Vijayalakshmi Darshan: 2024ರಲ್ಲಿ ಕಲಿತ ಪಾಠದ ಬಗ್ಗೆ ಪೋಸ್ಟ್‌ ಹಾಕಿಕೊಂಡ ವಿಜಯಲಕ್ಷ್ಮಿ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜೈಲು ಪಾಲಾದ ದಿನದಿಂದಲೂ ಪತಿ ಪರವಾಗಿ ನಿಂತವರು ವಿಜಯಲಕ್ಷ್ಮಿ. ಪತಿಯನ್ನ ಜೈಲಿನಿಂದ ಹೊರಗೆ ತರಲೇಬೇಕು ಎಂದು ಪಣ ತೊಟ್ಟ ವಿಜಯಲಕ್ಷ್ಮಿ ಕಾನೂನು ಹೋರಾಟಕ್ಕೆ ಮುಂದಾದ್ರು. ಗಂಡನಿಗಾಗಿ ದೇವರ ಮೊರೆ ಹೋಗಿದ್ರು. ದರ್ಶನ್ ಜೈಲು ಸೇರಿದ ದಿನದಿಂದಲೂ ಕಾನೂನು ಹೋರಾಟ ನಡೆಸಿದ್ರು. ಪತಿಗೆ ಬೇಲ್ ಸಿಕ್ಕಿ ಹೊರ ಬರುವ ದಿನಕ್ಕಾಗಿ ವಿಜಯಲಕ್ಷ್ಮಿ ಕಾಯ್ತಿದ್ರು.

ಹೌದು, ದರ್ಶನ್‌ ಅವರನ್ನ ಜೈಲಿನಿಂದ ಬಿಡಿಸಿಕೊಂಡು ಬರಲು ಪತಿಯ ಜಾಮೀನಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ದೇವಸ್ಥಾನಗಳಿಗೆ ಹೋಗಿ, ಪೂಜೆ ಮಾಡಿಸಿ, ಅತ್ತ ಗಂಡನನ್ನೂ ವಾರದಲ್ಲೊಮ್ಮೆ ಭೇಟಿ ಮಾಡಿ, ವಕೀಲರು, ಜಾಮೀನು ಅಂತ ಸಿಕ್ಕಾಪಟ್ಟೆ ಓಡಾಡಿದ್ದರು. ಅಲ್ಲದೇ ಈ ಕೇಸ್‌ ನಿಂದಾಗಿ ಮಾನಸಿಕವಾಗಿ ಹಲವು ನೋವುಗಳನ್ನ ಹಾಗೂ ಸವಾಲುಗಳನ್ನ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಎದುರಿಸಿದ್ದಾರೆ. ಗಂಡನಿಗಾಗಿ ಸಾಕಷ್ಟು ಹೋರಾಟ ನಡೆಸಿರುವ ವಿಜಯಲಕ್ಷ್ಮಿ ಅವರು 2024 ರಲ್ಲಿ ಕಲಿತ ಪಾಠದ ಬಗ್ಗೆ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.

Vijayalakshmi Darshan Learn Lesson In 2024 Post Viral

ಇನ್ನೂ ಈ ಪೋಸ್ಟ್‌ ಶೇರ್‌ ಮಾಡಿಕೊಳ್ಳುವ ಮುಂಚೆ ವಿಜಯಲಕ್ಷ್ಮಿ ದರ್ಶನ್ ಅವರು ತುಂಬಾ ಖುಷಿಯಲ್ಲಿ ನಗುತ್ತಿರುವ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಅವರು ರೆಡ್ ಕಲರ್ ಡ್ರೆಸ್ ಧರಿಸಿಕೊಂಡಿದ್ದರು. ಈಗ ಈ ವರ್ಷ ಕಲಿತ ಪಾಠದ ಬಗ್ಗೆ ಮೆಸೆಜ್‌ ಇರುವ ಸಣ್ಣ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಸಣ್ಣ ವಿಡಿಯೋದ ಮೂಲಕ ಜೀವನದ ಹೋರಾಟದ ಬಗ್ಗೆ ತಿಳಿಸಿದ್ದಾರೆ.

ವಿಜಯಲಕ್ಷ್ಮಿ ಹಾಕಿರುವ ಪೋಸ್ಟ್‌ನಲ್ಲಿ ಏನಿದೆ?

ಬದಲಾವಣೆ ಭಯಾನಕವಾಗಿರತ್ತೆ, ಆದರೆ ಬದಲಾವಣೆಯೇ ಮುಂದೆ ಬೆಳವಣಿಗೆಗೆ ದಾರಿ. ನೋವು ಜನರನ್ನು ಬದಲಾಯಿಸುತ್ತದೆ, ನಾವು ಒಂದು ಪ್ಲ್ಯಾನ್‌ ಮಾಡಿದರೆ, ದೇವರ ಪ್ಲ್ಯಾನ್‌ ಬೇರೆದಾಗಿರತ್ತೆ! ಜೀವನವು ನೆನಪುಗಳ ಸಂಗ್ರಹವಲ್ಲದೆ ಬೇರೇನೂ ಅಲ್ಲ. ಕನ್ನಡಿ ನನ್ನ ಉತ್ತಮ ಸ್ನೇಹಿತ ಏಕೆಂದರೆ ನಾನು ಅತ್ತಾಗ, ಅದು ನನ್ನ ನೋಡಿ ಎಂದಿಗೂ ನಗುವುದಿಲ್ಲ. ನೀರು ತುಂಬಾ ಐಷಾರಾಮಿ ಅಲ್ಲ ಆದರೆ ಜೀವನಕ್ಕೆ ತುಂಬ ಮೌಲ್ಯಯುತವಾಗಿದೆ ಎಂದು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಬರೆದುಕೊಂಡಿದ್ದಾರೆ.

ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲು ಸೇರಿ ಬಳಿಕ ಪತಿ ದರ್ಶನ್‌ ಮೇಲಿನ ಬೇಸರದಿಂದಾಗಿ ವಿಜಯಲಕ್ಷ್ಮಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್​ನ ಅನ್​ಫಾಲೋ ಮಾಡಿದ್ದರು. ಅಲ್ಲದೇ ಇನ್​ಸ್ಟಾಗ್ರಾಮ್ ಪ್ರಾಫೈಲ್‌ ಪಿಕ್ಚರ್‌ ರನ್ನು ಡಿಲೀಟ್‌ ಮಾಡಿದ್ದು, ಇದೀಗ ದರ್ಶನ್‌ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದಾರೆ.

ಆಗಾಗ ಚಂದದ ಫೋಟೋಸ್ ಹಾಗೂ ವಿಡಿಯೋಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಇನ್ನೂ ವಿಜಯಲಕ್ಷ್ಮಿ ಅವರ ಫೋಸ್ಟ್‌ ನೋಡಿ ದರ್ಶನ್‌ ಫ್ಯಾನ್ಸ್‌ ವಿಜಯಲಕ್ಷ್ಮೀ ಅವರಿಗೆ ಮುಂದಿನ ವರ್ಷ ಸೂಪರ್‌ ಆಗಿರುತ್ತೆ ಎಂದು ಕಮೆಂಟ್‌ ಮಾಡಿದ್ದಾರೆ. ಅಲ್ಲದೇ ವಿಜಯಲಕ್ಷ್ಮಿ ಅವರು ತಮ್ಮ ಪತಿಗಾಗಿ ಎದುರಿಸಿದ ಸವಾಲುಗಳ ಕುರಿತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+