ಶಿವರಾಜ್‌ಕುಮಾರ್ ಖಡಕ್ ಹೇಳಿಕೆ: ಯುವ ರಾಜ್‌ಕುಮಾರ್ ಡಿವೋರ್ಸ್ ಬಗ್ಗೆ ಏನ್ ಹೇಳಿದ್ರು?

ಡಾ. ರಾಜ್‌ಕುಮಾರ್ ಅವರ ಮೊಮ್ಮಗ, ಯುವ ರಾಜ್‌ಕುಮಾರ್ ಅವರ ವಿವಾಹ ವಿಚ್ಛೇದನದ ಸುದ್ದಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ ಶಿವರಾಜ್‌ಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಡಾ. ರಾಜ್‌ಕುಮಾರ್ ಅವರ ದೊಡ್ಡ ಮಗ ಶಿವರಾಜ್‌ಕುಮಾರ್ ಅವರು ಯುವ ರಾಜ್‌ಕುಮಾರ್‌ಗೆ ದೊಡ್ಡಪ್ಪ ಆಗಬೇಕು. ಹಾಗಾದ್ರೆ ಯುವ ರಾಜ್‌ಕುಮಾರ್ ಡಿವೋರ್ಸ್ ಬಗ್ಗೆ ದೊಡ್ಡಪ್ಪ ಶಿವರಾಜ್‌ಕುಮಾರ್ ಹೇಳಿದ್ದೇನು? ಮುಂದೆ ಓದಿ.

ಡಾ. ರಾಜ್‌ಕುಮಾರ್ ಅವರ ಕುಟುಂಬ ಅಂದ್ರೆ ಮಂಡ್ಯ ಟು ಇಂಡಿಯಾ ಹವಾ ಮಾತ್ರವಲ್ಲದೆ, ಭಾರಿ ಗೌರವ ಕೂಡ ಇದೆ. ಆದರೆ ಇದೀಗ ಯುವ ರಾಜ್‌ಕುಮಾರ್ ಬಾಳಲ್ಲಿ ಬಿರುಗಾಳಿ ಎದ್ದಿದ್ದು ವಿಚ್ಛೇದನ ಅಂದ್ರೆ ಡಿವೋರ್ಸ್ ಪಡೆಯಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುವ ಸಮಯದಲ್ಲೇ, ಸ್ವತಃ ಶಿವರಾಜ್‌ಕುಮಾರ್ ಅವರು ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಯುವ ಅವರ ದೊಡ್ಡಪ್ಪ ಶಿವರಾಜ್‌ಕುಮಾರ್ ಅವರು ಈಗ ಡಿವೋರ್ಸ್ ಸುದ್ದಿ ಬಗ್ಗೆ ಹೇಳಿದ್ದು ಏನು?

What Shiva Rajkumar Said About Dr Rajkumar Grandson Actor Yuva Rajkumar Divorce

ಯುವ ಬಗ್ಗೆ ಶಿವರಾಜ್‌ಕುಮಾರ್ ಅವರು...

ಅಂದಹಾಗೆ ಯುವ ರಾಜ್‌ಕುಮಾರ್ ಅವರ ವಿಚ್ಛೇದನ ಅಂದ್ರೆ ಡಿವೋರ್ಸ್ ಸುದ್ದಿ ಕುರಿತಾಗಿ ಮಾತನಾಡಿರುವ ನಟ ಶಿವರಾಜ್‌ಕುಮಾರ್ ಅವರು, ಯುವ ರಾಜ್‌ಕುಮಾರ್​ ಮತ್ತು ಶ್ರೀದೇವಿ ಅವರ ವಿಚ್ಛೇದನದ ಕುರಿತು ಈವರೆಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಶಿವಣ್ಣ. ಹಾಗೇ ಮಾಹಿತಿ ಇಲ್ಲದೆ ಮಾತನಾಡುವುದು ಸರಿ ಅಲ್ಲ ಈ ಬಗ್ಗೆ ಮೊಬೈಲ್‌ನಲ್ಲಿ ತಿಳಿದುಕೊಂಡೆ. ಹೀಗೆ ಏನಾದರೂ ಆಗಿದ್ದರೆ ನನ್ನ ಮನಸ್ಸಿಗೆ ಬೇಜಾರಾಗುತ್ತೆ ಎಂದಿದ್ದಾರೆ ನಟ ಶಿವಣ್ಣ. ಈ ಮೂಲಕ ಯುವ ಅವರ ದೊಡ್ಡಪ್ಪ ಡಿವೋರ್ಸ್ ಸುದ್ದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯುವ ಮದುವೆ ಆಗಿದ್ದು ಯಾವಾಗ?

ಅಷ್ಟಕ್ಕೂ ಯುವ ರಾಜ್‌ಕುಮಾರ್ & ಶ್ರೀದೇವಿ ಅವರು 2018ರ ಜುಲೈ 5 ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಹಾಗೇ 2019ರ ಮೇ 26 ರಂದು ಯುವ ರಾಜ್‌ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಅವರ ಮದುವೆ ಆಗಿತ್ತು. ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ, ಅದ್ಧೂರಿಯಾಗಿ ಯುವ ರಾಜ್‌ಕುಮಾರ್ & ಶ್ರೀದೇವಿ ಅವರ ಮದುವೆ ಸಮಾರಂಭ ನಡೆದಿತ್ತು.

ಯುವ ರಾಜ್‌ಕುಮಾರ್ ಮದುವೆಯಲ್ಲಿ ಚಿರಂಜೀವಿ, ಉಪೇಂದ್ರ, ಯಶ್ ಸೇರಿ ರವಿಚಂದ್ರನ್, ದ್ವಾರಕೀಶ್​, ರಚಿತಾ ರಾಮ್, ಚಿರಂಜೀವಿ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ, ಸಿದ್ದರಾಮಯ್ಯ ಅವರು ಕೂಡ ಭಾಗವಹಿಸಿದ್ದರು. ಇವರ ಜೊತೆಗೆ ಗಣ್ಯರ ದಂಡೇ ಮದುವೆಗೆ ಬಂದು ಜೋಡಿಗೆ ಹರಸಿತ್ತು. ಆದರೆ ಹೀಗೆ ಮದುವೆ ಆದ 5 ವರ್ಷದಲ್ಲಿ ಮದುವೆ ಬಂಧ ಮುರಿದು ಬೀಳುವ ಹಂತಕ್ಕೆ ಬಂದಿದೆ. ಇದು ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.

ಡಾ. ರಾಜ್ ಕುಟುಂಬದಲ್ಲಿ ಮೌನ

ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ ಈಗ ಎಲ್ಲೆಲ್ಲೂ ಸಂಚಲನ ಎಬ್ಬಿಸಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಈ ಕುರಿತು ಮೌನ ಆವರಿಸಿದೆ. ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ನೋವು ಪಟ್ಟಿದ್ದಾರೆ. ಹೀಗಾಗಿ ಈ ಘಟನೆಗಳಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ನಾವು ಕೇಳಿದ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಹಿರಿಯರು, ಈ ವಿಚಾರವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಲಾದರೂ ಈ ಸಮಸ್ಯೆ ಸರಿ ಆಗುತ್ತಾ? ಅಥವಾ ಮತ್ತಷ್ಟು ಜಟಿಲವಾಗಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+