Bharjari Bachelors Finale: ಭರ್ಜರಿ ಬ್ಯಾಚುಲರ್ಸ್ ಕಪ್ ಗೆದ್ದಿದ್ದು ಯಾವ ಜೋಡಿ? ಟಾಪ್ 2 ಸ್ಪರ್ಧಿಗಳು ಯಾರು?
ಕನ್ನಡದ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್-2 (Bharjari Bachelors Season 2) ಕೂಡ ಒಂದು. ಸದ್ಯ ಫಿನಾಲೆ ಮುಗಿಸಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅಭಿಮಾನಿ ಬಳಗವೇ ಇದೆ. ಈ ಸೀಸನ್‌ನಲ್ಲಂತೂ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ವಿಶೇಷವಾಗಿದ್ದರು. ಹಾಗಾಗಿ ಈ ಸೀಸನ್ ಗೆಲ್ಲೋದ್ಯಾರು? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಫಿನಾಲೆ ಮುಗಿದಿದ್ದು, ಭಾನುವಾರ ಅಂತಿಮವಾಗಿ ವಿಜೇತರು ಯಾರು ಎಂಬುದು ಅಧಿಕೃತವಾಗಿ ಹೊರಬೀಳಲಿದೆ. ಆದರೆ ಆಗಲೇ ವಿನ್ನರ್ ಯಾರು? ಟಾಪ್ ಟು ಸ್ಪರ್ಧಿಗಳು ಯಾರು ಎನ್ನುವ ಮಾಹಿತಿ ಲೀಕ್ ಆಗಿದೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ ಕುಟುಂಬ ಹಾಗೂ ವ್ಯಕ್ತಿತ್ವ ಆಧಾರಿತ ವಿಭಿನ್ನ ಸವಾಲುಗಳೊಂದಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಸೀಸನ್‌ನ ಫೈನಲ್ ಭಾನುವಾರ 27 ಜುಲೈ 2025ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಶೋನಲ್ಲಿ ಬ್ಯಾಚುಲರ್ಸ್ ಈಗಾಗಲೇ ಹವಾ ಕ್ರಿಯೇಟ್ ಮಾಡಿದ್ದು, ಫೈನಲ್‌ನಲ್ಲಿ ಅಂತಿಮ ಸುತ್ತಿನಲ್ಲಿ ಕಾದಾಡಿದ ಸ್ಪರ್ಧಿಗಳು ಯಾರು ಎಂಬುದು ಗೊತ್ತಾಗಿದೆ. ಈ ಇಬ್ಬರಲ್ಲೇ ಒಂದು ಜೋಡಿ ಕಪ್ ಗೆದ್ದಿದೆ ಎಂದೂ ಹೇಳಲಾಗುತ್ತಿದೆ.

ಈ ಸೀಸನ್‌ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಪ್ರಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಸೇರಿ ಹಲವರು ರೌಂಡ್‌ಗಳು ಗಮನ ಸೆಳೆದಿದ್ದವು. ಸ್ಪರ್ಧಿಗಳ ಬಗ್ಗೆ ಗೊತ್ತೇ ಇರದ ಎಷ್ಟೋ ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ರಿವೀಲ್ ಮಾಡಲಾಗಿದೆ. ಹಾಗಾಗಿ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ರಿಯಾಲಿಟಿ ಶೋನಲ್ಲಿ 10 ಜೋಡಿಗಳು ವಿಭಿನ್ನ ಸವಾಲುಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದು, ಅಂತಿಮವಾಗಿ ಆ ಒಂದು ಜೋಡಿಗೆ ಕಿರೀಟ ಮುಡಿಗೇರಲಿದೆ. ಈ ಶೋನಲ್ಲಿ "ಬ್ಯಾಚುಲರ್ಸ್" ಮತ್ತು "ಏಂಜಲ್ಸ್" ತಂಡಗಳ ನಡುವಿನ ಸ್ಪರ್ಧೆ ಪ್ರೇಕ್ಷಕರ ಮನಸ್ಸು ಸೆಳೆದಿದ್ದು, ಫೈನಲ್ ಎಪಿಸೋಡ್ ಮೇಲೆ ಎಲ್ಲರ ನಿರೀಕ್ಷೆ ಇದೆ.
ಗೆದ್ದಿದ್ದು ಇದೇ ಜೋಡಿ?
ಫೈನಲ್ ರೌಂಡ್‌ನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್-ರಮೋಲ, ಡ್ರೋನ್ ಪ್ರತಾಪ್-ಗಗನಾ, ಹುಲಿ ಕಾರ್ತಿಕ್-ಧನ್ಯ, ಗಾಬ್ರಿ-ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್-ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಸೂರ್ಯ-ಅಭಿಜ್ಞಾ ಜೋಡಿ ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ ಮೂಲಗಳ ಪ್ರಕಾರ ಸುನೀಲ್ ಹಾಗೂ ಅಮೃತಾ ವಿನ್ನರ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಇನ್ನು ರಕ್ಷಕ್ ಬುಲೆಟ್-ರಮೋಲಾ ರನ್ನರ್ ಅಪ್ ಎಂದು ಭವಿಷ್ಯ ನುಡಿದಿದ್ದಾರೆ.
ಈ ಎರಡೂ ಜೋಡಿಗಳು ಆರಂಭದಿಂದಲೂ ಹೆಚ್ಚು ಕ್ರೇಜ್ ಹುಟ್ಟಿಸಿದ್ದರಿಂದ ಈ ಇಬ್ಬರಲ್ಲೇ ಒಂದು ಜೋಡಿ ವಿನ್ ಆಗಿದೆ ಎಂದು ನಿರೀಕ್ಷಿಸಿದ್ದಾರೆ. ಆದರೆ ಅಧಿಕೃತವಾಗಿ ಈ ಸೀಸನ್ ವಿನ್ನರ್ ಯಾರು ಎನ್ನುವುದು ಭಾನುವಾರ ತಿಳಿಯಲಿದೆ. ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಫೈನಲ್ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ 27 ಜುಲೈ 2025ರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.












Click it and Unblock the Notifications