Yash Toxic Teaser: ಯಶ್ ಟಾಕ್ಸಿಕ್ ಟೀಸರ್ ಬಿಡುಗಡೆ ದಿನಾಂಕ, ಸಮಯ ರಿವೀಲ್
Yash Toxic teaser: ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾ ಟಾಕ್ಸಿಕ್ ಟೀಸರ್ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ. ಚಿತ್ರತಂಡ ಫೆಬ್ರವರಿ 20ರ ಬೆಳಗ್ಗೆ 9:35ಕ್ಕೆ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
ಇತ್ತೀಚೆಗೆ ಟಾಕ್ಸಿಕ್ ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಇದಕ್ಕೂ ಮೊದಲು ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇದರಿಂದ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಕ್ಕಿದೆ. ಮೊದಲು ರಾಯ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿತ್ತು. ಇದರಲ್ಲಿ ಕೆಲವು ಬೋಲ್ಡ್ ದೃಶ್ಯಗಳು ಕೂಡ ಇದ್ದ ಕಾರಣ ಸಖತ್ ಸದ್ದು ಮಾಡುವುದಲ್ಲದೆ, ಈ ಬಗ್ಗೆ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇನ್ನೂ ಈ ಬಾರಿ ಹೊಸ ಟೀಸರ್‌ನಲ್ಲಿ ಯಾವುದೇ ಬೋಲ್ಡ್ ದೃಶ್ಯಗಳು ಇರುತ್ತವೆಯೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಭಾರೀ ಚರ್ಚೆ ಹುಟ್ಟುಹಾಕಿದ್ದ ಹಸಿಬಿಸಿ ದೃಶ್ಯಗಳು
ಇತ್ತೀಷೆಗಷ್ಟೇ ಬಿಡುಗಡೆಯಾಗಿದ್ದ ಟಾಕ್ಸಿಕ್ ಟೀಸರ್‌ನಲ್ಲಿ ಗುಂಡಿನ ಸದ್ದು, ಹಸಿಬಿಸಿ ದೃಶ್ಯ ದೃಶ್ಯಗಳು ಕಂಡುಬಂದಿದ್ದು, ಪರ-ವಿರೋಧ ಚರ್ಚೆಗಳು ಆಗಿದ್ದವು. ಇದೀಗ ಶುಕ್ರವಾರ ಮತ್ತೊಂದು ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಗಗಲೇ ಸಿನಿಮಾದಲ್ಲಿನ ಎಲ್ಲಾ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿತ್ತು. ಅಲ್ಲದೆ, ರಾಯ ಪಾತ್ರ ಪರಿಚಯಿಸುವ ಟೀಸರ್ ರಿಲೀಸ್ ಮಾಡಲಾಗಿತ್ತು.
ಇದೇ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಇದೇ ಕಾರಣದಿಂದ ಈ ಟೀಸರ್ ದೊಟ್ಟ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಟೀಸರ್ ಮೂಲಕ ಸಿನಿಮಾ ಪ್ರಚಾರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತಿದೆ. ಆದರೆ, ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ದಿನಾಂಕ ಹಾಗೂ ಸಮಯದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.
ಟೀಸರ್ ಮೂಲಕ ಪ್ರಚಾರ ಆರಂಭ
ಚಿತ್ರದ ಪ್ರಚಾರವು ಟೀಸರ್ ಮೂಲಕ ಈಗಾಗಲೇ ಆರಂಭವಾಗಿದೆ. ಟಾಕ್ಸಿಕ್‌ನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ನಟಿಯರ ದಂಡೇ ಇದೆ. ಈ ಚಿತ್ರವು ರೆಟ್ರೋ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಹಳೆಯ ಶೈಲಿಯ ದೃಶ್ಯಗಳು ಹಾಗೂ ಉತ್ತಮ ದೃಶ್ಯಗಳ ಸಂಯೋಜನೆ ನಿರೀಕ್ಷೆ ಹೊಂದಿರುವ ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭವ ನೀಡುತ್ತದೆ.
ನಿರ್ಮಾಕರ ಪ್ರಕಾರ, ಟೀಸರ್ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಲಾಗುತ್ತಿದೆ. ಟಾಕ್ಸಿಕ್ ಸಿನಿಮಾ ಸಿನಿಮಾದ ಕಥೆ ಅಭಿಮಾನಿಗಳಿಗೆ ರೋಮಾಂಚಕ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಮೊದಲು ಬಿಡುಗಡೆಯಾಗಿದ್ದ ಟೀಸರ್ ಯಾವ ಬಾಲಿವುಡ್, ಹಾಲಿವುಡ್‌ಗೇನೂ ಕಡಿಮೆಯಿಲ್ಲ ಎನ್ನುವ ಮಾತುಗಳು ಒಂದು ಕಡೆಯಾದರೆ, ಇನ್ನೂ ಕೆಲವರು ಇಂತಹ ಹಸಿಬಿಸಿ ದೃಶ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರಲಿವೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಕೆಲವೇ ಗಂಟೆಗಳಲ್ಲಿ ಮತ್ತೊಂದು ಟೀಸರ್ ಬಿಡುಗಡೆಯಾಗಲಿದ್ದು, ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಯಾರು ಯಾವ ಪಾತ್ರದಲ್ಲಿ ಕಣಿಸಿಕೊಳ್ಳಲಿದ್ದಾರೆ?
* ಯಶ್ : ರಾಯಾ
* ನಯನತಾರಾ : ಗಂಗಾ ಪಾತ್ರದಲ್ಲು ಮಾಸ್ ಮತ್ತು ಡಾನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
* ಕಿಯಾರಾ ಅಡ್ವಾಣಿ : ನಾದಿಯಾ
* ಹುಮಾ ಖುರೇಷಿ : ಎಲಿಜಬೆತ್
* ರುಕ್ಮಿಣಿ ವಸಂತ್ : ಮೆಲ್ಲಿಸಾ
* ತಾರಾ ಸುತಾರಿಯಾ : ರೆಬೆಕಾ
* ನಟಾಲಿ ಬರ್ನ್ : ಟೀಸರ್‌ನಲ್ಲಿ ಕಾಣಿಸಿಕೊಂಡ ಉಕ್ರೇನಿಯನ್-ಅಮೇರಿಕನ್ ನಟಿ.












Click it and Unblock the Notifications