''ಯಶ್ ನಟನೆಯ 'ರಾಮಾಯಣ' ಸಿನಿಮಾ ಪ್ರಚಾರಕ್ಕೆ ₹500-600 ಕೋಟಿ ಬೇಕಂತೆ!, ಗಳಿಕೆ ಎಷ್ಟಾಗುತ್ತೆ ಗೊತ್ತಾ..?''
ಕನ್ನಡ ಚಿತ್ರರಂಗದತ್ತ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಂಡರೆ ಅನೇಕರಿಗೆ ಅಪಾರ ಗೌರವವಿದೆ. ಅವರಿಗೆ ಸಿನಿಮಾ ಮಾಡಿದ್ದ ಕನ್ನಡ ನಿರ್ಮಾಪಕ ಕೆ.ಮಂಜು ಅವರು ಸಹ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಈ ಸಂಬಂಧ ಅವರು ಮುಂಬೈಗೆ ಹೋದಾಗ ಅಲ್ಲಿ ನಟ ಯಶ್ ಅವರನ್ನು ಭೇಟಿ ಮಾಡಿದ್ದಾರೆ. ರಾಮಾಯಣ ಸಿನಿಮಾದ ಅರ್ಧಗಂಟೆಗೆ ಹೆಚ್ಚು ಹೊತ್ತಿನ ವಿಡಿಯೋ ನೋಡಿದ್ದಾರೆ. ಚಿತ್ರದ ಪ್ರಚಾರಕ್ಕೆ ₹500-600 ಕೋಟಿ ಹಣ ಬೇಕಾಗುತ್ತದೆ ಎಂಬುದನ್ನ ಕೇಳಿ ಅವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಬೇರೆ ನಿರ್ಮಾಪಕರಿಗೆ ಯಶ್ ಬಗ್ಗೆ, ರಾಮಾಯಣ ಗಳಿಕೆ ಬಗ್ಗೆ ಮಾತನಾಡಿದ್ದನ್ನು ಕೆ. ಮಂಜು ಅವರು ವಿವರಿಸಿದ್ದಾರೆ.
ನಾನು ಬಾಲಿವುಡ್ ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಮುಂಬೈಗೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿ ಯಶ್ ಅವರ ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿರುವುದು ಗೊತ್ತಾಯಿತು. ಯಶ್ ಅವರು ಇದ್ದಾರೆಂದು ತಿಳಿದು ಕರೆ ಮಾಡಿದೆ. ಅಣ್ಣ ಎಲ್ಲಿದಿರಾ? ನಿಮ್ಮನ್ನು ಭೇಟಿ ಮಾಡುತ್ತೇನೆ. ಹತ್ತು ನಿಮಿಷ ಜೊತೆಗಿರುತ್ತೇನೆ ಎಂದವರು ಸುಮಾರು ಒಂದು ಗಂಟೆ ಕಾಲ ಕೂತು ಸಿನಿಮಾಗಳ ವಿಚಾರವಾಗಿ ಮಾತನಾಡಿದರು. ಅಲ್ಲಿ ದೊಡ್ಡ ದೊಡ್ಡ ನಿರ್ಮಾಪಕರು ಇದ್ದರು.

ಯಶ್ ಅವರು ಟಾಕ್ಸಿಕ್, ರಾಮಾಯಣ ಬಗ್ಗೆ ಮಾತನಾಡಿದರು. ಅಲ್ಲಿ ನನಗೆ ದೊಡ್ಡ ಫೈನಾನ್ಷಿಯರ್ (ನಿರ್ಮಾಪಕರು) ಪರಿಚಯವಾದರು. ಆ ನಿರ್ಮಾಪಕರು 'ಯಶ್ ಭಾಯಿ ಸಿನಿಮಾಗಾಗಿ ಜಪಾನ್‌ನಲ್ಲಿ ಫ್ಯಾನ್ಸ್ ಇದಾರೆ ಎಂದರು. ಕನ್ನಡದಿಂದ ಬಂದ ನಟ ಬಾಲಿವುಡ್‌ನಲ್ಲಿ ಈ ರೇಂಜಿಗೆ ಸಿನಿಮಾ ಮಾಡ್ತಿದಾರೆ ಎಂದು ಅವರು ಯಶ್ ಬಗ್ಗೆ, ಅವರ ಸಿನಿಮಾ ರೇಂಜ್ ಬಗ್ಗೆ ಮಾತನಾಡಿದರು. ಅದನ್ನು ಕೇಳಿ ನನಗೆ ಖುಷಿಯ ಆಯಿತು. ಯಶ್ ನಮ್ಮ ಹುಡುಗ ಎನ್ನಲು ಹೆಮ್ಮೆ ಆಗುತ್ತದೆ.
ನಮ್ಮಲ್ಲಿ ಒಳ್ಳೆಯ ಕಂಟೆಂಟ್ ಆಯ್ಕೆ ಮಾಡಿ. ಕಥೆಗಾರರ ಕೊರತೆ ಇದೆ. ತಂತ್ರಜ್ಞಾನದ ಕೊರತೆ ಇದೆ. ಮೊದಲು ಸಿನಿಮಾ ವ್ಯಾಪಾರ ಇರಲಿಲ್ಲ. ಕೆಜಿಎಫ್ ಬಳಿಕ ಸಿನಿಮಾ ವ್ಯಾಪಾರ ಚೆನ್ನಾಗಿ ಆಗಿದೆ. ಒಳ್ಳೆಯ ಸಿನಿಮಾ ಮಾಡಿದರೆ ಗೆದ್ದೆ ಗೆಲ್ಲುತ್ತೇವೆ ಎಂದು ಯಶ್ ಅವರು ನನ್ನ ಪ್ರಾಜೆಕ್ಟ್ ಬಗ್ಗೆಯು ಮಾತನಾಡಿದರು. ಬಾಲಿವುಡ್ ಸಿನಿಮಾ ಮಾಡುತ್ತೀನಿ ಎಂದಾಗ ಏನಾದ್ರು ಸಹಾಯ ಬೇಕಾದರೆ ಹೇಳಿ ಸಹಾಯ ಮಾಡುವುದಾಗಿ ಯಶ್ ತಿಳಿಸಿದರೆಂದು ಕೆ. ಮಂಜು ವಿವರಿಸಿದರು.

ಕನ್ನಡದ ಹುಡುಗ ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಾರೆ. ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಸಿಂಗಾಪುರ, ಮಲೆಷಿಯಾದಲ್ಲಿ ಫ್ಯಾನ್ಸ್ ಇದಾರೆ ಎಂದು ಬೇರೆ ನಿರ್ಮಾಪಕರು ಹೇಳಿದ್ದಾರೆ. ಯಶ್ ಅವರಿಗೆ ನಮ್ಮ ಬೆಂಬಲ ಸದಾ ಇದ್ದೆ ಇದೆ. ಯಶ್ ಅವರು ಯಾವಾಗಲೂ ನಂದು ಎಂದು ಹೇಳಲ್ಲ. ನಮ್ಮದು, ನಮ್ಮ ಕನ್ನಡ ಚಿತ್ರರಂಗ, ನಮ್ಮ ಕಲಾವಿದರು ಎಂದು ಮಾತನಾಡುತ್ತಾರೆ. ಕಲೆ, ಭಾಷೆ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಇದೆ. ನನ್ನ ಬಾಲಿವುಡ್ ಸಿನಿಮಾ ಅವರ ಸಹಾಯ ಬೇಕಿದೆ. ಅವರು ಸಹಾಯದ ಭರವಸೆ ನೀಡಿದ್ದಾರೆ.
ರಾಮಾಯಣ ಗಳಿಕೆ 5,000 ಕೋಟಿ! ಪ್ರಚಾರಕ್ಕೆ 500-600 ಕೋಟಿ ರೂ.
ಯಶ್ ನಟನೆಯ 'ರಾಮಾಯಣ' ಸಿನಿಮಾದ 45 ನಿಮಿಷ ಫೂಟೇಜ್ ನೋಡಿದ್ದರ ಬಗ್ಗೆ ಉತ್ತರಿಸಿದ ಕೆ. ಮಂಜು ಅವರು, ರಾಮಾಯಣ 45 ಭಾಷೆಗಳಿಗೆ ಡಬ್ ಆಗುತ್ತಿದೆ. ಚಿತ್ರ ತುಂಬ ಅದ್ಭೂತವಾಗಿ ಮೂಡಿ ಬಂದಿದೆ. ಒಂದೊಂದು ಫ್ರೇಮ್ ಸಹ ಚೆನ್ನಾಗಿದೆ. ಊಹೆಗೂ ಮೀರಿ ಸಿನಿಮಾ ತಯಾರಾಗಿದೆ ಎಂದರು.
ಯಶ್ ನಾರ್ಮಲ್ ಹಿರೋ ಅಲ್ಲ. ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಹಿರೋ. ರಾಮಾಯಣಕ್ಕೆ ಸುಮಾರು 2300 ಕೋಟಿ ಬಂಡವಾಳ ಹಾಕಲಾಗಿದೆ ಎಂಬ ಮಾಹಿತಿ ಇದೆ. ಈ ಸಿನಿಮಾ ಕನಿಷ್ಠ 4000-5000 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ. ಇದರ ಪ್ರಚಾರಕ್ಕೆ ಸುಮಾರು 500-600 ಕೋಟಿ ರೂಪಾಯಿ ಹಣ ಬೇಕಾಗುತ್ತದೆ ಎಂದು ಅಲ್ಲಿಯ ಪ್ರೊಡ್ಯೂಸರ್ ಹೇಳಿದ್ದು ಕೇಳಿ ನನಗೆ ಅಚ್ಚಿ ಆಯಿತು. ಜೊತೆಗೆ ನಮ್ಮ ಯಶ್ ಅವರ ಬೆಳವಣಿಗೆ, ಅವರು ಸಿನಿಮಾ ಗಳಿಕೆ ಕೇಳಿ ತುಂಬ ಖುಷಿಯು ಆಯಿತು ಎಂದು ಮಾತನಾಡಿದ್ದಾರೆ.












Click it and Unblock the Notifications