, ತಿಂಡಿ ಎಲ್ಲಾ ಅವರೇ ನೋಡಿಕೊಳ್ಳುತ್ತಿದ್ದಾರೆ. ನನ್ನ ಗಂಡ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಗಂಡ ನನ್ನ ಜೊತೆಯಲ್ಲೇ ಇದ್ದಾರೆ ಎನ್ನುವ ಖುಷಿ ಹೆಚ್ಚಿದೆ' ಎಂದು ಯಶಸ್ವಿನಿ ಆನಂದ್ ಹೇಳಿದ್ದಾರೆ.

ಯಶಸ್ವಿನಿ ಆನಂದ್ ಅವರು ತಮ್ಮ ಕಾಲಿಗೆ ಆಗಿರುವ ಗಾಯದ ಬಗ್ಗೆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಮೇಲೆ ಯಾರು ಕಣ್ಣು ಬಿತ್ತೋ ಆದರೂ ಏನ್ ಆಗತ್ತೋ ಅದು ಒಳ್ಳೆದಕ್ಕೆ ಆಗುತ್ತದೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಯಶಸ್ವಿನಿ ಕಾಲಿನ ವಿಡಿಯೋ ನೋಡಿದ ಎಂಥವರಿಗಾದರೂ ಕರಳು ಚುರುಕ್‌ ಎನ್ನುತ್ತದೆ. ಅಷ್ಟರ ಮಟ್ಟಿಗೆ ಅವರ ಕಾಲುಗಳು ಗಾಯಗೊಂಡಿದೆ.ಇನ್ನು ಯಶಸ್ವಿನಿ ಮಾಸ್ಟರ್‌ ಆನಂದ್‌ ಅವರಿಗೆ ಕಮೆಂಟ್‌ ಮೂಲಕ ಧೈರ್ಯ ತುಂಬಿರುವ ಅಭಿಮಾನಿಗಳು, ಬೇಗ ಹುಷಾರಾಗಿ ಮೇಡಂ. ನೋಡಲು ತುಂಬಾ ಕಷ್ಟ ಆಗುತ್ತದೆ, ಆಗೋದೆಲ್ಲ ಒಳ್ಳೇದಕ್ಕೆ, ಧೈರ್ಯ ತೆಗೆದುಕೊಳ್ಳಿ ಮೇಡಂ, ತಾಯಿ ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+