ಎರಡನೇ ಮದುವೆಗೆ ವೈಷ್ಣವ್ ಒಪ್ಪಿಕೊಂಡಿದ್ಯಾಕೆ?
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಆಗುತ್ತಿದ್ದು, ಕಥೆ ರೋಚಕ್ಕೆ ಹಂತಕ್ಕೆ ತಲುಪಿದೆ. ಕಥಾ ನಾಯಕ ವೈಷ್ಣವ್‌ಗೆ ಎರಡನೇ ಮದುವೆ ಮಾಡಿಸಲು ತಾಯಿ ಕಾವೇರಿ ಸಜ್ಜಾಗುತ್ತಿದ್ದಾಳೆ. ಮಗನ ಮೇಲಿನ ಅತಿ ಮೋಹಕ್ಕೆ ವೈಷ್ಣವ್ ಮೊದಲು ಪ್ರೀತಿಸಿದ ಕೀರ್ತಿಯನ್ನು ಕಾವೇರಿಯೇ ಮೋಸದಿಂದ ದೂರ ಮಾಡುತ್ತಾಳೆ. ಬಳಿಕ ತಾನೇ ಆರಿಸಿ ತಂದ ಸೊಸೆ ಲಕ್ಷ್ಮಿ ಜೊತೆ ವೈಷ್ಣವ್‌ಗೆ ಮದುವೆ ಮಾಡಿಸುತ್ತಾಳೆ.
ದಿನ ಕಳೆದಂತೆ ಲಕ್ಷ್ಮಿ ಕೂಡ ಕಾವೇರಿ ವಿರುದ್ಧ ನಿಲ್ಲುತ್ತಾಳೆ. ಹೀಗಾಗಿ ಲಕ್ಷ್ಮಿಯಿಂದಲೂ ವೈಷ್ಣವ್‌ನನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿರುವ ಕಾವೇರಿ ಈಗ ಮಗನಿಗೆ ಎರಡನೇ ಮದುವೆ ಮಾಡಿಸಲು ಸಜ್ಜಾಗುತ್ತಿದ್ದಾಳೆ. ತಮ್ಮ ಧಾರಾವಾಹಿಯ ಈ ಕಥೆಯ ಬಗ್ಗೆ ವೈಷ್ಣವ್ ಪಾತ್ರಧಾರಿ ಶಮಂತ್ ಗೌಡ ಮಾತನಾಡಿದ್ದು, ವೈಷ್ಣವ್ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ವಿವರಿಸಿದ್ದಾರೆ.

ವಿಶ್ವವಾಣಿ ಟಿವಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ವೈಷ್ಣವ್ ಸದ್ಯಕ್ಕೆ ಅಸಾಹಾಯಕ ಸ್ಥಿತಿಯಲ್ಲಿದ್ದಾನೆ. ಈ ಕಡೆ ನೋಡಿದರೆ ಇವರಿಂದಲೂ ತೊಂದರೆ ಆಗಿರುತ್ತದೆ. ಆ ಕಡೆ ನೋಡಿದರೆ ಇವರನ್ನೂ ನಂಬಲು ಆಗುವುದಿಲ್ಲ. ಮತ್ತೊಂದು ಕಡೆ ನೋಡಿದರೆ ಅವರು ಹೇಳಿದ್ದನ್ನು ನಂಬಲು ಆಗುವುದೇ ಇಲ್ಲ. ಮೂರು ಬೇರೆ ಬೇರೆ ರೀತಿಯ ಸಂದರ್ಭಗಳಿವೆ' ಎಂದಿದ್ದಾರೆ.
'ಒಂದು ಕಡೆ ಕೀರ್ತಿಗೆ ನಾನೇನು ಮಾಡಲು ಆಗುವುದಿಲ್ಲ. ಇನ್ನೊಂದು ಕಡೆ ಲಕ್ಷ್ಮಿ ಇಷ್ಟು ದಿನ ಎಲ್ಲಾ ಮುಚ್ಚಿಟ್ಟಿದ್ದಾರೆ ಎನ್ನುವ ಕೋಪ. ಮತ್ತೊಂದು ಕಡೆ ಅಮ್ಮನ ಪ್ರೀತಿ. ಸದ್ಯ ವೈಷ್ಣವ್ ಪರಿಸ್ಥಿತಿ ಫುಟ್‌ಬಾಲ್ ತರ. ಎಲ್ಲರೂ ಒಂದೊಂದು ಕಡೆಯಿಂದ ಒದೆಯುತ್ತಿದ್ದಾರೆ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡ ಹಾಗಿದೆ ವೈಷ್ಣವ್ ಪರಿಸ್ಥಿತಿ' ಎಂದರು.

'ಕಾವೇರಿಯ ಪ್ರೀತಿ ಮಗ ವೈಷ್ಣವ್‌ಗೆ ಕೆಲವೊಂದು ಸಾರಿ ಅತಿ ಅನಿಸುತ್ತದೆ. ಮಗನ ಮೇಲಿನ ಅತೀ ಪ್ರೀತಿ ಕಾರಣದಿಂದ ಇಷ್ಟೆಲ್ಲಾ ತೊಂದರೆಯಾಗಿದೆ. ಜೈಲಿಗೆಲ್ಲಾ ಹೋಗಿ ಬಂದಿದ್ದಾರೆ. ಮಗನ ಹೆಂಡತಿಗೆ ತೊಂದರೆ ಆಗಿದೆ. ಆದರೆ ವೈಷ್ಣವ್‌ಗೆ ಅದ್ಯಾವುದೂ ಗೊತ್ತಿಲ್ಲ. ವೈಷ್ಣವ್‌ಗೆ ಹೇಗೆ ಆಗಿದೆ ಅಂದರೆ ಮೊದಲು ಕೀರ್ತಿ ಪ್ರೀತಿ ಮಾಡಿ, ಮದುವೆಯಾಗುತ್ತೇನೆ ಅಂತಾ ಹೇಳಿ ಕೈಕೊಟ್ಟಳು. ಮದುವೆ ಆದ ಮೇಲೆ ಲಕ್ಷ್ಮಿನೂ ಎಷ್ಟೋ ವಿಷಯ ಹೇಳದೇ ಮುಚ್ಚಿಟ್ಟರು. ಇದರಿಂದ ಅವರಿಗೆ ಕೊಟ್ಟ ಪ್ರಾಮುಖ್ಯತೆ ಜೀರೋ ಆಗಿ ಹೋಗಿದೆ. ಹೀಗಾಗಿ ವೈಷ್ಣವ್ ಮುಂದೆ ಸಾಗುತ್ತಿದ್ದಾನೆ' ಎಂದು ವೈಷ್ಣವ್ ಪಾತ್ರಧಾರಿ ಶಮಂತ್ ಗೌಡ ವೈಷ್ಣವ್ ಎರಡನೇ ಮದುವೆಗೆ ಒಪ್ಪಿಗೊಂಡ ಕಾರಣ ತಿಳಿಸಿದ್ದಾರೆ.












Click it and Unblock the Notifications