ಫೋಟೋದಲ್ಲಿ ಎಸ್‌.ಎಂ ಕೃಷ್ಣ ಹಾಗೂ ಡಾ ರಾಜ್‌ಕುಮಾರ್ ಮಧ್ಯೆ ನಿಂತ ಆ ನಟಿ ಯಾರು?

ವರನಟ ಡಾ ರಾಜ್‌ಕುಮಾರ್ ಅವರ 96ನೇ ಹುಟ್ಟುಹಬ್ಬವನ್ನು ಏಪ್ರಿಲ್ 24ರಂದು ಅದ್ಧೂರಿಯಾಗಿ ಆಚರಿಸಲಾಯಿತು. ಕರ್ನಾಟಕದಾದ್ಯಂತ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಈ ದಿನ ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅವರ ನೆನಪು ಮಾತ್ರ ಮಾಸಿಲ್ಲ. ಅಂದಹಾಗೆ ನಟಿಯೊಬ್ಬರು ಡಾ ರಾಜ್‌ಕುಮಾರ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಆ ಫೋಟೋದಲ್ಲಿ ಇರುವ ನಟಿ ಯಾರು? ಆಗ ಆಕೆಗೆ ಇದ್ದ ವಯಸ್ಸು ಎಷ್ಟು? ಇದೆಲ್ಲದರ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಡಾ ರಾಜ್‌ಕುಮಾರ್ ಅವರು ಮಾಡಿದ ಸಿನಿಮಾ, ಹಾಡು, ಪಾತ್ರ, ಕನ್ನಡಕ್ಕೆ ಅವರು ನೀಡಿದ ಕೊಡುಗೆ, ತೋರಿದ ಪ್ರೀತಿ ಅಪಾರ. ಅವರನ್ನು ನಾವು ಪದಗಳಲ್ಲಿ ಬಣ್ಣಿಸಲು ಪದಗಳು ಸಾಲುವುದಿಲ್ಲ. ಇಂತಹ ಪ್ರಸಿದ್ಧ ವ್ಯಕ್ತಿಯೊಂದಿಗೆ ನಟಿಸುವ, ಕೆಲಸ ಮಾಡುವ ಅವಕಾಶ ಸಿಕ್ಕವರೇ ಧನ್ಯರು. ಆದರೆ ಅದೆಷ್ಟೋ ಜನ ಈ ಅವಕಾಶ ಸಿಗದೆ ಬೇಸರ ಮಾಡಿಕೊಂಡಿರುವುದೂ ಇದೆ.

Who is the actress standing between SM Krishna and Dr Rajkumar in the photo

ಈ ದಿನ ನಟಿಯೊಬ್ಬರು ತಮಗೆ ಡಾ ರಾಜುಕುಮಾರ್ ಅವರ ಜೊತೆಗೆ ನಿಲ್ಲುವ ಅವಕಾಶ ಸಿಕ್ಕಿದ್ದರ ಬಗ್ಗೆ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಹೌದು ನಟಿ ಮೇಘನಾ ಗಾಂವ್ಕರ್ ಅವರು ಡಾ ರಾಜ್‌ಕುಮಾರ್ ಅವರೊಂದಿಗೆ ನಟಿಸಿಲ್ಲ. ಅವರನ್ನು ಚಿಕ್ಕವರಿದ್ದಾಗ ಒಮ್ಮೆ ನೋಡಿದ್ದು ಬಿಟ್ಟರೆ ಮತ್ತೆಂದು ಅವರು ಡಾ ರಾಜುಕುಮಾರ್ ಅವರನ್ನು ನೋಡಿರಲಿಲ್ಲ. ಆದರೆ ಒಮ್ಮೆ ಅವರೊಂದಿಗೆ ವೇದಿಕೆ ಮೇಲೆ ನಿಲ್ಲುವ ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಮೇಘನಾ ಗಾಂವ್ಕರ್ ಗೆ ರಾಜ್‌ಕುಮಾರ್ ಅವರ ಜೊತೆಗೆ ನಿಲ್ಲುವ ಅವಕಾಶ ಸಿಕ್ಕಿದ್ದು ಹೇಗೆ?

ನಟಿ ಮೇಘನಾ ಗಾಂವ್ಕರ್ ಡಾ ರಾಜ್‌ಕುಮಾರ್ ಅವರನ್ನು ನೋಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಮೇಘನಾ ಗಾಂವ್ಕರ್ ಅವರು ಡಾ ರಾಜ್‌ಕುಮಾರ್ ಅವರೊಂದಿಗೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ಹಂಚಿಕೊಂಡ ಫೋಟೋದಲ್ಲಿ ಬಲಭಾಗದಲ್ಲಿ ಮಾಜಿ ಸಿಎಂ ಎಸ್‌ ಕೃಷ್ಣ ಹಾಗೂ ಎಡಭಾಗದಲ್ಲಿ ಅಣ್ಣವ್ರು ನಿಂತಿದ್ದಾರೆ.

Who is the actress standing between SM Krishna and Dr Rajkumar in the photo

ಈ ಫೋಟೋ 19 ವರ್ಷಗಳಿಗೂ ಹಳೆಯ ಫೋಟೋ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಫೋಟೋ ನೋಡಿದ ತಕ್ಷಣ ಎಸ್‌ಎಂ ಕೃಷ್ಣ ಹಾಗೂ ಅಣ್ಣವ್ರ ನಡುವೆ ನಿಂತುಕೊಂಡ ನಟಿ ಯಾರು ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಇದು ನಾನೇ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

''ನಾನು ಚಿಕ್ಕವಳಿದ್ದಾಗ ಅಣ್ಣವ್ರನ್ನ ಭೇಟಿ ಮಾಡಿದ್ದು ಬಿಟ್ಟರೆ ಈ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಆ ವರ್ಷದ ಅತ್ಯುತ್ತಮ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿತ್ತು. ನಾನು ಆಗಿನ್ನೂ ಶಾಲೆ ಮುಗಿಸಿ ಪಾಕೆಟ್‌ ಮನಿಗಾಗಿ ಸಿನಿಮಾ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೆ.

Who is the actress standing between SM Krishna and Dr Rajkumar in the photo

ಕಾರ್ಯಕ್ರಮದ ನೃತ್ಯ ಸಂಯೋಜನೆ ಮಾಡುತ್ತಿದ್ದ ಬಿ ಜಯಶ್ರೀ ಅಮ್ಮ 23 ಕೆಜಿ ಭಾರದ ಪ್ರಶಸ್ತಿ ಫಲಕವನ್ನು ಹಿಡಿದುಕೊಂಡು ವೇದಿಕೆಯ ಮೇಲೆ ಹೋಗುತ್ತೀಯಾ ಎಂದು ಕೇಳಿದರು. ನಾನು ಹೋಗುತ್ತೇನೆ ಎಂದು ಹೇಳಿದೆ. ಆ ವೇದಿಕೆ ಮೇಲೆ ಅಣ್ಣಾವ್ರ ಇದ್ದರು. ಅಣ್ಣಾವ್ರ ಜೊತೆಗೆ ಸ್ವಲ್ಪ ಮಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ಖುಷಿ ಆಯ್ತು.

ಆಗ ಅಣ್ಣಾವ್ರ ನಿನಗೆ ಇದು ತುಂಬಾ ಭಾರವಾಗಿದಿಯೇ ಎಂದು ನನ್ನನ್ನು ಕೇಳಿದರು. ಆಗ ನಾನು ಹೌದು ಎಂದೆ. ಆ ಪ್ರಶಸ್ತಿ ಹಿಡಿದುಕೊಳ್ಳಲು ಆಗದೇ ವೇದಿಕೆಯಿಂದ ಹೊರಬಂದೆ. ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ನನ್ನ ಫೋಟೋ ಬಂದಿತ್ತು. ನಾನು ಯಾವುದೇ ಸಾಧನೆ ಮಾಡಿಲ್ಲ. ಆದರೂ ಕೂಡ ನಾನು ಅಣ್ಣಾವ್ರ ಪಕ್ಕ ನಿಂತುಕೊಂಡಿದ್ದೆ. ಆಗ ನಾನು ಧನ್ಯಳಾಗಿದ್ದೇನೆ ಎನಿಸಿತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+