Toxic: ಮತ್ತೆ ಬೋಲ್ಡ್ ಅವತಾರದಲ್ಲಿ ಯಶ್: ಮಾರ್ಚ್ 2ಕ್ಕೆ "ಟಾಕ್ಸಿಕ್" ಚಿತ್ರತಂಡದಿಂದ ಬಿಗ್ ಸರ್‌ಪ್ರೈಸ್
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ "ಟಾಕ್ಸಿಕ್" ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 19 ರಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದ್ದು, ಅದಕ್ಕೂ ಮುನ್ನ ಚಿತ್ರತಂಡವು ಸಿನಿಮಾದ ಮೊದಲ ಹಾಡು '#Tabaahi' ಬಿಡುಗಡೆಯ ದಿನಾಂಕವನ್ನು ಘೋಷಿಸುವ ಮೂಲಕ ಭರ್ಜರಿ ಗುಡ್‌ನ್ಯೂಸ್ ನೀಡಿದೆ.
ಚಿತ್ರತಂಡದ ಅಧಿಕೃತ ಅಪ್‌ಡೇಟ್ ಪ್ರಕಾರ, ಇದೇ ಮಾರ್ಚ್ 2ರಂದು 'ಟಾಕ್ಸಿಕ್' ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಲಿದೆ. ಈ ಹಾಡಿನಲ್ಲಿ ಯಶ್ ಅವರ ರಗಡ್ ಮತ್ತು ಇಂಟೆನ್ಸ್ ಲುಕ್ ಅನಾವರಣಗೊಳ್ಳಲಿದ್ದು, ಇದು ಯಶ್ ಅಭಿಮಾನಿಗಳಿಗೆ ದೊಡ್ಡ ಮಟ್ಟದ ರಸದೌತಣ ನೀಡಲಿದೆ ಎಂಬ ನಿರೀಕ್ಷೆಯಿದೆ.

ಬೋಲ್ಡ್ ಪೋಸ್ಟರ್ ವೈರಲ್
ಹಾಡಿನ ಬಿಡುಗಡೆಯ ಘೋಷಣೆಯ ಜೊತೆಗೆ ಚಿತ್ರತಂಡ ಹಂಚಿಕೊಂಡಿರುವ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಯಶ್ ಅವರು ಶರ್ಟ್‌ಲೆಸ್ ಆಗಿ ನಟಿಯೊಬ್ಬರನ್ನು ತಬ್ಬಿಕೊಂಡು, ಕೈಯಲ್ಲಿ ಸಿಗರೇಟ್ ಸೇದುತ್ತಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಟೀಸರ್‌ನಲ್ಲಿ ಕಂಡುಬಂದಿದ್ದ ಕೆಲವು ಹಸಿಬಿಸಿ ದೃಶ್ಯಗಳು ಟೀಕೆಗೆ ಗುರಿಯಾಗಿದ್ದರೂ, ಈಗಿನ ಬೋಲ್ಡ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈಗಾಗಲೇ ಟೀಸರ್‌ನಲ್ಲಿ ಯಶ್ ಅವರ ಬೋಲ್ಡ್ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದವು. ಈಗ ಬಿಡುಗಡೆಯಾಗಲಿರುವ ಹಾಡಿನಲ್ಲೂ ಯಶ್ ಅಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಸಿನಿರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಕೊಡುತ್ತಿದ್ದು, ತಾಂತ್ರಿಕವಾಗಿಯೂ ಈ ಸಿನಿಮಾ ಭಾರಿ ಶ್ರೀಮಂತವಾಗಿರಲಿದೆ ಎನ್ನಲಾಗುತ್ತಿದೆ. ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿರುವ 'ಟಾಕ್ಸಿಕ್' ತಂಡವು, 'ತಬಾಹಿ' ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.
A Toxic world, a safe embrace.#Tabaahi
— KVN Productions (@KvnProductions) February 27, 2026
Song out on 2nd March.#ToxicTheMovie@TheNameIsYash#Nayanthara @advani_kiara@humasqureshi @rukminitweets #TaraSutaria #GeetuMohandas @VishalMMishra #RajeevRavi #UjwalKulkarni #TPAbid #MohanBKere #SandeepSadashiva… pic.twitter.com/2uWzCSbVUb
ಟೀಸರ್ ವಿವಾದ
ಜನವರಿಯಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ಯಶ್ ಅವರ ಪಾತ್ರವು ಕಾರಿನೊಳಗೆ ಮಹಿಳೆಯೊಬ್ಬರ ಜೊತೆ ಇರುವ ದೃಶ್ಯಗಳು ಮತ್ತು ಹಿಂಸಾಚಾರದ ತುಣುಕುಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಈ ಬಗ್ಗೆ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ಸಹ ನೀಡಿದ್ದರು. ಬೋಲ್ಡ್ ದೃಶ್ಯಗಳ ಕುರಿತಾದ ಟೀಕೆಗಳಿಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಇನ್‌ಸ್ಟಾಗ್ರಾಮ್ ಮೂಲಕ ತಿರುಗೇಟು ನೀಡಿದ್ದರು. "ಸ್ತ್ರೀ ಸುಖ ಮತ್ತು ಸಮ್ಮತಿಯ ಬಗ್ಗೆ ಜನರು ತಲೆಕೆಡಿಸಿಕೊಳ್ಳುತ್ತಿರುವಾಗ ನಾವು ಆರಾಮವಾಗಿದ್ದೇವೆ" ಎಂಬ ಅರ್ಥದ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದರು.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಇದು ಯಶ್ ಅವರ ಕೆಜಿಎಫ್ ನಂತರದ ಅತಿ ದೊಡ್ಡ ರಿಲೀಸ್ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications