Puneeth Rajkumar: ಅನುಶ್ರೀಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ ಕೊನೆಯ ಮಾತೇನು..?

ಕನ್ನಡ ಚಿತ್ರರಂಗದ ಪವರ್‌ ಸ್ಟಾರ್‌, ಕನ್ನಡಿಗರ ಪಾಲಿನ ಮೆಚ್ಚಿನ ಅಪ್ಪು, ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿ ಮೂರು ವರ್ಷಗಳು ಸಮೀಪಿಸುತ್ತಿದ್ದರೂ, ಅವರ ಅಗಲಿಕೆಯ ನೋವು ಮಾತ್ರ ಕಿಂಚಿತ್ತು ಕಮ್ಮಿಯಾಗಿಲ್ಲ. ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪ್ರತಿ ದಿನ ಅವರನ್ನು ನೆನೆದು ಭಾವುಕರಾಗುತ್ತಾರೆ. ಯಾವುದೇ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಥವಾ ಅಪ್ಪು ಎನ್ನುವ ಹೆಸರು ಕಿವಿಗೆ ಬೀಳುತ್ತಿದ್ದಂತೆ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತುಂಬುತ್ತದೆ. ಅಷ್ಟರ ಮಟ್ಟಿಗೆ ಅಪ್ಪು ಇಲ್ಲದ ನೋವು ಅಭಿಮಾನಿಗಳಲ್ಲಿದೆ.

ಪುನೀತ್‌ ಕನ್ನಡಿಗರಿಗೆ ನಮಸ್ಕಾರ ಎನ್ನುತ್ತಲೇ ತಮ್ಮ ಕಾರ್ಯಕ್ರಮ ಆರಂಭಿಸುವ ನಿರೂಪಕಿ ಅನುಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿ ಎನ್ನುವುದು ಎಲ್ಲರಿಗೂ ಗೊತ್ತು. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದು ಭಾವುಕರಾಗಿದ್ದು, ಅಪ್ಪು ತಮಗೆ ಹೇಳಿದ ಮಾತನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

What Was The Last Word Puneeth Rajkumar Said To Anchor Anushree

ಕ್ರೀಯಾಶೀಲತೆಗೆ ಹೆಸರಾಗಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ಇತ್ತೀಚಿಗೆ ಒಂದು ಸ್ಕಿಟ್‌ ಮಾಡಲಾಗಿದ್ದು, ಈ ಸ್ಕಿಟ್‌ನಲ್ಲಿ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಜೂನಿಯರ್ ಪುನೀತ್ ರಾಜ್‌ಕುಮಾರ್ ವೇದಿಕೆ ಮೇಲೆ ಬರುತ್ತಿದ್ದಂತೆ ಎಲ್ಲರೂ ಭಾವುಕರಾಗಿ ಎದ್ದು ನಿಂತು ಗೌರವ ನೀಡಿದ್ದಾರೆ.

ನಿರೂಪಕಿ ಅನುಶ್ರೀ ಕೂಡ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿ ಭಾವುಕರಾಗಿದ್ದಾರೆ. ಈ ವೇಳೆ ಕಣ್ಣೀರಿಡುತ್ತಲೇ ಮಾತನಾಡಿದ ಅನುಶ್ರೀ, ವಾಪಸ್ ಬಂದು ಬಿಡಿ ಸಾರ್ ಪ್ಲೀಸ್...ನೀವಿಲ್ಲದೆ ಇಲ್ಲಿ ಏನೂ ಸರಿಯಾಗಿ ನಡೆಯುತ್ತಿಲ್ಲ ಎಂದಿದ್ದಾರೆ.

What Was The Last Word Puneeth Rajkumar Said To Anchor Anushree

ಎಲ್ಲರಿಗೂ ಅಪ್ಪು ಅಂದ್ರೆ ಎಷ್ಟು ಇಷ್ಟನೋ, ಅಷ್ಟೂ ನನಗೆ ಪಂಚ ಪ್ರಾಣ. ಅಪ್ಪು ಸರ್ ಇಲ್ಲಿ ನಿಂತುಕೊಂಡಿದ್ದರು. ಆಗ ನನಗೆ ಅವರು ಹೇಳಿದ್ದರು. ​ಆಗ ನನ್ನ ಕೈ ಹಿಡಿದುಕೊಂಡು ಹೇಳಿದ್ದರು. ನೀವು ಸುಧಾರಿಸಿಕೊಳ್ಳಿ, ನೀವು ಸಮಾಧಾನವಾಗಿ ಇರಬೇಕು ಎಂದು ಕೊನೆಯದಾಗಿ ನನ್ನ ಜೊತೆಗೆ ಮಾತನಾಡಿದ್ದರು ಎಂದು ಕಣ್ಣೀರು ಹಾಕಿದ್ದಾರೆ.

ಇನ್ನು ಜೂನಿಯರ್ ಪುನೀತ್ ರಾಜ್‌ಕುಮಾರ್ ಆಗಿ ವೇದಿಕೆ ಮೇಲೆ ಬಂದ ನಟ ಕೂಡ ಚೆನ್ನಾಗಿ ನಟಿಸಿದ್ದು, ಪುನೀತ್ ರಾಜ್‌ಕುಮಾರ್ ಅವರ ಬಾಡಿ ಲ್ಯಾಂಗ್ವೇಜ್‌ ಹಾಗೂ ಧ್ವನಿಯನ್ನು ಸೇಮ್‌ ಟು ಸೇಮ್‌ ಅನುಕರಣೆ ಮಾಡಿದ್ದಾರೆ. ಈ ನಟನೆಗೆ ತೀರ್ಪುಗಾರರಾದ ತರುಣ್​ ಸುಧೀರ್‌, ಮಾಸ್ಟರ್​ ಆನಂತ್​, ಅಕುಲ್​ ಬಾಲಾಜಿ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್​​ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+