Prem-Salman Khan: ಸಲ್ಮಾನ್ ಖಾನ್ ಜೊತೆ ಜೋಗಿ ಪ್ರೇಮ್ ಸಿನಿಮಾ!
ಬಾಲಿವುಡ್‌ನ ಮೆಗಾಸ್ಟಾರ್ ಸಲ್ಮಾನ್ ಖಾನ್‌ಗೆ ಸ್ಯಾಂಡಲ್‌ವುಡ್‌ನ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಭಾರಿ ಸದ್ದು ಮಾಡುತ್ತಿದೆ. ಇದರ ಬಗ್ಗೆ ಪ್ರೇಮ್ ಆಗಲಿ, ಸಲ್ಮಾನ್ ಖಾನ್ ಆಗಲಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ, ಪ್ರೇಮ್ ಸಲ್ಮಾನ್‌ಗಾಗಿ ಕತೆ ರೆಡಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕರಿಯ, ಎಕ್ಸ್‌ಕ್ಯೂಸ್‌ಮಿ, ಜೋಗಿಯಂತಹ ಅತ್ಯುತ್ತಮ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕ ಪ್ರೇಮ್ ಆ ಬಳಿಕ ರಾಜ್, ಜೋಗಯ್ಯ, ವಿಲನ್, ಏಕ್‌ಲವ್‌ಯಾದಂತಹ ಸಿನಿಮಾಗಳನ್ನು ಕೊಟ್ಟರು ಅಂದುಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಸದ್ಯ ಧ್ರುವ ಸರ್ಜಾ ಅಭಿಯನಯದ ಕೆಡಿ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಅದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಚಂದನವನದಲ್ಲಿ ಸದ್ದು ಮಾಡಿತ್ತು.

ಕರಿಯ ನಂತರ ಇಬ್ಬರೂ ಒಂದಾಗುತ್ತಿರುವುದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಈ ಬೆನ್ನಲ್ಲೇ ಪ್ರೇಮ್ ಬಾಲಿವುಡ್‌ನಲ್ಲೂ ಕಮಾಲ್ ಮಾಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಸಲ್ಮಾನ್ ಖಾನ್‌ಗೆ ಬೇಕಿದೆ ಯಶಸ್ಸು
ಇನ್ನು ಸಲ್ಮಾನ್ ಖಾನ್ ಕೂಡ ಬಾಲಿವುಡ್‌ನಲ್ಲಿ ಇತ್ತೀಚೆಗೆ ದೊಡ್ಡ ಯಶಸ್ಸನ್ನು ಕಂಡಿಲ್ಲ. ರಾಧೆ ಒಟಿಟಿಯಲ್ಲಿ ತೆರೆ ಕಂಡರೆ, ಟೈಗರ್ 3 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಶಾರೂಖ್ ಖಾನ್ ದೊಡ್ಡ ಮಟ್ಟದ ಯಶಸ್ಸಿನ ಹುಡುಕಾಟದಲ್ಲಿದ್ದಾಗ ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ಜವಾನ್ ಮೂಲಕ ದೊಡ್ಡ ಹಿಟ್ ಕೊಟ್ಟರು.
LATEST BUZZ
— Hemanth Shaiva (@HemanthShaiva) February 4, 2024
Prem❣️s to Direct Salman Khan for an Action Packed Film 😮#SalmanKhanpic.twitter.com/3rnYwyxg9X
ಜವಾನ್‌ನಲ್ಲಿ ಶಾರೂಖ್ ಖಾನ್ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡಿತ್ತು. ಸಲ್ಮಾನ್ ಖಾನ್‌ಗೆ ಕೂಡ ಆಕ್ಷನ್ ಮಸಾಲ ಸಿನಿಮಾ ಮಾಡಲು ಪ್ರೇಮ್ ಸಜ್ಜಾಗಿದ್ದಾರೆ ಎನ್ನಲಾಗಿದ್ದು, ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಬಾಲಿವುಡ್‌ನ ನಟ-ನಿರ್ದೇಶಕ ಸಾಜಿದ್ ನಾಡಿಯಾವಾಲ ಜೊತೆ ಈಗಾಗಲೇ ಪ್ರೇಮ್ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ನಾಡಿಯಾವಾಲ ಈ ಚಿತ್ರಕ್ಕೆ ಬಂಡವಾಳ ಹೂಡುವ ಸಾಧ್ಯತೆ ಇದೆ.
ವಿಭಿನ್ನ ಚಿತ್ರಕಥೆಯ ಮೂಲಕವೇ ಗಮನ ಸೆಳೆಯುವ ಪ್ರೇಮ್, ಬಾಲಿವುಡ್‌ನಲ್ಲಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕಳೆದ ತಿಂಗಳು ಪ್ರೇಮ್ ತೆಲುಗು ನಟ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದರು, ಒಂದು ವೇಳೆ ಸಲ್ಮಾನ್ ಜೊತೆಗಿನ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಾರಾ? ಅಥವಾ ದರ್ಶನ್ ಜೊತೆಗಿನ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಾರಾ ಎನ್ನುವ ಹಲವು ಪ್ರಶ್ನೆಗಳು ಕಾಡುತ್ತಿವೆ.












Click it and Unblock the Notifications