Kichcha Sudeepa: ಬಿಗ್‌ ಬಾಸ್‌ ವೇದಿಕೆ ಮೇಲೆ ವಿಶೇಷ ವ್ಯಕ್ತಿಗೆ ಕಿಚ್ಚ ಸುದೀಪ್ ಕೊಟ್ಟ ಗಿಫ್ಟ್‌ ಏನು?

ಬಿಗ್‌ ಬಾಸ್‌ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ಬಹಳ ಅದ್ಧೂರಿಯಾಗಿ ನಡೆದಿದೆ. ವಲ್ಡ್‌ ಕಾರ್ಡ್ ಎಂಟ್ರಿ ಪಡೆದ ಹಾಡುಗಾರ ಹನುಮಂತ ಗೆದ್ದು ಬಿಗ್‌ ಬಾಸ್‌ ಟ್ರೋಫಿ ಪಡೆದುಕೊಂಡರೆ ನಟ ತ್ರಿವಿಕ್ರಮ್‌ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಳೆದ ವಾರಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದ್ದು, ಎಂದಿನಂತೆ ನಟ ಕಿಚ್ಚ ಸುದೀಪ್‌ ಕಾರ್ಯಕ್ರಮದ ಹೈಲೈಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಸ್ಪರ್ಧಿಗಳಿಗಿಂತ ಕಿಚ್ಚ ಸುದೀಪ್‌ ಅವರ ನಿರೂಪಣೆಗಾಗಿ ನೋಡುವವರ ಸಂಖ್ಯೆಯೇ ಹೆಚ್ಚು. ನೇರ ನುಡಿ, ಸ್ಟೈಲಿಶ್‌ ಲುಕ್‌, ನಗು, ಸ್ಪರ್ಧಿಗಳಿಗೆ ಬುದ್ಧಿ ಮಾತು, ತಮಾಷೆ ಹೀಗೆ ವಾರಾಂತ್ಯದ ಸಂಚಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದರು ಕಿಚ್ಚ ಸುದೀಪ್‌. ಆದರೆ ಮುಂದಿನ ಸೀಜನ್‌ಗಳಿಂದ ಪ್ರೇಕ್ಷಕರಿಗೆ ಕಿಚ್ಚ ಸುದೀಪ್‌ ದರ್ಶನ ಇಲ್ಲದಂತಾಗಿದೆ. ಈಗಾಗಲೇ ದೃಢ ನಿರ್ಧಾರವನ್ನು ತೆಗೆದುಕೊಂಡಿರುವ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆಗೆ ಗುಡ್‌ ಬೈ ಹೇಳಿದ್ದಾರೆ.

What Was Kiccha Sudeep Gift To A Special Person On Bigg Boss Grand Finale Stage

ಕಿಚ್ಚ ಸುದೀಪ್ ನಿರೂಪಣೆಯ ಕೊನೆಯ ಸೀಜನ್‌ ಆಗಿರುವ ಕಾರಣ ಹಾಗೂ ಈ ಸೀಜನ್‌ ಸಮಯದಲ್ಲೇ ಅವರ ತಾಯಿ ವಿಧಿವಶರಾದ ಕಾರಣ ಬಿಗ್‌ ಬಾಸ್‌ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ವಿಶೇಷ ನೃತ್ಯವನ್ನು ಸುದೀಪ್‌ಗೆ ಸಮರ್ಪಿಸಲಾಯಿತು. ತಾಯಿಯನ್ನು ಕಳೆದುಕೊಂಡಿರುವ ಸುದೀಪ್‌ಗೆ ಸಾಂತ್ವನ ಹೇಳುವಂತೆ ವಿಕಟಕವಿ ಯೋಗರಾಜ್‌ ಭಟ್‌ ಬರೆದಿರುವ ಹಾಡಿಗೆ ನೃತ್ಯವೊಂದನ್ನು ಪ್ರದರ್ಶಿಸಲಾಯಿತು.

ಈ ನೃತ್ಯ ನೋಡುತ್ತಿದ್ದಂತೆ ಕಿಚ್ಚ ಸುದೀಪ್‌, ಅವರ ತಂದೆ ಹಾಗೂ ಮಗಳು ಸಾನ್ವಿ ಸುದೀಪ್‌ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರತಿಯೊಬ್ಬರು ಕೂಡ ಭಾವುಕರಾಗಿದ್ದಾರೆ. ಇಂತಹ ನೃತ್ಯವನ್ನು ಸಂಯೋಜಿಸಿದವರಿಗೂ, ಹಾಡು ಬರೆದಿರುವ ಯೋಗರಾಜ್‌ ಭಟ್‌ ಅವರಿಗೂ ಸುದೀಪ್‌ ಧನ್ಯವಾದ ತಿಳಿಸಿದರು. ಅಲ್ಲದೇ ಒಬ್ಬ ವಿಶೇಷವಾದ ವ್ಯಕ್ತಿಯನ್ನು ವೇದಿಕೆಗೆ ಕರೆದು ಕಿಚ್ಚ ಸುದೀಪ್‌ ಉಡುಗೊರೆಯೊಂದನ್ನು ನೀಡಿದ್ದಾರೆ.

What Was Kiccha Sudeep Gift To A Special Person On Bigg Boss Grand Finale Stage

ಕಿಚ್ಚ ಸುದೀಪ್ ಅವರ ಬಾಲ್ಯ ರೂಪವನ್ನು ನೃತ್ಯದ ಮೂಲಕ ಪ್ರದರ್ಶಿಸಿದ ಯುವನ್‌ ಎನ್ನುವ ಬಾಲಕನನ್ನು ವೇದಿಕೆ ಮೇಲೆ ಕರೆದ ಕಿಚ್ಚ ಸುದೀಪ್ ಆತನನ್ನು ಮುದ್ದಾಡಿ, ತಮ್ಮ ಕೈಯಲ್ಲಿದ್ದ ಬ್ರೇಸ್ಲೈಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಾಲಕನಿಗೆ ಕಿಚ್ಚ ಸುದೀಪ್‌ ನೀಡಿರುವ ಉಡುಗೊರೆ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಯಾಕೆಂದರೆ ಸುದೀಪ್ ಬಿಗ್‌ ಬಾಸ್‌ ಸೀಜನ್‌ 11ರ ಸಂಪೂರ್ಣ ಸೀಜನ್‌ನಲ್ಲಿ ಆ ಬ್ರೇಸ್ಲೈಟ್‌ ಧರಿಸಿದ್ದರು. ಅದು ಅವರಿಗೆ ಸ್ಟೈಲಿಶ್‌ ಲುಕ್‌ ನೀಡುತ್ತಿತ್ತು. ಒಂದು ಕ್ಷಣವೂ ಯೋಚಿಸಿದೇ ಕೈಯಲ್ಲಿದ್ದ ಬ್ರೇಸ್ಲೈಟ್‌ ಸುದೀಪ್‌ ಉಡುಗೊರೆಯಾಗಿ ನೀಡಿದ್ದು, ಮೊದಲೇ ಸುದೀಪ್‌ ಪಾತ್ರದಲ್ಲಿ ನೃತ್ಯ ಮಾಡಿದ ಖುಷಿಯಲ್ಲಿದ್ದ ಯುವನ್‌ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+