ತುಂಬಾ ಕ್ಯೂಟ್‌ ಆಗಿ ಹಾಡಿದ್ದಾಳೆ: 'ಹೂವಿನ ಬಾಡದಂತೆ' ಹುಡುಗಿಗೆ ಚಾನ್ಸ್‌ ಕೊಡ್ತಾರಾ ಅರ್ಜುನ್‌ ಜನ್ಯ?

ಸೋಷಿಯಲ್‌ ಮೀಡಿಯಾದಲ್ಲಿ ಈಗೆಲ್ಲ ಒಂದು ರೀಲ್‌, ಒಂದು ಡೈಲಾಗ್‌ನಿಂದ ಒಂದೇ ದಿನದಲ್ಲಿ ಸ್ಟಾರ್‌ ಆಗಬಹುದು. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ವೈರಲ್‌ ಆದ "ಹೂವಿನ ಬಾಣದಂತೆ" ಹಾಡಿನ ಹುಡುಗಿ. ಸುಮ್ಮನೆ ತಮಾಷೆಗೆ ಮಾಡಿದ ಒಂದು ವಿಡಿಯೋದಿಂದ ಆ ಹುಡುಗಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದಾರೆ. ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ ಅವರು ತಮ್ಮದೇ ದಾಟಿಯಲ್ಲಿ ಹೂವಿನ ಬಾಡಿದಂತೆ, ಯಾರಿಗೂ ಕಾಣದಂತೆ ಎಂದು ಸಾಂಗ್‌ ಹಾಡಿದ್ದರು. ಈ ವಿಡಿಯೋ ತಮಾಷೆಯಾಗಿದ್ದ ಕಾರಣ ಒಂದೇ ದಿನದಲ್ಲಿ ಎಲ್ಲೆಡೆ ಹರಿದಾಡಿತು. ಇದು ಎಷ್ಟರಮಟ್ಟಿಗೆ ಅಂದ್ರೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರು ಕೂಡ ಈ ಹಾಡನ್ನ ನಿತ್ಯಶ್ರೀ ದಾಟಿಯಲ್ಲೇ ಹಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನಿತ್ಯಶ್ರೀ ಅವರ ಹೂವಿನ ಬಾಡದಂತೆ ಹಾಡು ಸಖತ್‌ ಟ್ರೆಂಡ್‌ ಆಗಿದೆ. ಇನ್‌ಸ್ಟಾಗ್ರಾಂ ಪೂರ್ತಿ ನಿತ್ಯಶ್ರೀ ಅವರೇ ತುಂಬಿ ತುಳುಕಾಡುತ್ತಿದ್ದಾರೆ. ಈ ಒಂದು ವಿಡಿಯೋದಿಂದಾಗಿ ನಿತ್ಯಶ್ರೀ ಅವರ ಫಾಲೋವರ್ಸ್‌ ಕೂಡ ಹೆಚ್ಚಾಗಿದ್ದಾರೆ. ಇದೇ ಹಾಡಿಗೆ ಅನೇಕರು ರೀಲ್‌ ಮಾಡುತ್ತಿದ್ದಾರೆ. ನಿತ್ಯಶ್ರೀ ವಿಡಿಯೋವನ್ನು ಟ್ರೋಲ್‌ ಮಾಡಲಾಗುತ್ತಿದ್ದು, ಮೀಮ್‌ಗಳು ಎಲ್ಲೆಡೆ ಹರಿದಾಡುತ್ತಿವೆ. ಸೆಲೆಬ್ರಿಟಿಗಳು ಕೂಡ ಇದೇ ಹಾಡನ್ನು ನಿತ್ಯಶ್ರೀ ಅವರಂತೆಯೇ ಹಾಡುವ ಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ.

viral-sensation-nityashree-hoovina-baadadante-song-impresses-arjun-janya

ನಿತ್ಯಶ್ರೀ ಅವರ ಹಾಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದೆ. ಆಕೆಯ ಗಾಯನವನ್ನು ಹಲವರು ಟ್ರೋಲ್‌ ಹಾಗೂ ಗೇಲಿ ಮಾಡುತ್ತಿದ್ದರೆ, ಅನೇಕರು ತುಂಬಾ ಕ್ಯೂಟ್‌ ಆಗಿ ಹಾಡಿದ್ದಾಳೆ ಎಂದು ಬೆನ್ನುತಟ್ಟಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಕೂಡ ವೇದಿಕೆಯೊಂದರಲ್ಲಿ ನಿತ್ಯಶ್ರೀ ಅವರಂತೆಯೇ ಹೂವಿನ ಬಾಡದಂತೆ ಹಾಡನ್ನು ಹಾಡಿದ್ದಾರೆ. ʼಆ ಮಗು ತುಂಬಾ ಕ್ಯೂಟ್‌ ಆಗಿ ಹಾಡು ಹಾಡಿದ್ದಾಳೆ. ಆ ವಿಡಿಯೋ ನನಗೆ ತುಂಬಾ ಸಲ ಬರುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಇದೇ ರೀತಿ ಮಗ್ಧಳಾಗಿರು, ಹಾಡ್ತಾ ಇರುʼ ಎಂದು ಅರ್ಜುನ್‌ ಜನ್ಯ ಹೇಳಿದ್ದಾರೆ.

ವೈರಲ್‌ ಹುಡುಗಿ ಯಾರು?

ವೈರಲ್‌ ಹುಡುಗಿ ನಿತ್ಯಾಶ್ರೀ ಮಂಡ್ಯ ಜಿಲ್ಲೆಯ ಕೆ.ಆರ್.​ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದವರು. ಮೈಸೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ʼನಾನು ನನ್ನ ಫ್ರೆಂಡ್ಸ್‌ಗಾಗಿ ಈ ಹಾಡು ಹಾಡಿದ್ದೆ. ನಮ್ಮ ಗುರುಗಳು ಇದನ್ನು ವಿಡಿಯೋ ಮಾಡಿ ಇನ್​​ಸ್ಟಾಗ್ರಾಮ್​​ನಲ್ಲಿ ಅಪ್ಲೋಡ್ ಮಾಡಿದ್ರು. ಇದು ಇಷ್ಟು ವೈರಲ್ ಆಗುತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ. ಈಗ ಎಲ್ಲಿ ಹೋದ್ರೂ ಜನ ನನ್ನ ಗುರುತಿಸುತ್ತಾರೆ, ಸೆಲ್ಫಿ ಕೇಳ್ತಿದ್ದಾರೆ. ನನಗೆ ನಟಿ ಆಗಬೇಕು ಅನ್ನೋ ಆಸೆ ಇದೆ. ರಾಕಿಂಗ್‌ ಸ್ಟಾರ್‌ ಯಶ್ ಅಂದ್ರೆ ನನಗೆ ತುಂಬಾ ಇಷ್ಟ. ಅವರ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಬೇಕು ಅನ್ನೋದು ನನ್ನ ಕನಸು ಎಂದಿದ್ದಾರೆ. ನನ್ನ ವಿಡಿಯೋಗೆ ಜನ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ. ಇವಳು ಏನ್‌ ಸಾಧನೆ ಮಾಡಿದ್ದಾಳೆ ಅಂತ ವೈರಲ್ ಆಗಿದ್ದಾಳೆ. ಆದರೆ ಬಹುತೇಕರು ಒಳ್ಳೆಯ ಕಾಮೆಂಟ್‌ ಹಾಕಿದ್ದಾರೆ. ಕೆಟ್ಟ ಕಾಮೆಂಟ್ಸ್‌ಗಳಿಗೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ನನ್ನಿಂದಾಗಿ ಜನ ನಗ್ತಾರೆ ಅನ್ನೋ ಖುಷಿ ಇದೆʼ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+