Bigg Boss Kannada: ಬಿಗ್ ಬಾಸ್‌ಗೆ ಜಗದೀಶ್ ವಾಪಸ್! ಕಿಚ್ಚ ಸುದೀಪ್ ಹೇಳಿದ್ದೇನು
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಜಗಳ ಆಡಿಕೊಂಡು ಹೊರ ಬಂದಿರುವ ಲಾಯರ್ ಜಗದೀಶ್ ಇಂದು (ಭಾನುವಾರ) ಸುದ್ದಿಗೋಷ್ಠಿ ನಡೆಸಲಿದ್ದು, ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಜಗದೀಶ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಂದು ಒಬ್ಬರಿಗೊಂದು ಮಾಡಲಾಗಿದೆ ಎನ್ನುವ ಆರೋಪ ಮಾಡಲಾಗಿದೆ.
ಜಗದೀಶ್ ವಾಪಸ್ ಬಿಗ್‌ಬಾಸ್‌ಗೆ ಬರಬೇಕು ಎನ್ನುವ ಒತ್ತಾಯ ಕೂಡ ಹೆಚ್ಚಾಗಿದೆ. ಜಗದೀಶ್ ಮಾತನಾಡಿದ್ದು ತಪ್ಪೇ ಇರಬಹುದು, ಆದರೆ ಉಳಿದ ಅಭ್ಯರ್ಥಿಗಳು ಕೂಡ ಕೆಟ್ಟದಾಗಿ ಮಾತನಾಡಿದ್ದಾರೆ. ಜಗದೀಶ್ ಮತ್ತು ರಂಜಿತ್‌ರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದ್ದು, ಹೆಣ್ಣು ಮಕ್ಕಳು ಬಾಯಿಗೆ ಬಂದಂತೆ ಮಾತನಾಡಿದರು ಅವರನ್ನು ಮನೆಯಲ್ಲಿ ಇಟ್ಟುಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಚೈತ್ರಾ ಕುಂದಾಪುರ ಜಗದೀಶ್ ಅವರಿಗೆ ಒಬ್ಬ ಅಪ್ಪನಿಗೆ ಹುಟ್ಟಿದರೆ ಎನ್ನುವ ಪದ ಬಳಕೆ ಮಾಡಿದ್ದರೂ ಅವರನ್ನು ಶೋನಲ್ಲಿ ಉಳಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಾನಸ ಕೂಡ ಜಗದೀಶ್‌ರನ್ನು ಹೊಡೆಯಲು ಕೈ ಎತ್ತಿದ್ದರು ಆದರೂ ಅವರನ್ನು ಮನೆಯಲ್ಲಿ ಇರುವುದೇಕೆ ಎಂದು ಕೇಳುತ್ತಿದ್ದಾರೆ.
ಕಿಚ್ಚ ಸುದೀಪ್ ಕ್ಲಾಸ್
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಜಗದೀಶ್ ಅವರನ್ನು ಸಮರ್ಥನೆ ಮಾಡಿಕೊಳ್ಳದೇ ಇದ್ದರೂ ಉಳಿದ ಅಭ್ಯರ್ಥಿಗಳು ಮಾಡಿದ ತಪ್ಪನ್ನು ಎತ್ತಿ ಹಿಡಿದರು. ಸುದೀಪ್ ನಡೆದುಕೊಂಡ ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಗದೀಶ್ ವಾಪಸ್ ಬರ್ತಾರ?
ಲಾಯರ್ ಜಗದೀಶ್ ಇಲ್ಲದೆ ಬಿಗ್ ಬಾಸ್ ಕಾರ್ಯಕ್ರಮವೇ ಸಪ್ಪೆ, ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕು ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. 'ಜಗದೀಶ್ ಅವರನ್ನು ಒಳ್ಳೆಯವರು ಎಂದು ಅಥವಾ ಅವರು ತಪ್ಪೇ ಮಾಡಿಲ್ಲ ಎಂದು ಹೇಳಲು ಬಂದಿಲ್ಲ. ಮಾತಿನ ಮೇಲೆ ನಿಗಾ ಇಲ್ಲದ ಕಾರಣ ಅವರು ಕಾರ್ಯಕ್ರಮದಿಂದ ಹೊರ ಹೋಗಿದ್ದಾರೆ. ಇದನ್ನೆಲ್ಲಾ ಬಿಗ್ ಬಾಸ್ ಸಹಿಸಲ್ಲ, ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದುಹೋದ ಅಧ್ಯಾಯ ಎಂದು ಹೇಳಿದರು.
ಈ ಮೂಲಕ ಜಗದೀಶ್ ಬಿಗ್ ಬಾಸ್ ಮನೆಗೆ ವಾಪಸ್ ಬರುವ ಸಾಧ್ಯತೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳಿಗೆ ಬೇಸರ ತರಿಸಿದೆ. ಜಗದೀಶ್ ಇಲ್ಲ ಎಂದರೆ ಸೋಮವಾರದಿಂದ ಬಿಗ್ ಬಾಸ್ ಕಾರ್ಯಕ್ರಮ ನೋಡುವುದಿಲ್ಲ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications