ರಾವಣನ ಗೆಟಪ್‌ನಲ್ಲಿ ಯಶ್‌ ಹೇಗಿರ್ತಾರೆ? ವೈರಲ್ ಆಯ್ತು ನೋಡಿ ಲಂಕಾಧಿಪತಿಯ ರಗಡ್‌ ಫೋಟೋ

ರಾಕಿಂಗ್ ಸ್ಟಾರ್ ಯಶ್ ನಟನೆಯ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ಬಿಗ್ ಬಜೆಟ್ ಸಿನಿಮಾ 'ರಾಮಾಯಣ' ಸದ್ಯ ಹಲವು ಕಾರಣಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 'ಕೆಜಿಎಫ್' ಚಿತ್ರಗಳ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿರುವ ಯಶ್, ಈ ಮಹಾಕಾವ್ಯ ಆಧಾರಿತ ಚಿತ್ರದಲ್ಲಿ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ನೆಗೆಟಿವ್ ಶೇಡ್‌ನಲ್ಲಿ ರಾಕಿಂಗ್ ಸ್ಟಾರ್

ಯಶ್ ಇದುವರೆಗೆ ನಾಯಕನಾಗಿ ಅಬ್ಬರಿಸಿದ್ದನ್ನು ನೋಡಿದ್ದ ಅಭಿಮಾನಿಗಳಿಗೆ, ಈಗ ಅವರು ರಾವಣನಾಗಿ ನೆಗೆಟಿವ್ ಶೇಡ್‌ನಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ. ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ರಾಮನಾಗಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರ ಜೊತೆಗೆ ಯಶ್ ಲಂಕಾಧೀಶನಾಗಿ ಅಖಾಡಕ್ಕಿಳಿಯುತ್ತಿರುವುದರಿಂದ ಚಿತ್ರದ ಹೈಲೈಟ್‌ ಆಗಿದೆ.

Yash

ಸಸ್ಪೆನ್ಸ್ ಆಗಿ ಉಳಿದಿದ್ದ ಲುಕ್

ಯಶ್ ರಾವಣನ ಗೆಟಪ್‌ನಲ್ಲಿ ಹೇಗಿರುತ್ತಾರೆ ಎಂಬುದು ಸದ್ಯಕ್ಕೆ ಚಿತ್ರರಂಗದ ಅತಿ ದೊಡ್ಡ ರಹಸ್ಯವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ಚಿತ್ರತಂಡ ಈ ಲುಕ್ ಅನ್ನು ಅತ್ಯಂತ ಗೌಪ್ಯವಾಗಿಟ್ಟಿದ್ದು, ಅಧಿಕೃತವಾಗಿ ಯಾವುದೇ ಪೋಸ್ಟರ್ ಅಥವಾ ಚಿತ್ರವನ್ನು ಬಿಡುಗಡೆ ಮಾಡಿಲ್ಲ. ಇದು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚು ಮಾಡಿತ್ತು.

ಸಾನ್ವಿ ಸುದೀಪ್ ಕೈಹಿಡಿಯುವ ಹುಡುಗ ಹೀಗಿರಬೇಕಂತೆ; ಅಳಿಯನಿಗೆ ಪ್ರಿಯಾ ಸುದೀಪ್ ಇಟ್ಟಿದ್ದಾರೆ ಈ ಡಿಮ್ಯಾಂಡ್
ಸಾನ್ವಿ ಸುದೀಪ್ ಕೈಹಿಡಿಯುವ ಹುಡುಗ ಹೀಗಿರಬೇಕಂತೆ; ಅಳಿಯನಿಗೆ ಪ್ರಿಯಾ ಸುದೀಪ್ ಇಟ್ಟಿದ್ದಾರೆ ಈ ಡಿಮ್ಯಾಂಡ್

ಜಾಲತಾಣಗಳಲ್ಲಿ ಫೋಟೋ ವೈರಲ್

ಚಿತ್ರತಂಡ ಸಸ್ಪೆನ್ಸ್ ಕಾಯ್ದುಕೊಂಡಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಯಶ್ ಅವರ ರಾವಣನ ಲುಕ್ ಎಂದು ಹೇಳಲಾದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾವಣನ ಉಗ್ರ ರೂಪ ಹಾಗೂ ರಾಯಲ್ ಗೆಟಪ್‌ನಲ್ಲಿರುವ ಈ ಫೋಟೋ ನೋಡಿದ ನೆಟ್ಟಿಗರು 'ವಾವ್' ಎನ್ನುತ್ತಿದ್ದಾರೆ.

Yash

ಆದರೆ, ಈ ಫೋಟೋ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕೆಲವು ಅಭಿಮಾನಿಗಳು ಇದು ಶೂಟಿಂಗ್ ಸೆಟ್‌ನಿಂದ ಲೀಕ್ ಆಗಿರುವ ಅಸಲಿ ಚಿತ್ರ ಇರಬಹುದು ಎಂದು ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಕೃತಕ ಬುದ್ಧಿಮತ್ತೆ (Artificial Intelligence-AI) ಬಳಸಿ ಅಭಿಮಾನಿಗಳೇ ಸೃಷ್ಟಿಸಿರುವ ಕಾಲ್ಪನಿಕ ಫೋಟೋ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ಫೋಟೋ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದರೂ, 'ರಾಮಾಯಣ' ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಮೌನವಾಗಿರುವ ಚಿತ್ರತಂಡದ ಈ ನಡೆ, ಫೋಟೋ ಅಸಲಿಯೋ ಅಥವಾ ನಕಲಿಯೋ ಎಂಬ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಿನಲ್ಲಿ ಆ ಫೋಟೋ ಏನೇ ಇರಲಿ, ಯಶ್ ಅವರನ್ನು ರಾವಣನ ಅವತಾರದಲ್ಲಿ ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+