ದರ್ಶನ್ ಹೀಗೆ ಯೋಚಿಸಿದ್ದರೆ ಜೈಲಲ್ಲಿ ಇಂದು ಬೆಡ್‌ಗೆ ಪರದಾಡಬೇಕಿರಲಿಲ್ಲ! ಯುವತಿಯ ವಿಡಿಯೋ ವೈರಲ್
ಬೆಂಗಳೂರು, ಅಕ್ಟೋಬರ್ 12: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಲ್ಲಿರುವ ಆರೋಪಿ, ನಟ ದರ್ಶನ್ ತೂಗುದೀಪ ಅವರು ಮೂಲಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ. ಕನಿಷ್ಠ ಮೂಲಸೌಲಭ್ಯ ಒದಗಿಸಿದ್ದೇವೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಹಾಸಿಗೆ, ಬೆಡ್ ಶೀಟ್ ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ಮೇಲೆ ಆರೋಪಿಸಿದ್ದರು. ಈ ವಿಚಾರ ಹೆಚ್ಚು ಸುದ್ದು ಮಾಡುತ್ತಿದ್ದಂತೆ ಇದೀಗ ದರ್ಶನ್ ಜೈಲೊಳಗಿನ ಪರದಾಟ ಕುರಿತು ಯುವತಿಯೊಬ್ಬಳು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ದರ್ಶನ್ ಜೈಲಿನಲ್ಲಿ ಬೆಡ್ ಗಾಗಿ ಪರದಾಡಿದ್ದು ಗೊತ್ತೇ ಇದೆ. ಇದೇ ಬೆಡ್ ವಿಚಾರ ಮುಂದಿಟ್ಟುಕೊಂಡು ಯುವತಿಯೊಬ್ಬರು ಜ್ಯೂಸ್ ಕುಡಿಯುತ್ತ ಮಾತನಾಡಿ ವಿಡಿಯೋ ವೈರಲ್ ಅನ್ನು ಮೂವಿ ಮ್ಯಾಜಿಕ್ ನ್ಯೂಸ್ ಪೋಸ್ಟ್ ಮಾಡಿದೆ. ಅಸಲಿಗೆ ಯುವತಿ ಹೇಳಿದ ಮಾತು ತಮಾಷೆ ಅನ್ನಿಸಿದರೆ ದರ್ಶನ್ ಅವರು ಈ ಪರಿಸ್ಥಿತಿಗೆ ಬರಲು ಅದೇ ಕಾರಣ ಎನ್ನಲಾಗಿದೆ.

ವಿಡಿಯೋದಲ್ಲಿ ಏನಿದೆ?
"ಏನು ದರ್ಶನ್‌ಗೆ ಜೈಲಲ್ಲಿ ಬೆಡ್ ಸಿಗ್ತಿಲ್ಲವಾ!, ಆಚೆ (ಹೊರಗಿದ್ದಾಗ) ಇರೋವಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ' ಎಂದು ಆ ಯುವತಿ ಹೇಳಿದ್ದಾರೆ. ಈ ಮೂಲಕ ಪತ್ನಿ ವಿಜಯಲಕ್ಷ್ಮೀ ಅವರು ಇರುವಾಗ ಮತ್ತೊಬ್ಬರ ಜೊತೆ ರಿಲೇಷನ್‌ಶಿಪ್ ಬೆಳೆಸಿದ್ದರಿಂದಲೇ ದರ್ಶನ್ ಜೀವನ ಈ ಸ್ಥಿತಿಗೆ ಬಂದು ನಿಂತಿದೆ ಎಂದು ವಿಡಿಯೋದಲ್ಲಿ ಮಾರ್ಮಿಕವಾಗಿ ಯುವತಿ ಹೇಳಿದ್ದಾರೆ.
ಮುಂದುವರಿದು, "ಆಯುರ್ವೇಧದ ಪ್ರಕಾರ ಹಾಸಿಗೆ ಇಲ್ಲದೇ ಫ್ಲಾಟ್ ಸರ್ಫೇಸ್ ಮೇಲೆ (ನೆಲ) ಮಲಗಿದರೆ ಬೆನ್ನು ನೋವು ವಾಸಿಯಾಗುತ್ತಂತೆ. ಅಣ್ಣಂಗೆ ಬೆನ್ನು ನೋವು ವಾಸಿಯಾಗಬೇಕು. ಅದು ಮುಖ್ಯ' ಎಂದು ಯುವತಿ ಮಾತನಾಡಿ ವಿಡಿಯೋ ವೈರಲ್ ಆಗುತ್ತಿದೆ. ಪತ್ನಿ ಬಿಟ್ಟು ಪವಿತ್ರಾಗೌಡ ಸಹವಾಸ ಮಾಡಿ ಜೈಲಲ್ಲಿ ಬೆಡ್‌ಗೆ ಪರದಾಡುತ್ತಿರುವ ನಟ ದರ್ಶನ್‌ಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದರ್ಶನ್‌ಗೆ ಶೀಘ್ರವೇ ರಿಲೀಫ್ ಸಾಧ್ಯತೆ
ಆರೋಪಿ ದರ್ಶನ್ ಜೈಲಿನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ಬೇಡಿಕೆ ಇಟ್ಟಿದ್ದರು. ಬೆಡ್, ಬೆಡ್‌ಶೀಟ್ ಗಾಗಿ ಮನವಿ ಮಾಡಿದ್ದರು. ಈ ಬಗ್ಗೆ ವಾದ ವಿವಾದ ಆಲಿಸಿದ 57ನೇ ಸಿಸಿಎಚ್ ಕೋರ್ಟ್ ದರ್ಶನ್ ಅರ್ಜಿ ಪರ ಆದೇಶ ನೀಡಿದೆ. ಕಾನೂನು ಸೇವಾ ಪ್ರಾಧಿಕಾರ ಸದಸ್ಯರು ಜೈಲಿಗೆ ತೆರಳಿ ಅಲ್ಲಿ ಮೂಲಸೌಕರ್ಯ ಒದಗಿಸುವ ಈ ಹಿಂದಿನ ಆದೇಶ ಪಾಲನೆ ಆಗುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸುವಂತೆ ಕೋರ್ಟ್ ತಿಳಿಸಿದೆ. ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ಅಕ್ಟೋಬರ್ 18ರೊಳಗೆ ವರದಿ ನೀಡಬೇಕು ಎಂದು ಹೇಳಿದೆ.
ಈ ವರದಿ ಸಲ್ಲಿಕೆ ಬಳಿಕ ಅದನ್ನು ಗಮನಿಸಿ, ಅಗತ್ಯ ಸೌಕರ್ಯ ನಿಡಲಾಗಿದೆಯೋ ಇಲ್ಲವೋ ಎಂದು ತಿಳಿದು ಮುಂದಿನ ತಿರ್ಪು ಹೊರಡಿಸುವ ಸಾಧ್ಯತೆ ಇದೆ. ಯಾವುದೇ ಸೌಕರ್ಯ ಕೊಟ್ಟಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಅದು ನಿಜವೇ ಆದಲ್ಲಿ ದರ್ಶನ್‌ಗೆ ಮುಂದಿನ ವಾರ ಒಂದಷ್ಟು ರಿಲೀಫ್ ಸಿಗುವ ನಿರೀಕ್ಷೆ ಇದೆ.












Click it and Unblock the Notifications