Vijay Sethupathi: ವರ್ಷಗಳಿಂದ ಯುವತಿ ಬಳಸಿಕೊಂಡ ವಿಜಯ್ ಸೇತುಪತಿ: ಗಂಭೀರ ಆರೋಪ
Vijay Sethupathi News: ಹೊರಗಿನಿಂದ ಸುಂದರವಾಗಿ ಕಾಣುವ ಬಣ್ಣದ ಲೋಕದ ಒಳಗಿರುವ ಅನೇಕರು ಸಾಕಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ಆಗಾಗ ಸದ್ದು ಮಾಡುವ ಕಾಸ್ಟಿಂಗ್ ಕೌಚ್ ವಿಚಾರ ಇದೀಗ ಕಾಲಿವುಡ್ ಖ್ಯಾತ ನಟ ವಿಜಯ್ ಸೇತುಪಥಿಗೆ ಉರುಳಾಗುವ ನಿರೀಕ್ಷೆ ಇದೆ. ಕ್ಯಾರವಾನ್ ಪೇವರ್‌ಗಾಗಿ ಹಣ ನೀಡಿ ಮಹಿಳೆ ಬಳಸಿಕೊಂಡಿದ್ದಾರೆ ಎಂಬ ಕಾಸ್ಟಿಂಗ್ ಕೌಚ್ ಆರೋಪ ವಿಜಯ್ ಸೇತುಪಥಿ ವಿರುದ್ಧ ಕೇಳಿ ಬಂದಿದೆ. ಹಾಗಾದ್ರೆ ಯಾರು ಈ ಆರೋಪ ಹೊರಿಸಿದ್ದು, ಕಾಲಿವುಡ್‌ನಲ್ಲಿ ಏನೆಲ್ಲ ನಡೆಯುತ್ತಿದೆ. ವಿಜಯ್ ಮೇಲಿನ ಆರೋಪಗಳ ಪೂರ್ಣ ಮಾಹಿತಿ ಇಲ್ಲಿದೆ.
ನಟ ವಿಜಯ್ ಸೇತುಪಥಿ ಮೇಲೆ ರಮ್ಯಾ ಮೋಹನ್ ಎಂಬುವವರು ಇಂಥದ್ದೊಂದು ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟ್ (ಎಕ್ಸ್) ಪೋಸ್ಟ್ ಶೇರ್ ಮಾಡಿಕೊಂಡು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಕಾಲಿವುಡ್, ಲೈಂಗಿಕ ದೌರ್ಜನ್ಯ, ನಶೆ, ಡ್ರಗ್ಸ್, ಕಾಸ್ಟಿಂಗ್ ಕೌಚ್ ಸೇರಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಮಹಿಳೆ ಮೇಲಿನ ದೌರ್ಜನ್ಯ ವಿಚಾರದಲ್ಲಿ ನಟ ವಿಜಯ್ ಸೇತುಪಥಿ ಹೆಸರು ಉಲ್ಲೇಖಿಸಿ ಆರೋಪಿಸಿದ್ದರು.

ನಿರಂತರ ಯುವತಿ ಬಳಸಿಕೊಂಡಿದ್ದ ನಟ ವಿಜಯ್: ಆರೋಪ
ಸಿನಿಮಾ ಜಗತ್ತಿಗೆ ವಿಷಕಾರಿಯಾದ ಕಾಸ್ಟಿಂಗ್ ಕೌಚ್‌ನಲ್ಲಿ ವಿಜಯ್ ಸೇತುಪಥಿ ಸಹ ಇದ್ದಾರೆ ಎಂದಿದ್ದಾರೆ. ನನಗೆ ಗೊತ್ತಿರುವ ಯುವತಿ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ. ಆಕೆ ಈಗ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿದ್ದಾರೆ. ರಮ್ಯಾ ಮೋಹನ್ ಅವರ ಪೋಸ್ಟ್ ಚರ್ಚೆ ಆಗುತ್ತಿದ್ದಂತೆ ಅವರು ಪೋಸ್ಟ್ ಅಳಿಸಿಹಾಕಿದ್ದಾರೆ.
ಆ ಯುವತಿಯನ್ನು ಪರಿಚಯವೇ ಇಲ್ಲದೇ ಸಿನಿಮಾದ ಈ ಜಗ್ಗತ್ತಿಗೆ ಕರೆತರಲಾಯಿತು. ಇಲ್ಲಿ ಡ್ರಗ್ಸ್, ದುರ್ಬಲರ ಶೋಷಣೆ, ಕಾಸ್ಟಿಂಗ್ ಕೌಚ್ ಸಾಮಾನ್ಯವಾಗಿಬಿಟ್ಟಿದೆ. ಇದೆಲ್ಲವು ತಮಾಷೆಯ ವಿಷಯವಲ್ಲ. ವಿಜಯ್ ಸೇತುಪಥಿ ಕ್ಯಾರವಾನ್ ಪೇವರ್ಸ್‌ಗಾಗಿ ಎರಡು ಲಕ್ಷ ರೂಪಾಯಿ ನೀಡಿದ್ದರು. ಅಲ್ಲದೇ ವರ್ಷಗಳಿಂದ ಆಕೆಯನ್ನು ಬಳಸಿಕೊಂಡಿದ್ದಾರೆ. ಇದೀಗ ಆಕೆ ಪುನರ್ವಸತಿಯಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲ ಆದರೂ ಸಹಿತ ಈ ನಟನನ್ನು ಉತ್ತಮ ಭಾವನೆಯಿಂದ, ಸಂತನಂತೆ ಗೌರಿವಸಲಾಗುತ್ತದೆ ಎಂದು ಅವರು ದೂರಿದ್ದಾರೆ.
ಲೈಂಗಿಕತೆ-ಮಾದಕ ವ್ಯಸನ, ಸಿನಿಮಾ ರಂಗಕ್ಕೆ ನಂಟಿದೆ ಎಂದು ಕಾಲಿವುಡ್ ಮೇಲೂ ಆರೋಪಿಸುತ್ತಿದ್ದಂತೆ ಈ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಯಿತು, ವಿವಾದ ಹುಟ್ಟಿಕೊಂಡಿತು. ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದವು. ವ್ಯಾಪಕ ಚರ್ಚೆಗಳು ಶುರುವಾಗುತ್ತಿದ್ದಂತೆ ರಮ್ಯಾ ಮೋಹನ್ ತಮ್ಮ ಟ್ವಿಟ್ ಡಿಲೀಟ್ ಮಾಡಿದರು. ಸದ್ಯ ವಿಜಯ್ ಸೇತುಪಥಿ ಅವರು ಈ ಬಗ್ಗೆ ಪ್ರತಿಕ್ರಿಯ ನೀಡಿಲ್ಲ ಎಂದು ವರದಿ ಆಗಿದೆ.












Click it and Unblock the Notifications