Karataka Damanaka OTT: ಸದ್ದಿಲ್ಲದೆ ಒಟಿಟಿಗೆ ಬಂತು ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಪ್ರಭುದೇವ ಅಭಿನಯದ ಸಿನಿಮಾ
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಜುಲೈ 12 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಅವರು ಸಿಗದೆ ಇದ್ದರೂ ಕೂಡ ಹಲವು ಸಿನಿಮಾಗಳ ಘೋಷಣೆ, ಸಿನಿಮಾಗಳ ಟೀಸರ್‌ಗಳ ಮೂಲಕ ತಮ್ಮ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇದರ ನಡುವರ ನಟ ಶಿವರಾಜ್ ಕುಮಾರ್ ಮತ್ತು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅಭಿನಯದ ಸಿನಿಮಾ 'ಕರಟಕ ದಮನಕ', ಸದ್ದಿಲ್ಲದೆ ಒಟಿಟಿಗೆ ಕಾಲಿಟ್ಟಿದೆ. ಹೌದು... ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರುವ ಈ ಇಬ್ಬರು ಪ್ರಮುಖ ನಾಯಕರು ನಟಿಸಿರುವ ಸಿನಿಮಾ ಒಟಿಟಿಗೆ ಕಾಲಿಟ್ಟಿದ್ದು, ಸಿನಿ ಪ್ರೇಕ್ಷಕರು ಶಿವಣ್ಣನ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ಒಟಿಟಿಗೆ ಬಂತು ಕರಟಕ ದಮನಕ
'ಕರಟಕ ದಮನಕ' ಸಿನಿಮಾವು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರೊಂದಿಗೆ ನಿರ್ದೇಶಕ ಯೋಗರಾಜ್ ಭಟ್ ಅವರ ಮೊದಲ ಕಾಂಬಿನೇಷನ್ ಚಿತ್ರ. ಈ ಚಿತ್ರದ ಮೂಲಕ ನಟ, ನೃತ್ಯ ನಿರ್ದೇಶಕ, ನಿರ್ಮಾಪಕ ಪ್ರಭುದೇವ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತಂದಿದೆ. ಬಹು ನಿರೀಕೆಯ ಮೂಲಕ ಬಿಡುಗಡೆಯಾಗಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಲಿಲ್ಲ. ಘಟಾನುಘಟಿ ನಾಯಕರಿದ್ದರೂ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವಲ್ಲಿ ವಿಫಲವಾಗಿದೆ.
ಒಟಿಟಿ ಮೂಲಕ ಮತ್ತಷ್ಟು ಜನರನ್ನು ತಲುಪಲು ಯತ್ನಿಸುತ್ತಿರುವ ಚಿತ್ರತಂಡ, 'ಕರಟಕ ದಮನಕ' ಸಿನಿಮಾವನ್ನು ಒಟಿಟಿ ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ. ಶಿವಣ್ಣನ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಜುಲೈ 12 ರಂದು ಸಿನಿಮಾ ಬಿಡುಗಡೆಯಾಗಿದೆ. ಥಿಯೇಟರ್ ರೀಲಿಸ್ ಆಗಿ ನಾಲ್ಕು ತಿಂಗಳ ಬಳಿಕ ಒಟಿಟಿಗೆ ಸಿನಿಮಾ ಲಗ್ಗೆಯಿಟ್ಟಿದೆ.

ಶೀರ್ಷಿಕೆ: ಕರಟಕ ದಮನಕ
ನಿರ್ದೇಶಕ: ಯೋಗರಾಜ್ ಭಟ್
ತಾರಾಂಗಣ: ಶಿವರಾಜಕುಮಾರ್, ಪ್ರಭುದೇವ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ರಾಕ್‌ಲೈನ್ ವೆಂಕಟೇಶ್ ಮತ್ತು ಪಿ ರವಿಶಂಕರ್, ಇತರರು
ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ
ಸ್ಟ್ರೀಮಿಂಗ್ ದಿನಾಂಕ: ಜುಲೈ 12, 2024












Click it and Unblock the Notifications