UI Movie: ಅಭಿಮಾನಿಗಳಿಗೆ ಉಪೇಂದ್ರ ಥಿಯೇಟರ್ ಬಿಟ್ಟು ತೊಲಗಿ ಅಂತಾ ಹೇಳಿ....
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಲು 'ಯುಐ' ಮೂಲಕ ಮತ್ತೆ, ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಎಂಟ್ರಿ ಕೊಟ್ಟಿದ್ದಾರೆ. 'ಯುಐ' ಸಿನಿಮಾನ ನೋಡಿ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಥ್ರಿಲ್ ಆಗಿ ರಿಯಾಕ್ಷನ್ ಕೊಡುತ್ತಿದ್ದಾರೆ. ಹೀಗಾಗಿ ಮಂಡ್ಯ ಟು ಇಂಡಿಯಾ 'ಯುಐ' ಸಿನಿಮಾ ದೊಡ್ಡ ಸೌಂಡ್ ಮಾಡುತ್ತಿದೆ. ಹೀಗಿದ್ದಾಗಲೇ, ಅಭಿಮಾನಿಗಳಿಗೆ ಉಪೇಂದ್ರ ಥಿಯೇಟರ್ ಬಿಟ್ಟು ತೊಲಗಿ ಅಂತಾ ಹೇಳಿ....
ಕನ್ನಡಿಗರ ನಿರೀಕ್ಷೆ ಕೆರಳಿಸಿದ್ದ 'UI' ಸಿನಿಮಾ ನಿರೀಕ್ಷೆಯ ನಿಜ ಮಾಡಿ, ಉಪೇಂದ್ರ ಅವರು ಈ ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ಹಾಕಿ, ಸಕ್ಸಸ್ ಆಗುವ ಜೊತೆಗೆ ದೊಡ್ಡ ಸದ್ದು ಮಾಡಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸಂಚಲನ ಸೃಷ್ಟಿ ಮಾಡುವ ಸುದ್ದಿ ಇದೀಗ ಹೊರ ಬಿದ್ದಿದೆ. ಅದು ಏನಪ್ಪಾ ಅಂದ್ರೆ 'ಯುಐ' ಸಿನಿಮಾ ಆರಂಭದಲ್ಲೇ, ಅಭಿಮಾನಿಗಳಿಗೆ ಉಪೇಂದ್ರ ಥಿಯೇಟರ್ ಬಿಟ್ಟು ತೊಲಗಿ ಅಂತಾ ಹೇಳಿ....

ಉಪೇಂದ್ರ ಥಿಯೇಟರ್ ಬಿಟ್ಟು ತೊಲಗಿ ಅಂತಾ...
ಹೌದು, 'ಯುಐ' ಸಿನಿಮಾ ಇದೀಗ ಅದ್ಧೂರಿಯಾಗಿ ಸಾವಿರಾರು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಅಭಿಮಾನಿಗಳು ಕೂಡ ಸೂರ್ಯ ಹುಟ್ಟುವ ಮೊದಲೇ ಉಪೇಂದ್ರ ನಿರ್ದೇಶನ ಮಾಡಿರುವ ಸಿನಿಮಾ ನೋಡಲು ಓಡೋಡಿ ಹೋಗಿದ್ದರು. ಇಂತಹ ಸಮಯದಲ್ಲೇ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಫೋಟೋ ಸಹಿತ ಇದೀಗ ಓಡಾಡುತ್ತಿದೆ!
ಉಪೇಂದ್ರ ಸಿನಿಮಾ ಓಪನಿಂಗ್....
ಅಂದಹಾಗೆ 'ಯುಐ' ಸಿನಿಮಾದ ಆರಂಭದಲ್ಲೇ 'If You Are Intelligent, Get Out Of The Theatre Right Now' ಅನ್ನೋ ಮೆಸೇಜ್ ಥಿಯೇಟರ್ ಸ್ಕ್ರೀನ್ ಮೇಲೆ ರಾರಾಜಿಸಿದೆ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಪೋಸ್ಟ್ ಹಾಕುತ್ತಿದ್ದಾರೆ. ಹಾಗಾದ್ರೆ 'If You Are Intelligent, Get Out Of The Theatre Right Now' ಅಂತಾ ಹೇಳಿದ್ರೆ ಅರ್ಥ ಏನು ಬರುತ್ತೆ ಗೊತ್ತೆ? ಬಹುತೇಕರಿಗೆ ಅರ್ಥ ಗೊತ್ತಿರುತ್ತದೆ, ಆದರೂ ಗೊತ್ತಿಲ್ಲದವರು ಮುಂದೆ ಓದಿ.
'If You Are Intelligent Get Out Of The Theatre Right Now' ಅಂತ ಹೇಳಿದ್ರೆ 'ನೀವು ಬುದ್ಧಿವಂತರಾಗಿದ್ದರೆ, ಕೂಡಲೇ ಥಿಯೇಟರ್ ಬಿಟ್ಟು ಹೊರ ಹೋಗಿ' ಅನ್ನೋ ಅರ್ಥ ಬರುತ್ತೆ. ಹೀಗಿದ್ದಾಗ ಕೆಲವರು ಈ ಮೆಸೇಜ್‌ನ ಸೋಷಿಯಲ್ ಮೀಡಿಯಾಗಳಲ್ಲಿ 'ಥಿಯೇಟರ್ ಬಿಟ್ಟು ತೊಲಗಿ' ಅನ್ನೋ ಅರ್ಥದಲ್ಲಿ ಹೇಳುತ್ತಿದ್ದಾರೆ. ಆದರೆ... ಈ ಕುರಿತು ಯಾವುದೇ ಸ್ಪಷ್ಟನೆಯೂ ಸಿಕ್ಕಿಲ್ಲ. ಹೀಗಾಗಿ, ನೀವು ಕೂಡ 'ಯುಐ' ಸಿನಿಮಾ ಪೂರ್ತಿಯಾಗಿ ನೋಡಿ ನಿರ್ಧಾರ ಮಾಡಿ ಅಂತಾ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಈ ರೀತಿಯ ಪೋಸ್ಟ್ & ಕಮೆಂಟ್‌ಗಳಿಗೆ ರಿಯಾಕ್ಷನ್ ಕೊಡುತ್ತಿದ್ದಾರೆ.
ತೆಲುಗು, ತಮಿಳು, ಮಲಯಾಳಂ....
ಹೌದು, ಉಪೇಂದ್ರ 'ಯುಐ' ಸಿನಿಮಾದಲ್ಲಿ ನೂರಾರು ದಾಖಲೆ ಬರೆದಿದ್ದಾರೆ. ಅದೇ ರೀತಿ, ಯುಐ ಸಿನಿಮಾ ಕೂಡ ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಜಗತ್ತಿನ ಹಲವು ಭಾಷೆಗಳ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಅಲ್ಲದೆ, ಪ್ರಪಂಚದ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ ಅಂತಾ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ ಅಭಿಮಾನಿಗಳು.












Click it and Unblock the Notifications