Ramya Marriage: ಖ್ಯಾತ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ: ಮೋಹಕ ತಾರೆ ಹೇಳಿದ್ದೇನು?

ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ, ಮಾಜಿ ಸಂಸದೆ ರಮ್ಯಾ ಅವರ ಮದುವೆ ಕುರಿತು ಅಭಿಮಾನಿಗಳಲ್ಲಿ ಕಾತುರ ಹೆಚ್ಚಿದ್ದು, ಈ ಬಗ್ಗೆ ಸಾಕಷ್ಟು ಟ್ರೋಲ್‌ಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿರುತ್ತವೆ. ಸದ್ಯ ರಮ್ಯಾ ಅವರು ಇದೇ ವರ್ಷ ಮದುವೆ ಆಗುತ್ತಿದ್ದಾರೆ. ಖ್ಯಾತ ಉದ್ಯಮಿ ಜೊತೆಗೆ ಸಪ್ತಪದಿ ತುಳಿಯುತ್ತಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಹಲವು ತಿಂಗಳಿನಿಂದ ನಟಿ ರಮ್ಯಾ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಕೊನೆಗೆ ಮೋಹಕತಾರೆ ನಟಿ ರಮ್ಯಾ ಅವರು ಮೌನ ಮುರಿದಿದ್ದಾರೆ.

ನಟಿ ರಮ್ಯಾಗೆ ಈಗ 42ರ ಹರೆಯ. ನಟಿ ರಮ್ಯಾ ಯಾವಾಗ ಮದುವೆಯಾಗುತ್ತಾರೆ ಎಂದು ಅದೆಷ್ಟೋ ಅಭಿಮಾನಿಗಳು ಕಾದುಕುಳಿತಿದ್ದಾರೆ. ಇವರ ಮದುವೆ ಚಿಂತೆಯನ್ನು ಆಗಾಗ ಇವರ ಅಭಿಮಾನಿಗಳು ಮಾಡುತ್ತಿರುತ್ತಾರೆ. ಅಲ್ಲದೇ ನಟಿ ರಮ್ಯಾ ಅವರು ಯಾವುದೇ ಹುಡುಗನ ಜೊತೆ ಕಾಣಿಸಿಕೊಳ್ಳಲಿ ಅವರ ಜೊತೆ ಮದುವೆಯನ್ನು ಮಾಡಿಸಲು ಮುಂದಾಗುತ್ತಾರೆ. ಅಲ್ಲದೇ ಯಾವುದೇ ಹುಡುಗ ಜೊತೆಗೆ ರಮ್ಯಾ ಅವರು ಕಾಣಿಸಿಕೊಂಡರೇ ಆ ಹುಡುಗನ ಕುಲ ಗೋತ್ರ ಜಾತಕವನ್ನೆಲ್ಲ ಜಾಲಾಡುತ್ತಾರೆ.

What did actress Ramya say about her marriage to Sanjeev Mohan

ಕಳೆದ ವರ್ಷಾಂತ್ಯದಲ್ಲಿ ರಮ್ಯಾ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕಳೆದ ವರ್ಷ ರಮ್ಯಾ ಅವರ ಹುಟ್ಟುಹಬ್ಬದಂದು ಕೀನ್ಯಾ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ ಸಂಜೀವ್ ಎಂಬ ವ್ಯಕ್ತಿ ಹ್ಯಾಪಿ ಬರ್ತ್‌ಡೇ ದಿವೂ ಲವ್ ಯು ಫಾರೆವರ್ ಎಂದು ಶುಭ ಕೋರಿದ್ದರು. ರಮ್ಯಾ ಜೊತೆ ಇರುವ ಫೋಟೊ ಶೇರ್ ಮಾಡಿದ್ದರು. ಇದಕ್ಕೆ ರಮ್ಯಾ ಕೂಡ ಲವ್ ಯೂ ಸನಾ ಎಂದು ಉತ್ತರವನ್ನು ನೀಡಿದ್ದರು. ಇನ್ನು ಸಂಜೀವ್ ಮತ್ತು ರಮ್ಯಾ ಇಬ್ಬರ ಆ ದಿನದ ಲೊಕೇಶನ್ ಒಂದೇ ಆಗಿತ್ತು.ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಸಂಜೀವ್ ಅವರ ಜೊತೆಯಲ್ಲಿಯೇ ರಮ್ಯಾ ಅವರ ಬರ್ತ್‌ಡೇ ಪಾರ್ಟಿ ನಡೆದಿತ್ತು.

ಸಂಜೀವ್ ಮೋಹನ್ ಜೊತೆ ರಮ್ಯಾ ಜೊತೆಗೆ ಹಾಕಿಕೊಂಡಿರುವ ಫೋಟೋವನ್ನ ನೋಡಿ ಅಭಿಮಾನಿಗಳು ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ತಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಹುಡುಗನ ಜೊತೆ ರಮ್ಯಾ ಲವ್ವಲ್ಲಿ ಬಿದ್ದಿದ್ದಾರೆ ಎಂದೆಲ್ಲ ಮಾತನಾಡಿದರು. ಆದರೆ, ಈ ಕುರಿತು ರಮ್ಯಾ ಆಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲಗಲ, ಇದೀಗ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿನ ಪೋಸ್ಟ್‌ ಶೇರ್‌ ಮಾಡಿಕೊಂಡು ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

ಅಸಲಿಗೆ ಟ್ರೋಲ್ ಪೇಜ್‌ನಲ್ಲಿ ಆ ಪೋಸ್ಟ್‌ನಲ್ಲಿ ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ ಅವರ ಬಾಯ್‌ಫ್ರೆಂಡ್ ಸಂಜೀವ್ ಮೋಹನ್ ! ಇವರು ರಮ್ಯಾ ಅವರನ್ನು ಪ್ರೀತಿಯಿಂದ Divs ಎಂದು ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ. ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣ್ರಪ್ಪ ಎಂದು ಬರೆಯಲಾಗಿತ್ತು. ಈ ಫೋಸ್ಟ್ ನ ರಮ್ಯಾ ತಮ್ಮ ಇನ್ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೇಕ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ತೆರೆ ಎಳೆದಿದ್ದಾರೆ.

ಖ್ಯಾತ ಉದ್ಯಮಿ ಸಂಜೀವ್ ಮೋಹನ್ ಮೊದಲಿಂದ ರಮ್ಯಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ನಟಿ ರಮ್ಯಾ ಅವರಿಗೆ ಸಂಜೀವ್‌ ಮೋಹನ್‌ ಜೀವದ ಗೆಳೆಯ. ಇದಕ್ಕೆ ಕೈಗನ್ನಡಿ ಎಂಬಂತೆ ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಮ್ಯಾಚ್‌ನ್ನೂ ಇಬ್ಬರು ಜೊತೆಯಲ್ಲಿಯೇ ಈ ಹಿಂದೆ ನೋಡಿದ್ದಾರೆ. ಅನೇಲ ಸಲ ಒಟ್ಟಿಗೆ ಪಾರ್ಟಿಯನ್ನು ಸಂಜೀವ್‌ ಮೋಹನ್‌ ಹಾಗೂ ನಟಿ ರಮ್ಯಾ ಮಾಡಿದ್ದಾರೆ. ಒಟ್ನಲ್ಲಿ ಸದ್ಯ ಖ್ಯಾತ ಉದ್ಯಮಿ ಸಂಜೀವ್ ಮೋಹನ್ ಅವರ ಜೊತೆ ಮದುವೆಯ ಸುದ್ದಿಯನ್ನು ರಮ್ಯಾ ಅಲ್ಲಗೆಳೆದಿದ್ದಾರೆ.

ಖ್ಯಾತ ಉದ್ಯಮಿ ಜೊತೆ ಮೋಹಕತಾರೆ ನಟಿ ರಮ್ಯಾ ಮದುವೆ ಕುರಿತು ಸ್ಪಷ್ಟನೆ ನೀಡಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+