Pepe Trailer: ಪೆಪೆ ಟ್ರೈಲರ್ ನೋಡಿ ಹಾಡಿ ಹೊಗಳಿದ ಫ್ಯಾನ್ಸ್; ಮತ್ತೊಂದು ಹಿಟ್‌ ಕೊಡ್ತಾರ ವಿನಯ್‌ ರಾಜ್‌ಕುಮಾರ್

ವಿನಯ್ ರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಪೆಪೆ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಪೆಪೆ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಇನ್ನು ಟ್ರೈಲರ್ ನೋಡಿ ಕನ್ನಡಿಗರು ರಕ್ತಸಿಕ್ತ ಹೊಡೆದಾಟ ನೋಡಿ ಬೆಚ್ಚಿಬಿದ್ದಿದ್ದಾರೆ. ಕನ್ನಡದಲ್ಲಿ ಇದೊಂದು ಹೊಸ ಮಾದರಿಯ ಸಿನಿಮಾ ಎನ್ನುವ ಮುನ್ಸೂಚನೆ ಕೊಟ್ಟಿದ್ದು, ವಿನಯ್ ರಾಜ್‌ಕುಮಾರ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್ ನಲ್ಲಿ ವಿನಯ್ ರಾಜ್‌ಕುಮಾರ್ ಪಕ್ಕಾ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಹೊಡೆದಾಟ, ಹಿಂಸಾತ್ಮಕ ದೃಶ್ಯಗಳಿದ್ದು, ಎಲ್ಲವೂ ಕೂಡ ನೈಜವಾಗಿ ಮೂಡಿ ಬಂದಿರುವ ಸೂಚನೆ ಸಿಕ್ಕಿದೆ. ಜಾತಿ ವ್ಯವಸ್ಥೆ, ಮಹಿಳಾ ಶೋಷಣೆ ಬಗ್ಗೆ ಕೂಡ ಸಿನಿಮಾದಲ್ಲಿ ಮಹತ್ವದ ಕತೆ ಇರುವು ಸುಳಿವು ಸಿಕ್ಕಿದೆ.

Vinay Rajkumar s Pepe Trailer get good response

ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ

ಸಿನಿಮಾ ಟ್ರೈಲರ್ ನೋಡಿದವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಾನಿಶ್ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದು, "ಈಗಷ್ಟೇ ಪೆಪೆ ಟ್ರೈಲರ್ ನೋಡಿದೆ. ಇಂತಹದ್ದೊಂದು ಸಿನಿಮಾ ಕನ್ನಡದಲ್ಲಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆ, ಅಂತಿಮವಾಗಿ ಶ್ರೀಲೇಶ್ ನಾಯರ್ ಅವರಿಗೆ ಇಂತಹ ಸಿನಿಮಾ ಕೊಡುತ್ತಿರುವುದಕ್ಕೆ ಧನ್ಯವಾದಗಳು, ಇದೊಂದು ನಿರ್ದೇಶಕರ ಸಿನಿಮಾ ಎಂದು ಭಾವಿಸುತ್ತೇನೆ. ವಿನಯ್‌ ರಾಜ್‌ಕುಮಾರ್ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.

ಇನ್ನೂ ಸಾಕಷ್ಟು ಸಿನಿಮಾದ ಗುಣಮಟ್ಟದ ಬಗ್ಗೆ ಮಾತನಾಡಿದ್ದಾರೆ, ತುಂಬಾ ಸಮಯ ತೆಗೆದುಕೊಂಡರು ಸಿನಿಮಾ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ದೊಡ್ಡ ಪರದೆ ಮೇಲೆ ನೋಡಿದರೆ ಸಿನಿಮಾ ಬೇರೆಯದೇ ಅನುಭವ ಕೊಡುತ್ತದೆ ಎಂದಿದ್ದಾರೆ.

ವಿನಯ್ ರಾಜ್‌ಕುಮಾರ್ ಅಭಿನಯ

ವಿನಯ್ ರಾಜ್‌ಕುಮಾರ್ ಪ್ರತಿಯೊಂದು ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲಿ ಹೆಚ್ಚು ಮಾಗುತ್ತಿದ್ದಾರೆ. ಒಂದು ಸರಳ ಪ್ರೇಮಕಥೆಯಲ್ಲಿ ಮಧ್ಯಮ ವರ್ಗದ ಮನೆಯ ಸಾಮಾನ್ಯ ಹುಡುಗನಾಗಿ, ಸಂಗೀತ ನಿರ್ದೇಶಕನಾಗುವ ಕನಸು ಕಾಣುವವನ ಪಾತ್ರದಲ್ಲಿ ಮಿಂಚಿದ್ದರು. ಪೆಪೆ ಸಿನಿಮಾದಲ್ಲಿ ಅವರ ಪಾತ್ರ ಸಂಪೂರ್ಣ ತದ್ವಿರುದ್ಧ ಇಲ್ಲಿ ಹೊಡೆದಾಟ, ಕ್ರೌರ್ಯ, ಹೋರಾಟದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗೆ ಉದಯ್ ಶಂಕರ್ ಎಸ್ ಸಿನಿಮಾಗೆ ಬಂಡವಾಳ ಹೂಡಿದ್ದು, ಶ್ರೀಲೇಶ್ ಎನ್ ನಾಯರ್ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಮರ್ಥ ಉಪಾಧ್ಯ ಸಿನಿಮಾಟೊಗ್ರಫಿ ಸಿನಿಮಾಗೆ ಇದ್ದು, ವಿನಯ್ ರಾಜ್‌ಕುಮಾರ್ ಜೊತೆಯಲ್ಲಿ ಯಶ್ ಶೆಟ್ಟಿ, ಬಾಲ ರಾಜ್ವಾದಿ, ಮೆದಿನಿ ಕೆಳಮನೆ, ಕಾಜಲ್ ಕುಂದರ್, ಸಂಧ್ಯಾ ಅರಕೆರೆ ತಾರಾಗಣದಲ್ಲಿದ್ದಾರೆ. ಆಗಸ್ಟ್ 30ರಂದು ಸಿನಿಮಾ ತೆರೆ ಮೇಲೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+