Yash: 'ಟಾಕ್ಸಿಕ್' ನಿರ್ದೇಶಕರ ಸ್ಥಾನ ಯಶ್ ಆಕ್ರಮಿಸಿದರಾ?: ಆರೋಪಗಳ ಬಗ್ಗೆ ಸಹ ಕಲಾವಿದ ಹೇಳಿದ್ದೇನು?
Toxic Film: ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸರಣಿ ಸಿನಿಮಾಗಳ ಪೈಕಿ KGF 2 ಸಿನಿಮಾದಲ್ಲಿ ಒಂದಷ್ಟು ಡೈಲಾಗ್‌ಗಳನ್ನು ಬರೆದಿದ್ದರು ಎಂದು ಹೇಳಲಾಗಿತ್ತು. ಇದೀಗ "ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಬ್ಯೂಸಿಯಾಗಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು "ಟಾಕ್ಸಿಕ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಶ್ ಹಾಗೂ ನಿರ್ದೇಶಕಿ ಮಧ್ಯ ಎಲ್ಲವು ಸರಿಯಿಲ್ಲ ಎಂಬ ಆರೋಪ, ಚರ್ಚೆಗಳು ಕೇಳಿ ಬಂದಿವೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿದ ಸಹನಟರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಮೊದಲಿನಿಂದಲೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವ, ಅದಕ್ಕಾಗಿ ಶ್ರಮಿಸುವ ಜಾಯಮಾನದವರು ನಟ ಯಶ್. ಅವರ ಮುನ್ನುಗ್ಗುವ ಗುಣದಿಂದಲೇ ಕೆಜಿಎಫ್ ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿವೆ. ಈ ವಿಚಾರವನ್ನು ಸಂದರ್ಶನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸಹ ಹೇಳಿದ್ದಾರೆ. ಯಶ್ ಬರೀ ಹೀರೋ ಮಾತ್ರವಲ್ಲ. ಅವರು ಸ್ಕ್ರಿಪ್ಟ್, ಡೈಲಾರ್ ರೈಟಿಂಗ್, ಸಿನಿಮಾಗೆ ಅಗತ್ಯತೆ ನೋಡಿಕೊಂಡು ಬದಲಾವಣೆ ಮಾಡಬಲ್ಲ ತಂತ್ರಜ್ಞರು ಹೌದು. ಸಿನಿಮಾ ವಿಚಾರದಲ್ಲಿ ಯಶ್ ದೂರದೃಷ್ಟಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಹೀಗಿದ್ದಾಗಲೇ ಯಶ್ ನಟನೆಯ ಟಾಕ್ಸಿಕ್ ಶೂಟಿಂಗ್ ವೇಳೆ ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ಯಶ್ ಮಧ್ಯ ತಾಳ ಮೇಳ ಇಲ್ಲ. ಪರಸ್ಪರ ಅಭಿಪ್ರಾಯಗಳಿಗೆ ಗೌರವ ನೀಡಲ್ಲ. ಯಶ್ ಹಸ್ತಕ್ಷೇಪದಿಂದ ನಿರ್ದೇಶಕಿಗೆ ತಲೆ ಕೆಟ್ಟುಹೋಗಿದೆ. ಹೀಗಾದರೆ ಸಿನಿಮಾ ಕಥೆ ಮುಂದೆ ಹೇಗೆ? ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿವೆ. ಇತ್ತೀಚೆಗೆ ಈ ಆರೋಪವನ್ನು ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟ ಸುದೇವ್ ನಾಯರ್ ಅವರು ಪ್ರತಿಕ್ರಿಯಿಸಿದ್ದಾರೆ.
ಯಶ್ ಮೇಲೆ ಹೊಟ್ಟೆಕಿಚ್ಚು: ಟಾಕ್ಸಿಕ್ ಕಲಾವಿದ ಹೇಳಿದ್ದೇನು
ಶೂಟಿಂಗ್ ವೇಳೆ ಯಶ್ ಗೀತು ಮೋಹನ್ ದಾಸ್ ಮಾತು ಕೇಳುತ್ತಿಲ್ಲ. ಹೀಗಾಗಿಯೇ ಪದೇ ಪದೆ ಶೂಟ್ ಮಾಡಿ ನಿರ್ಮಾಣ ವೆಚ್ಚ 600 ಕೋಟಿ ರೂಪಾಯಿ ದಾಟಿದೆ ಎಂದೆಲ್ಲ ಮಾತುಗಳು ಕೇಳಿ ಬಂದಿವೆ. ಇದೆಲ್ಲ ಸುಳ್ಳು ಎಂದು ಸುದೇವ್ ನಾಯರ್ ಸ್ಪಷ್ಟಪಡಿಸಿದ್ದಾರೆ.
ಯಶ್ ಅವರು ಈ ಸಿನಿಮಾದಲ್ಲಿ ನಿರ್ದೇಶಕರನ್ನೇ ಮೂಲೆಗುಂಪು ಮಾಡಿ ಆ ಸ್ಥಾನ ಆಕ್ರಮಿಸಿಕೊಂಡಿದ್ದಾರೆ. ಹೀಗೆಲ್ಲ ಆರೋಪ ಮಾಡಿದ್ದಾರೆ. ಅದೆಲ್ಲವು ಶುದ್ಧ ಸುಳ್ಳು. ನಾನು ಆ ಸಿನಿಮಾದಲ್ಲಿ ನಟಿಸಿದ್ದೇನೆ. ಯಶ್ ಜನಪ್ರಿಯತೆ ಸಹಿಸದವರು ಹೊಟ್ಟಿ ಕಿಚ್ಚಿನಿಂದ ಈ ರೀತಿ ಸುಳ್ಳು ಮತ್ತು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಮತ್ತು ಯಶ್ ಅವರ ಮಧ್ಯ ಸೌಹಾರ್ದಯುತ ಸಂಬಂಧವಿದೆ. ಇಬ್ಬರಲ್ಲೂ ಪರಸ್ಪರ ಮಾತನ್ನು ಗೌವರವಿಸುವ ಗುಣವಿದೆ. ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಗೌರವಿಸುತ್ತಾರೆ. ಕೂತು ಮಾತನಾಡುತ್ತಾರೆ. ಟಾಕ್ಸಿಕ್ ಶೂಟಿಂಗ್ ವೇಳೆ ಎಲ್ಲವು ಸರಿ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications