ಈ ಲೋ ಕ್ಲಾಸ್‌ಗಳಿಗೆ ಸರಿಯಾದ ಶಿಕ್ಷೆ ಆಗಬೇಕು: ಚೈತ್ರಾ ಕುಂದಾಪುರ ಗರಂ ಆಗಿದ್ದು ಯಾರ ಮೇಲೆ?

ಹಿಂದೂ ಕಾರ್ಯಕರ್ತೆ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಗ್‌ಬಾಸ್‌ ಬಳಿಕ ಅವರು ಕೆಲ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಈಗ ತಮ್ಮ ಪತಿಯೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಫೋಟೋಗಳನ್ನು ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಚೈತ್ರಾ, ದಿಢೀರನೆ ಗರಂ ಆಗಿದ್ದಾರೆ. ಈ ಬಗ್ಗೆ ಇನ್‌ಸ್ಟಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಚೈತ್ರಾ ಅವರ ಕೋಪಕ್ಕೆ ಕಾರಣವಾಗಿದ್ದು ಏನು ಗೊತ್ತಾ?

ಚೈತ್ರಾ ಕುಂದಾಪುರ ಅವರು ಹಿಂದೂ ಕಾರ್ಯಕರ್ತೆಯಾಗಿ ಹಲವು ವೇದಿಕೆಗಳಲ್ಲಿ ತಮ್ಮ ಅಬ್ಬರದ ಭಾಷಣದ ಮೂಲಕ ಗಮನ ಸೆಳೆದಿದ್ದರು. ನಂತರ ಇವರಿಗೆ ಬಿಗ್ ಬಾಸ್ ಕನ್ನಡ ಸೀಸನ್-11 ಸ್ಪರ್ಧಿಯಾಗುವ ಅವಕಾಶವೂ ಒದಗಿ ಬಂದಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಅವರು ಫೈರ್‌ಬ್ರ್ಯಾಂಡ್‌ ಎಂದೇ ಕರೆಸಿಕೊಂಡಿದ್ದರು. ಅಲ್ಲಿಂದ ಹೊರಬಂದ ನಂತರ ಅವರು ತಮ್ಮಿಷ್ಟದಂತೆ ಮದುವೆಯೂ ಆಗಿದ್ದರು. ಹೀಗಿರುವಾಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿರುವ ವಿಚಾರ ಕೇಳಿ ಚೈತ್ರಾ ಕೆರಳಿ ಕೆಂಡವಾಗಿದ್ದಾರೆ.

Why Bigg Boss Kannada Fame Chaithra Kundapura Angry

ಈ ಸೋಷಿಯಲ್‌ ಮೀಡಿಯಾ ಜಗತ್ತಿನಲ್ಲಿ ಬರುವ ಎಷ್ಟೋ ವಿಚಾರಗಳು ನಿಜ ಆಗಿರುವುದಿಲ್ಲ. ಆದರೂ ಜನ ಅಲ್ಲಿ ಬರುವುದನ್ನೆಲ್ಲ ನಿಜ ಎಂದೇ ನಂಬುವವರೂ ಇದ್ದಾರೆ. ಇದೇ ರೀತಿ ಚೈತ್ರಾ ಅವರ ವಿಚಾರದಲ್ಲೂ ಒಂದು ಎಡವಟ್ಟಾಗಿದೆ. ಚೈತ್ರಾ ಅವರ ಬಗ್ಗೆ ಸುಳ್ಳುಸುದ್ದಿಯೊಂದನ್ನು ಹಬ್ಬಿಸಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ಚೈತ್ರಾ ಸಿಹಿಸುದ್ದಿ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದು, ಇದರ ಸ್ಕ್ರೀನ್‌ಶಾಟ್‌ ಹಂಚಿಕೊಂಡು ಚೈತ್ರಾ ಅವರು ಗುಡುಗಿದ್ದಾರೆ. ಈ ಸುದ್ದಿ ಫೇಕ್‌ ಎಂದೂ ಚೈತ್ರಾ ಕ್ಲಾರಿಟಿ ಕೊಟ್ಟಿದ್ದಾರೆ.

ಕ್ಲಿಕ್ ಬೈಟ್‌ಗಾಗಿ ಸುಳ್ಳು ಸುದ್ದಿ!

"ಕ್ಲಿಕ್ ಬೈಟ್‌ನ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್‌ನ್ಯೂಸ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕು ಎಂದು ಚೈತ್ರಾ ಒತ್ತಾಯಿಸಿದ್ದಾರೆ. ಇವರ ಲಾಲಸೆಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇವರು ಹರಡಿಸುವ ಸುದ್ದಿಗಳು, ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎನ್ನುವ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ. ಇತ್ತೀಚೆಗೆ ಇಂತಹ ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್‌ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಕೂಡ ಮುಂದಾಗಿತ್ತು. ವ್ಯವಸ್ಥೆ ಕೂಡ ಅದೇ ದಿಕ್ಕಿನಲ್ಲಿ ಯೋಚಿಸಬೇಕು" ಎಂದು ಬರೆದುಕೊಂಡಿದ್ದಾರೆ.

Why Bigg Boss Kannada Fame Chaithra Kundapura Angry

ಕಳೆದ ಮೇ 9ರಂದು ಚೈತ್ರಾ ತನ್ನ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ಕುಂದಾಪುರದಲ್ಲಿ ಮದುವೆ ಆಗಿದ್ದರು. ಇವರು ಹಿರಿಯಡ್ಕ ಮೂಲದವರು, ಆನಿಮೇಷನ್‌ ಓದಿರುವ ಶ್ರೀಕಾಂತ್ ಕಶ್ಯಪ್‌ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದಾರೆ. ಬಿಗ್‌ಬಾಸ್‌ಗೆ ಹೋಗುವ ಮುನ್ನ ಉದ್ಯಮಿಗೆ ವಂಚನೆ ಮಾಡಿದ್ದ ಕೇಸ್‌ನಲ್ಲಿ ಚೈತ್ರಾ ಬಂಧನಕ್ಕೊಳಗಾಗಿದ್ದರು. ಚುನಾವಣಾ ಟಿಕೆಟ್ ಕೊಡಿಸುವುದಾಗಿ ಹಣ ಪಡೆದ ಆರೋಪವೂ ಚೈತ್ರಾ ಅವರ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+